Blog number 1074. ಹಸ್ತ ಸಾಮೂದ್ರಿಕ ಜ್ಯೋತಿಷ್ಯ ಸತ್ಯವೋ ಸುಳ್ಳೋ ಗೊತ್ತಿಲ್ಲ ಆದರೆ ಹಸ್ತದ ಬೆರಳಚ್ಚು ಮಾತ್ರ ಒಬ್ಬರಂತೆ ಇನ್ನೊಬ್ಬರದ್ದಿರುವುದಿಲ್ಲ ಎಂಬ ವೈಜ್ಞಾನಿಕ ಸಬೂತು ಆದಾರ ಕಾರ್ಡಿಗೆ, ಆಸ್ತಿ ನೊಂದಾವಣೆಗೆ ಬೆರಳಚ್ಚು ಬೇಕೇ ಬೇಕು, ನನ್ನ ಹಸ್ತ ಸಾಮೂದ್ರಿಕ ಹೇಳಿದ ಗೂರಪ್ಪಣ್ಣ .
#ಕೈ_ಬೆರಳ_ರೇಖೆ_ವಿಶೇಷ #ಆದಾರ್_ಕಾರ್ಡಿಗೂ_ಆಸ್ತಿ_ನೊಂದಾವಣಿಗೂ_ಹೆಬ್ಬೆರಳಚ್ಚು_ಬೇಕು #ಕ್ರಿಸ್ತ_ಪೂರ್ವದಿಂದ_ಇರುವ_ಹಸ್ತ_ಸಾಮೂದ್ರಿಕ_ಜೋತಿಷ್ಯ #ನಿನ್ನ_ಆಯಸ್ಸು_95_60ನೇ_ವಯಸ್ಸಿಗೆ_ನಿದಿ_ಸಿಗುತ್ತೆ #ಮನಸ್ಸ೦ತೋಷದ_ನುಡಿಗಳು #ನನ್ನ_ಹಸ್ತ_ನೋಡಿ_ಜೋತಿಷ್ಯ_ಹೇಳಿದ_ಗೂರಪ್ಪಣ್ಣ ಹಸ್ತ ಸಾಮೂದ್ರಿಕ ಪಾಮ್ ಹಿಸ್ಟರಿಗೆ ಕ್ರಿಸ್ತ ಪೂವ೯ ಗ್ರೀಕ್ ಚರಿತ್ರೆಯಲ್ಲೂ ಉಲ್ಲೇಖವಿದೆ ಭಾರತೀಯರಲ್ಲಿ ಹಸ್ತ ಸಾಮೂದ್ರಿಕ ಜ್ಯೋತಿಷ್ಯ ನಂಬುವ ದೊಡ್ಡ ವರ್ಗವಿದೆ ಅದರಂತೆ ಹಸ್ತ ಸಾಮೂದ್ರಿಕ ಶಾಸ್ತ್ರ ವಂಶ ಪಾರಂಪರ್ಯವಾಗಿ ಹೇಳುತ್ತಾ ಬಂದಿರುವ ಜನರೇ ಇದ್ದಾರೆ. ಹಸ್ತ ಸಾಮೂದ್ರಿಕ ಸುಳ್ಳು ಅ೦ತನೂ ಹೇಳುತ್ತಾರೆ ಆದರೆ ಒಬ್ಬನ ಬೆರಳಚ್ಚಿನಂತೆ ಇನ್ನೊಬ್ಬನದ್ದು ಇರಲು ಸಾಧ್ಯವೇ ಇಲ್ಲ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ ಆದ್ದರಿಂದ ಆಸ್ತಿ ನೊಂದಾವಣೆಯಲ್ಲಿ, ಆದಾರ ಕಾರ್ಡ್ ನಲ್ಲಿ ಬೆರಳಚ್ಚು ಬೇಕೇ ಬೇಕು. ಆದ್ದರಿಂದ ಹಸ್ತ ಸಾಮೂದ್ರಿಕ ಶಾಸ್ತ್ರ ಸುಳ್ಳಲ್ಲ ಅಂತೆನಿಸುವುದು ಸಹಜ. ನಮ್ಮ ಗೂರಪ್ಪಣ್ಣ ಆಲಿಯಾಸ್ ದೊಡ್ಡ ಗೂರಪ್ಪಣ್ಣ ನಿನ್ನೆ ಬಂದಿದ್ದರು ಇವರ ಬಗ್ಗೆ ಈ ಹಿಂದೆ ಒಂದು ಲೇಖನ ಪ್ರಕಟಿಸಿದ್ದೆ ಇವರು ಕನ್ನಡದ ಬಹುತೇಕ ಎಲ್ಲಾ ಪ್ರಸಿದ್ದ ಸಾಹಿತಿಗಳ ಸಾಹಿತ್ಯ ಓದಿದ್ದಾರೆ ಅಷ್ಟೆ ಅಲ್ಲ ಅವುಗಳನ್ನು ತಮ್ಮ ವಿಶೇಷ ನೆನಪಿನ ಶಕ್ತಿಯಿಂದ ವಿಮರ್ಷೆ ಕೂಡ ಮಾಡುತ್ತಾರೆ ಇವರ ಮಾತೃ ಬಾಷೆ ತೆಲಗು . ...