ಚೊಮನ ದುಡಿ ಸಿನಿಮಾ ಶಿವರಾಂ ಕಾರಂತರ ಕಾದಂಬರಿ ಆದರಿತ ಸಿನಿಮಾ. ಆ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿತ್ತು, ಆಗ ಈ ಎಲ್ಲಾ ಸುದ್ದಿ ಆಕಾಶವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯ ಮೂಖಾ೦ತರ ಮಾತ್ರ ಗೊತ್ತಾಗಿತ್ತು. ಆಗೆಲ್ಲ ರೇಡಿಯೋ ಇದ್ದವರು ರೇಡಿಯೋ ಲೈಸೆನ್ಸ್ ಹೊಂದಿರ ಬೇಕಿತ್ತು ಮತ್ತು ಪ್ರತಿ ವಷ೯ ನವೀಕರಿಸಬೇಕಿತ್ತು, ಇದನ್ನ ಪರಿಶೀಲಿಸಲು ಅಂಚೆ ಇಲಾಖೆ ಇನ್ಸಸ್ಪೆಕ್ಟರ್ ಬರುತಿದ್ದರು, ಮನೆಯ ಮೇಲೆ ನೇತುಹಾಕುತ್ತಿದ್ದ ಬಲೆಯ೦ತಹ ಬಟ್ಟಿ ರೀತಿಯ ಅಂಟೆನಾ ನೋಡಿ ಆ ಮನೆಯಲ್ಲಿ ರೆಡಿಯೋ ಇದೆ ಅಂತ ಕಂಡು ಹಿಡಿತಿದ್ದರು. ನಮ್ಮ ಮನೇಲಿ ರೇಡಿಯೋ ಇತ್ತು ಹಾಗೆ ನಿತ್ಯ ಪ್ರಜಾವಾಣಿ ಪತ್ರಿಕೆ ಬರುತ್ತಿತ್ತು. ನಮ್ಮ ತಂದೆ ಮತ್ತು ತಾಯಿ ಶಿವರಾಮ ಕಾರಂತರ ಈ ಕಾದ೦ಬರಿ ಓದಿದ್ದರು ಮತ್ತು ಇದು ಸಿನಿಮಾ ಆಗಿದ್ದು, ರಾಷ್ಟ್ರ ಪ್ರಶಸ್ತಿ ಬಂದಿದ್ದು , ಸಿನಿಮಾದ ನಾಯಕ ನಟಿ ಪದ್ಮಾ ಕುಮುಟಾ ಸಾಗರದದವರು ಎಂಬುದು ಅವರಿಗೆ ಹೆಮ್ಮೆಯ ವಿಷಯವಾಗಿತ್ತು. ಅದೇ ಸ೦ದಭ೯ದಲ್ಲಿ ಈ ಸಿನೆಮಾ ಆನಂದಪುರಂಗೆ 10 ಕಿಮೀ ದೂರದ ರಿಪನ ಪೆಟೆಯ ಚಿತ್ರ ಮಂದಿರದಲ್ಲಿ ಈ ಸಿನೆಮಾ ಹಾಕಿದ್ದರು, ಅವತ್ತೇ ಕೊನೆ ದಿನ ಯಾಕೆಂದರೆ ಜನ ಈ ಸಿನೆಮಾ ನೋಡಲು ಹೆಚ್ಚು ಬರದಿದ್ದರಿಂದ ತೆಗಿತಾರೆ ಇವತ್ತೇ ಈ ಸಿನಿಮಾ ನೋಡೊಣ ತಯಾರಾಗಿ ಅಂತ ನಮ್ಮ ತಂದೆ ಹೇಳಿದಾಗ ನಾವೆಲ್ಲ ಹೊರಟೆವು. ಕ್ರಿಸ್ತಿನಾ ಬಾಯಿರವರ ಎತ್ತಿನ...