#ನಿತ್ಯ_ಏಳು_ಸಾವಿರ_ಹೆಜ್ಜೆಯ_ವಾಕಿಂಗ್ #ನಿತ್ಯ_ವಾಕಿಂಗ್_ನನ್ನ_ಕ್ರಮ #ಎರೆಡು_ವರ್ಷದ_ನಿರಂತರ_ಸ್ವಪ್ರಯೋಗ. #ಇದು_ಉಪಯುಕ್ತ. #ಮನೆ_ಎದುರಿನ_ಹತ್ತು_ಹೆಜ್ಜೆಯ_ಜಾಗವೇ_ಸಾಕು. ನಿತ್ಯ ವಾಕಿಂಗ್ ಬಗ್ಗೆ ಅನೇಕರ ಅನೇಕ ರೀತಿಯ ಅಭ್ಯಾಸಗಳಿದೆ ಆದರೆ ನನಗೆ ಮನೆಯಿಂದ ಹೊರ ಹೋಗಿ ವಾಕಿಂಗ್ ಮಾಡಲು ಮೊದಲಿಂದಲೂ ಇಷ್ಟ ಇಲ್ಲ. ವಾಕಿಂಗ್ ತಡೆಯುವಂತೆ ಕೆಲವರು ಸಮಸ್ಯೆ ಹೇಳುತ್ತಾ ಇರುತ್ತಾರೆ ಅನ್ನುವುದು ಒ0ದು ಕಾರಣ ಇನ್ನೊಂದು ಬೆಳಗಿನ ರಸ್ತೆಗಳು ಪಾದಚಾರಿಗಳಿಗೆ ಸುರಕ್ಷಿತವೂ ಅಲ್ಲ. ಇದರಿಂದ ಮನೆ ಎದುರಿನ 10 ಹೆಜ್ಜೆ ಹಾಕುವ ಪಾರ್ಕಿಂಗ್ ಜಾಗದಲ್ಲೇ ವಾಕಿಂಗ್ ಮಾಡುತ್ತಿದೆ ಈಗ ಮನೆ ಹಿಂಬಾಗದಲ್ಲಿನ ಓಣಿಯಲ್ಲಿ ಪೇವಸ್೯ ಅಳವಡಿಸಿದ್ದರಿಂದ ಅಲ್ಲಿ 25 ಹೆಜ್ಜೆ ಹಾಕುವಷ್ಟು ಆಯಿತು ಅಲ್ಲಿ ಸಣ್ಣ ಸಣ್ಣ ಪಾಟ್ ಗಳಿಟ್ಟು ಸಣ್ಣ ಗಾರ್ಡನ್ ಮಾಡಿ ಅದರ ಮಧ್ಯ ಬೆಳಿಗ್ಗೆ 3500 ಹೆಜ್ಜೆ ಮತ್ತು ಸಂಜೆ 3500 ಹೆಜ್ಜೆ ವಾಕಿಂಗ್ ಮಾಡುತ್ತೇನೆ. ಒಟ್ಟು ದಿನಕ್ಕೆ 7000 ಹೆಜ್ಜೆ ಅಂದರೆ 5 ರಿಂದ 6 ಕಿ.ಮಿ. ಆಗುತ್ತದೆ, 3000 ಹೆಜ್ಜೆಗೆ 30 ನಿಮಿಷ ಬೇಕು, 1300 ರಿಂದ 1500 ಹೆಜ್ಜೆಗೆ 1 ಕಿ.ಮಿ. ಆಗುತ್ತೆ ಆದ್ದರಿಂದ ವಾಕಿಂಗ್ ಮಾಡಲು ಉದ್ಯಾನವನ ಅಥವ ಹೆದ್ದಾರಿ ಹುಡುಕಿ ಹೋಗಬೇಕಾಗಿಲ್ಲ. 7000 ಹೆಜ್ಜೆಯ ವಾಕಿಂಗ್ ಅನುಕೂಲದ ಬಗ್ಗೆ ಸಂಶೋದನೆ ಮಾಡಿದ ಯುನಿವರ್ಸಿಟಿ ಆಫ್ ಮೆಸ್ಸಾಚ್ಯೂಟ್...