Skip to main content

Posts

Showing posts with the label Addicted drinker and Ocassional drinkers are seperate but..

Blog number 1438. ಕುಡುಕರು ಬೇರೆ... ಕುಡಿಯೋರು ಬೇರೆ... ಕುಡುಕರಿಂದ ಕುಡಿಯೋರ ಮರ್ಯಾದೆ ಹೋಗುತ್ತಿದೆ... ಜೆ ಹೆಚ್ ಪಟೇಲರು

#ಕುಡುಕರಿಂದ_ಕುಡಿಯೋರ_ಮಯಾ೯ದೆ_ಹೋಗ್ತಾ_ಇದೆ#                      - ಜೆ.ಹೆಚ್.ಪಟೇಲರು            ಶಿವಮೊಗ್ಗದಲ್ಲಿ ಮಿತ್ರ ಬ್ಯಾಂಕ್ ಕೃಷ್ಣಮೂರ್ತಿ ಅವರ ಕದ೦ಬ ಹೋಟೆಲ್ ಶಿವಮೊಗ್ಗದ ಮಲವಕೊಪ್ಪದ ರಾಷ್ಟೀಯ ಹೆದ್ದಾರಿಯಲ್ಲಿ ಉದ್ಫಾಟನೆ ಕಾರ್ಯಕ್ರಮ ಇತ್ತು ಅಲ್ಲಿ ಜೆ.ಹೆಚ್.ಪಟೇಲರ ಒಡನಾಡಿ ಸಂಯುಕ್ತ ಜನತಾದಳದ ಲೋಕಪಾಲ ಜೈನರ ಭಾಷಣ ಅವತ್ತಿನ ಸಭೆಯ ಹೈಲೆಟ್ ಆಗಿತ್ತು.          ಸಭೆಯಲ್ಲಿ ಅನೇಕ ಗೌರವಾನ್ವಿತ ದಂಪತಿಗಳು ಉಪಸ್ಥಿತರಿದ್ದರು.          ಅವರು ತಮ್ಮ ಬಾಷಣದ ಪ್ರಾರಂಭದಲ್ಲಿ ಕುಡಿಯೋರೆ ಬೇರೆ ಕುಡುಕರೇ ಬೇರೆ ಆದರೆ ನೀವು ಹೆಣ್ಣು ಮಕ್ಕಳು ಕುಡಿಯೋರನ್ನೆಲ್ಲ ಕುಡುಕರ ಸಾಲಿಗೆ ಸೇರಿಸಿ ಬಿಡುತ್ತೀರಿ ಇದನ್ನ ಪಟೇಲರು ಒಂದು ಘಟನೆಯಲ್ಲಿ ಹೇಳಿದ್ದು ನೆನಪಾಯಿತು ಕೇಳಿ ಅಂತ ಶುರುಮಾಡಿದರು.             ಆಗ ಶಾಸಕರ ಭವನದಿಂದ ಮೆಜೆಸ್ಟಿಕ್ ತನಕ ಜನ ಸಂಚಾರ ವಿರಳ ಸಂಜೆ 8 ಆಗುತ್ತಿದ್ದಂತೆ ಪಟೇಲರು ಕೋಡೇಸ್ xxx ರಂ ತರಲು ಹುಡುಗರಾದ ನಮ್ಮ ಹತ್ತಿರ ಹಣ ಕೊಟ್ಟು ಕಳಿಸಿದ್ದರು ನಾವು ತೆಗೆದುಕೊಂಡು ಬರುವಾಗ ಶಾಸಕರ ಭವನದ ಎದರು ಇಬ್ಬರು ಹೊಟ್ಟೆ ತುಂಬಾ ಕುಡಿದು ಕೊಂಡು ಜಗಳವಾಡುತ್ತಿದ್ದರಂತೆ ಅದನ್ನ ಇವರೆಲ್ಲ ನೋಡ...