#ಆನಂದಪುರಂ_ಇತಿಹಾಸ_ಭಾಗ_100. https://youtu.be/-vztlvQjXJU #ನಮ್ಮ_ಊರಿನಲ್ಲಿ_ಬೃಹತ್_ಶಿಲಾಮಯ_ಸೆಂಗೋಲ್_ಇದೆ. #ಕೆಳದಿ_ಅರಸರು_ಉಂಬಳೆ_ನೀಡಿದ_ಹಳ್ಳಿಯಲ್ಲಿದೆ. #ಇದನ್ನು_ನಿರ್ಮಿಸಿದವರು_ಕೆಳದಿ_ಅರಸರಾ ? #ನಂದಿದ್ವಜ_ದರ್ಮದಂಡ_ಸೆಂಗೋಲ್_ಹೆಚ್ಚು_ಚರ್ಚೆಯ_ಕಾಲದಲ್ಲಿ. ಹೊಸ ಪಾರ್ಲಿಮೆಂಟ್ ನಲ್ಲಿ ಸ್ಪೀಕರ್ ಬಲ ಬಾಗದಲ್ಲಿ ಪ್ರದಾನಿ ಮೋದಿಯವರು ಪ್ರತಿಷ್ಟಾಪಿಸಿದ ರಾಜ ಧಂಡ/ ಧರ್ಮ ಧಂಡ/ ನಂದಿಧ್ವಜ / ಸೆಂಗೋಲ್ ಬಗ್ಗೆ ಹೆಚ್ಚಿನ ಚಚೆ೯ ಆಗುವಾಗಲೇ ನನಗೆ ನೆನಪಾಗಿದ್ದು ನಮ್ಮ ಗ್ರಾಮ ಪಂಚಾಯಿತಿ ಯಡೇಹಳ್ಳಿಯ ಘಂಟಿನಕೊಪ್ಪದ ಸಮೀಪದ ಕೆರೆಕೊಪ್ಪದ ಖಾತೆ ಕಾನೂನಿನಲ್ಲಿ ಶಿಲಾಮಯ ನಂದಿ ಧ್ವಜ ಒಂದನ್ನು 1995 - 2000 ಇಸವಿಯಲ್ಲಿ ನೋಡಿದ ನೆನಪಾಯಿತು. ಈ ಗ್ರಾಮ ಪಂಚಾಯಿತಿ ಸದಸ್ಯ - ಉಪಾಧ್ಯಕ್ಷ - ಈ ಭಾಗದ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಆಯಾ ಗ್ರಾಮದಲ್ಲಿ ವರ್ಷಕ್ಕೊಮ್ಮೆ ಪಾದಯಾತ್ರೆ ನಡೆಸುತ್ತಿದ್ದೆ ಅದರಿಂದ ಅನೇಕ ಹೊಸ ವಿಚಾರ ತಿಳಿಯಲು, ಸ್ಥಳಿಯರ ಸಮಸ್ಯೆ - ಬೇಡಿಕೆಗಳ ಪಟ್ಟಿ ಮಾಡಲು ಮತ್ತು ಸ್ಥಳಿಯರ ಜೊತೆ ಬೆರೆಯಲು ಸಹಕಾರಿ ಆಗುತ್ತಿತ್ತು. ಆಗ ಊರಿನ ಪ್ರಮುಖರ ಜೊತೆ ಆ ಕಾಡಿನಲ್ಲಿ 10 ಅಡಿ ಎತ್ತರದ ಬೃಹತ್ ಶಿಲಾಮಯ ನಂದಿ ಧ್ವಜ ನೋಡಿದ್ದೆ , ಇದಕ್ಕೆ ವರ್ಷಕ್ಕೊಮ್ಮೆ ಗ್ರಾಮಸ್ಥರು ಪೂಜೆ ಮಾಡುತ್ತಾರೆ, ಇಪ್ಪತ್ತು ವರ್ಷಗಳ ಹಿಂದೆ ದಟ್ಟ ಅರಣ್ಯದ ಮಧ್ಯೆ ಸೂರ್ಯನ ಕಿರಣಗಳು ತಾಗದಂತ...