Skip to main content

Posts

Showing posts with the label Tragidy love story of keladi queen CHAMPAKA

#ಚOಪಕ ಸರಸ್ಸು ಕೆಳದಿ ರಾಣಿಯ ದುರಂತ ಪ್ರೇಮಕಥೆಯ ಸ್ಮಾರಕ ಜೋಗಿ ಜನಪದ ಸಂಗೀತ ಕಲಾವಿದ ನಾಗರಾಜ ತೋOಬ್ರಿ ಧ್ವನಿಯಲ್ಲಿ ಮತ್ತು ಕಿನ್ನರಿಯ ನಾದದೊಂದಿಗೆ #

ಜೋಗಿ ಜನಪದ ಸಂಗೀತ ಕಲಾವಿದ ಜಿ.ನಾಗರಾಜ ತೋoಬ್ರಿ. ಆನoದಪುರದ ಚಂಪಕ ಸರಸ್ಸು ಎಂಬ ಸುಂದರ ಕೊಳ, ಸ್ವಾಗತಿಸುವ ಕಲಾತ್ಮಕ ಕಲ್ಲಿನ ಜೋಡು ಆನೆ, ಕೊಳದ ಮದ್ಯದ ದೇವಾಲಯ, ಸುತ್ತುವರಿದ ಪಗಾರ, ದೇವರ ಕಣ್ಣು ಚಲನ ಚಿತ್ರದಲ್ಲಿ ಪ್ರಖ್ಯಾತ ಚಲನ ಚಿತ್ರಗೀತೆ "ಓ ಇನಿಯಾ ನೀ ಎಲ್ಲಿರುವೆ" ಹಾಡು 1970 ರ ದಶಕದಲ್ಲಿ ಚಿತ್ರಿಕರಣ ಆದ ಸ್ಥಳ ಈಗ ಪಾಳು ಬೀಳುವುದನ್ನ ಸ್ಥಳಿಯ ಕ್ರೀಯಾ ಶೀಲ ಯುವ ಪಡೆ ಪ್ರತಿ ವಷ೯ ಶ್ರಮದಾನದಿಂದ ಪ್ರವಾಸಿಗರ ವೀಕ್ಷಣೆಗೆ, ಸ್ಥಳಿಯರ ಈಜು ತರಬೇತಿಗೆ ವ್ಯವಸ್ಥೆಗೆ ಅನುವು ಮಾಡಿ ಸಾವ೯ಜನಿಕರ ಪ್ರಶಂಸೆಗೆ ಕಾರಣರಾಗಿದ್ದಾರೆ.     ಚಂಪಕ ಸರಸ್ಸು ಅಂದರೇನು? ಚಂಪಕ ಯಾರು ಎನ್ನುವ ಚಚೆ೯ ಆಗಾಗ್ಗೆ ಮುನ್ನಲೆಗೆ ಬಂದು ಮರೆತು ಹೋಗುತ್ತಿದೆ.   ಆನಂದಪುರದ ಹಿಂದುಳಿದ ಜಾತಿಯ ಸುಂದರ ತರುಣಿ ಚOಪಕಳು ಪ್ರತಿ ದಿನ ಮುಂಜಾನೆ  ರಾಜ ವೆಂಕಟಪ್ಪ ನಾಯಕ ಸಾಗಿ ಹೋಗುವ ರಾಜ ಮಾಗ೯ದ ಇತಿ ಹಾಸ ಪ್ರಸಿದ್ಧ ಗಂಗಾ ಮಠದ ಎದುರಿನ ಮನೆಯವಳು, ರಾಜರ ಸ್ವಾಗತಕ್ಕೆ ದಿನಕ್ಕೆ ಒಂದೊಂದು ರೀತಿ ಸುಂದರ ರಂಗೋಲಿ ಬಿಡಿಸಿ ಮರೆಯಲ್ಲಿ ವೀಕ್ಷಿಸುತ್ತಿದ್ದಳು ರಾಜ ವೆಂಕಟಪ್ಪ ನಾಯಕ ಗಂಗಾಮಠದ ಗಂಗಾಮಾತೆಗೆ ಬಲಕ್ಕೆ ತಿರುಗಿ ಕುದುರೆ ಮೇಲಿಂದ ತಲೆಬಾಗಿ ವ೦ದಿಸುವುದು ನಂತರ ಎಡಕ್ಕೆ ತಿರುಗಿ ಸುಂದರ ರಂಗೋಲಿ ವೀಕ್ಷಿಸುವುದು ಪದ್ದತಿ ಆಗಿ ಇದು ಪ್ರೇಮ ಕಥೆಗೆ ಕಾರಣವಾಗಿ ರಾಜವೆಂಕಟಪ್ಪ ನಾಯಕರು ಚಂಪಕಳನ್ನ ವರಸಿ ವಿವಾಹವಾಗಿ ಆನಂದಪುರದ ಕೋಟೆಯ ಅರ...