Skip to main content

Posts

Showing posts with the label Cyril d costa my father S.Krishnappa close friend and both were ANANDAPURAM village panchayat elected members in 1972

Blog number 2156. ನನ್ನ ತಂದೆಯ ಆಪ್ತ ಗೆಳೆಯರು ಸಿರಿಲಣ್ಣ, ಇವರಿಬ್ಬರೂ ಆನಂದಪುರಂ ವಿಲೇಜ್ ಪಂಬಾಯಿತ ಸದಸ್ಯರಾಗಿದ್ದಾಗ ನಮ್ಮ ಊರಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿಸಿದ್ದರು ಅದರಲ್ಲಿ ಡುಮಿಂಗಣ್ಣನಿಗೆ ಜಾಗ ಮನೆ ಮಾಡಿಸುವಾಗ ಇವರಿಗಾದ ಅನುಭವಗಳು ಕೇಳಿ

#ಆನಂದಪುರಂ_ವಿಲೇಜ್_ಪಂಚಾಯಿತಿ_ಮಾಜಿ_ಸದಸ್ಯರಾದ #ಸಿರಿಲಣ್ಣ_ನನ್ನ_ತಂದೆಯ_ಗೆಳೆಯರು_ಬಂದಿದ್ದರು  #ನೆನಪಿಗೆ_ಬಂದ_ಡುಮಿಂಗಣ್ಣರ_ಜನತಾ_ಮನೆ_ಕಥೆ #ತಿರುಮಲಾಚಾರ್_ಅಧ್ಯಕ್ಷರಾಗಿದ್ದರು. #ಟಿಪ್_ಟಾಪ್_ಇಬ್ರಾಹಿಂ_ಸಾಹೇಬರು_ಉಪಾಧ್ಯಕ್ಷರಾಗಿದ್ದರು #ಎಲ್_ಟಿ_ತಿಮ್ಮಪ್ಪ_ಹೆಗ್ಗಡೆ_ಶಾಸಕರಾಗಿದ್ದರು. #ಮಲಂದೂರಿನ_ಶಿವಾಜಿ_ರಾವ್_ಗುತ್ತಿಗೆದಾರರು. https://youtu.be/HY0-pdL9whc?feature=shared.   ಸಿರಿಲಣ್ಣರ ನಿಜ ನಾಮ ಸಿರಿಲ್ ಡಿಕಾಸ್ಟಾ ಇವರು ಉಡುಪಿ ಜಿಲ್ಲೆಯ ಬಾರ್ಕೂರು ಸಮೀಪದ ಬೆಣ್ಣೆ ಕುದ್ರು ಮೂಲದವರು.   ಆನಂದಪುರಂನ ಪ್ರಖ್ಯಾತ ಖಾಲಿ ದೋಸೆ ಹೋಟೆಲ್ ಕಾಮತ್ ಹೋಟೆಲ್ ಪಕ್ಕ ಇವರ ಸೈಕಲ್ ಶಾಪ್ ತುಂಬಾ ಪ್ರಸಿದ್ದಿ ಪಡೆದಿತ್ತು.    1972 ರಲ್ಲಿ ಆನಂದಪುರಂ ವಿಲೇಜ್ ಪಂಚಾಯಿತಿಗೆ ಈಗಿನ ಯಡೇಹಳ್ಳಿ ಆಚಾಪುರ ಗ್ರಾಮ ಪಂಚಾಯಿತಿಗಳು ಸೇರಿತ್ತು ಆ ಚುನಾವಣೆಯಲ್ಲಿ ಸಿರಿಲಣ್ಣ ಆನಂದಪುರಂ ಪೇಟೆ ಕ್ಷೇತ್ರದಿಂದ ಆಯ್ಕೆ ಆಗಿದ್ದರು.   ಅದೇ ಚುನಾವಣೆಯಲ್ಲಿ ನನ್ನ ತಂದೆ S. ಕೃಷ್ಣಪ್ಪನವರು ಯಡೇಹಳ್ಳಿ - ತಾವರೆಹಳ್ಳಿ - ಕೊರಲಿಕೊಪ್ಪ-ಗೇರುಬೀಸು ಸೇರಿದ ದೊಡ್ಡ ಕ್ಷೇತ್ರದಿಂದ ನನ್ನ ತಂದೆ ಅತಿ ಹೆಚ್ಚು ಮತಗಳಿಂದ ಆರಿಸಿ ಬಂದಿದ್ದರು.   ಆವಾಗಿನ ಆನಂದಪುರಂ ವಿಲೇಜ್ ಪಂಚಾಯಿತಿ ಅಧ್ಯಕ್ಷರು ತಿರುಮಲಾಚಾರ್ ಅಯ್ಯಂಗಾರ್ ಮತ್ತು ಉಪಾಧ್ಯಕ್ಷರಾಗಿ ಆಚಾಪುರದಿಂದ ಆಯ್ಕೆ ಆಗಿದ್ದ ಟಿಪ್ ಟಾಪ್ ...