Skip to main content

Posts

Showing posts with the label Two months lockdown period is sufficient to prepation work for CORANA VIRUS treatment

ಲಾಕ್ ಡೌನ್ ಡೈರಿ - 36,ಎರೆಡು ತಿಂಗಳ ಲಾಕ್ ಡೌನ್ ಸಮಯ ಮುಂದಿನ ದಿನದಲ್ಲಿ ರೋಗ ನಿಯ೦ತ್ರಣಕ್ಕೆ ಬೇಕಾದ ಎಲ್ಲಾ ತಯಾರಿ ಮಾಡಿಕೊಳ್ಳಲು ಸಕಾ೯ರಕ್ಕೆ ಸಾಕಷ್ಟು ಕಾಲಾವಕಾಶ ಆಗಿತ್ತು ಇದನ್ನ ಸಕಾ೯ರಗಳು ಸದುಪಯೋಗ ಪಡಿಸಿಕೊಂಡಿರ ಬಹುದು!

ಕೊರಾನಾ ಲಾಕ್ ಡೌನ್ ಡೈರಿ -2020               ಲೆಟರ್ ನಂಬರ್- 36            ದಿನಾ೦ಕ: 18 -ಮೇ -2020 4ನೇ ಹಂತದ ಲಾಕ್ ಡೌನ್ ಪ್ರಾರಂಭ ಸುಮಾರು 2 ತಿಂಗಳ ಕಾಲಾವಕಾಶ ಸಕಾ೯ರ ಸದುಪಯೋಗ ಪಡಿಸಿ ಕೊ೦ಡಿತಾ?.        ಸುಮಾರು 2 ತಿಂಗಳು ಅಂದರೆ 60 ದಿನದ ಕಾಲಾವಕಾಶದಲ್ಲಿ ಸಕಾ೯ರ ಮುಂದಿನ ಹಂತದ ಪರೀಕ್ಷೇ ಮತ್ತು ಚಿಕಿತ್ಸೆಗಾಗಿ ಬೇಕಾದ ಪರಿಕರಗಳ ಸಂಗ್ರಹಣೆ ಮಾಡಿಕೊಳ್ಳುವುದು, ರೋಗ ಪೀಡಿತರನ್ನ ಕೊರಾ೦ಟೈನ್ ಗೆ ಸ್ಥಳ ಮತ್ತು ಚಿಕಿತ್ಸೆಗೆ ಸ್ಥಳ ಕಾಯ್ದಿರಿಸಲು ಬೇಕಾದಷ್ಟು ಸಮಯ ಆಗಿತ್ತು.    ಈ ಅವದಿಯಲ್ಲಿ ರೋಗಕ್ಕೆ ವ್ಯಾಕ್ಸಿನ್ ಕಂಡು ಹಿಡಿಯಲು ಸಂಶೋದನೆಗೂ ಕಾಲಾವಕಾಶ ಸಿಕ್ಕಿತ್ತು.   ಈ ಅವದಿಯಲ್ಲಿ ಯಾವುದೇ ಚಿಕಿತ್ಸೆ ಇಲ್ಲದ ಕಾಯಿಲೆಯನ್ನ ರೋಗದಿಂದ ದೂರ ಇರುವ ಮೂಲಕ ನಿಯ೦ತ್ರಿಸುವ ಏಕ ಮಾತ್ರ ಮಾಗ೯ದಿಂದ ಭಾರತದಲ್ಲಿ ಬೇರೆ ದೇಶಕ್ಕಿ೦ತ ಪರಿಣಾಮಕಾರಿ ಪಲಿತಾಂಶ ಪಡೆದಿದ್ದೇವೆ.    ವಿಶಾಲ ದೇಶ, ವಿಪರೀತ ಜನ ಸಂಖ್ಯೆ, ಸಾವಿರಾರು ಬಾಷೆ, ಆಹಾರ ಮತ್ತು ಆಚರಣೆಯ ಇವರನ್ನ ನಿಯ೦ತ್ರಿಸುವುದು ಸುಲಭವಲ್ಲ.  ಹೊಟ್ಟೆಪಾಡಿಗೆ ಉದ್ಯೋಗಕ್ಕಾಗಿ ಹೊರ ಹೋದವರಿಗೆ ವಾಪಾಸ್ ಅವರ ಊರಿಗೆ ತಲುಪಲು ಅವಕಾಶ ಮಾಡಿಕೊಡುವ ಹಂತದಲ್ಲಿ ರೋಗ ನಿಯಂತ್ರಣ ನಿರೀಕ್ಷೆಯOತೆ ಕೈ ಮೀರುತ್ತಿದೆ.  ...