Skip to main content

Posts

Showing posts with the label BBC RADIO COMENTORY ON HUMAN FIRST MOON WALK

BLOG ARTICLE 959. ಮಾನವನ ಮೊದಲ ಚಂದ್ರಯಾನದ ಬಿಬಿಸಿ ರೇಡಿಯೋದ ವೀಕ್ಷಕ ವಿವರಣೆ

# ಈ ಮೊದಲ ಚಂದ್ರ ಯಾನದ ರೇಡಿಯೋ ವೀಕ್ಷಕ ವಿವರಣೆ ಕೇಳಿದ ನೆನಪು #  ನಾನು ಹುಟ್ಟಿದ ದಿನಾ೦ಕ 9 ಪೆಬ್ರವರಿ 1965.    ಅವತ್ತು 20 ಜುಲೈ 1969 ಭಾರತೀಯ ಕಾಲಮಾನ ರಾತ್ರಿ 1.47 ಕ್ಕೆ ನೀಲ್ ಆಮ್೯ ಸ್ಟ್ರಾ೦ಗ್ ಚಂದ್ರನ ಮೇಲೆ ಮೊದಲ ಹೆಜ್ಜೆ ಊರಿದ ಮೊದಲ ಮಾನವ ಇವರನ್ನ ಚಂದ್ರಲೋಕಕ್ಕೆ ಕರೆದೊಯ್ದ ಅಂತರಿಕ್ಷ ನೌಕೆ ಅಪೋಲೋ 11. ಆದರೆ ಅವತ್ತು ನನ್ನ ವಯಸ್ಸು 4  ವಷ೯ 5 ತಿಂಗಳು 14 ದಿನ ನನಗೆ ಇದೆಲ್ಲ ಮಾಹಿತಿ ಅವತ್ತು ಇರಲಿಲ್ಲ.   ಬಿದನೂರು ನಗರದ ದೇವಗಂಗೆ ನನ್ನ ತಾಯಿ ತವರೂರೂ, ನನ್ನ ದೊಡ್ಡಮ್ಮನ ಮನೆ. ಅವತ್ತು ನಾವೆಲ್ಲ ನಮ್ಮ ತಾಯಿಯೊ೦ದಿಗೆ ಅಲ್ಲಿದ್ದೆವು, ಈ ಮಾನವ ಚಂದ್ರ ಯಾನದ ಬಗ್ಗೆ ತಿಳಿಯಲೆಂದೆ ನಮ್ಮಣ್ಣ ನಾಗರಾಜ್ ನಮ್ಮ ಮನೆ ಆನಂದಪುರದ ಯಡೇಹಳ್ಳಿಯ ಮನೆಯಿಂದ ರೇಡಿಯೋ ತಂದಿದ್ದ.   ದೇವಗಂಗೆಯ ದೊಡ್ಡಮ್ಮನ ಮನೆಯ ಎತ್ತರದ ಕಟಾ೦ಜನದಲ್ಲಿ ( ವಿದ್ಯುತ್ ಸಂಪಕ೯ ಇಲ್ಲದ ಆ ದಿನಗಳಲ್ಲಿ) ನಡು ರಾತ್ರಿ ನಮಗೆ ಅಥ೯ ಆಗದ ಇಂಗ್ಲೀಷ್ ಭಾಷೆಯ BBC ವೀಕ್ಷಕ ವಿವರಣೆ ಕೇಳುತ್ತಾ ನಮ್ಮಣ್ಣ ವಿಜಯೋತ್ಸವದ ಕೇಕೆ ಹಾಕಿ ನಮಗೆಲ್ಲ ಚಂದ್ರನ ಮೇಲೆ ಮನುಷ್ಯ ಇಳಿದ ಅಂದಾಗ ನಂಬಲು ಸಾಧ್ಯವೇ ಆಗಲಿಲ್ಲ.  ಸ್ವಲ್ಪ ಹೊತ್ತಲ್ಲಿ ಬಿದನೂರು ನಗರಕ್ಕೆ ಹೋಗಿದ್ದ ದೇವಗಂಗೆಯ ಯುವ ಪಡೆ ನಮ್ಮ ದೊಡ್ಡಣ್ಣ ಮಂಜುನಾಥರನ್ನ ಬಿಡಲು ಬಂದಿತ್ತು, ಅವರಲ್ಲಿ ಪಕೀರಣ್ಣ, ಜಗ್ಗಣ್ಣ ಮತ್ತು ಚಂದ್ರ ಶೆಟ್ಟರ ನೆನಪಿದೆ ಈಗಿನ ಜ್ಞಾನದಂತೆ...