Skip to main content

Posts

Showing posts with the label Padmavati lorry owner Ramanna no more

Blog number 1694. ನಮ್ಮ ಊರಿನ ಪದ್ಮಾವತಿ ಲಾರಿ ಮಾಲಿಕ ರಾಮಣ್ಣ ಇನ್ನಿಲ್ಲ.

#ಶ್ರದ್ಧಾಂಜಲಿಗಳು. #ಸಜ್ಜನ_ಮಿತಭಾಷಿ_ನಮ್ಮ_ಊರಿನ_ಪದ್ಮಾವತಿ_ಲಾರಿ_ಮಾಲಿಕ_ರಾಮಣ್ಣ. #ಚಾಮರಾಜ_ನಗರ_ಜಿಲ್ಲೆಯ_ಕಾಡಳ್ಳಿಯವರು. #ಆನಂದಪುರಂನ_ಗುತ್ತಿಗೆದಾರ_ಕೊಲ್ಲಾ_ಮೇಸ್ತ್ರಿಗಳ_ಲಾರಿ_ಡ್ರೈವರ್_ಮಾದಣ್ಣ_ಇವರ_ಅಣ್ಣ. #ಸೂರ್ಯಾಸ್ತದ_ನಂತರ_ಮತ್ತು_ಮಳೆಗಾಲದಲ್ಲಿ_ಲಾರಿ_ಓಡಿಸುತ್ತಿರಲಿಲ್ಲ #ದುಡ್ಡಿನ_ಹಪಾಹಪಿ_ಇಲ್ಲದ_ನಿರ್ಲಿಪ್ತ_ಮನುಷ್ಯ.    ಲಾರಿ ರಾಮಣ್ಣ ಅಂತನೇ ಆನಂದಪುರಂನಲ್ಲಿ ಪ್ರಸಿದ್ಧಿ ಆಗಿದ್ದ ಪದ್ಮಾವತಿ ಲಾರಿ ಮಾಲೀಕರಾದ ರಾಮಣ್ಣರ ಸ್ವಂತ ಊರು ಚಾಮರಾಜ ನಗರದ ಸಮೀಪದ ಕಾಡಳ್ಳಿ.    ಇವರ ಅಣ್ಣ ಮಾದಣ್ಣ ಆನಂದಪುರಂನ ಆ ಕಾಲದ ಗುತ್ತಿಗೆದಾರರಾದ ಕೊಲ್ಲಾ ಬೋವಿ ಮೇಸ್ತ್ರಿಗಳ ಲಾರಿ ಚಾಲಕರಾಗಿ ಬಂದವರು ನಂತರ ಚಿಕ್ಕ ಬಾಲಕನಾದ ಅವರ ತಮ್ಮ ರಾಮುನನ್ನ ಕರೆದುಕೊಂಡು ಬಂದು ತಮ್ಮ ಜೊತೆ ಕಂಡಕ್ಟರಾಗಿ ಇಟ್ಟುಕೊಂಡು ನಂತರ ಡ್ರೈವರ್ ಮಾಡುತ್ತಾರೆ.    ನಂತರ ಡ್ರೈವರ್ ಆದ ರಾಮಣ್ಣ ಬಹಳ ವರ್ಷ ಸೌದಿಯಿಂದ ಬಂದು ಲಾರಿ ಮಾಲಿಕರಾಗಿದ್ದ ಆನಂದಪುರಂ ರೋಡ್ ಲೈನ್ಸ್ ನ ಗೌಸು ಅವರ ಲಾರಿಯಲ್ಲಿ ಡ್ರೈವರ್ ಆಗಿದ್ದರು.    ಗೌಸ್ ಅವರ ಲಾರಿ ಆನಂದಪುರಂನ ಲಾಟೆರೇಟ್ (ಜಂಬಿಟ್ಟಿಗೆ) ಕಲ್ಲು ಸಾಗಾಣಿಕೆ ಮಾಡುತ್ತಿತ್ತು ಆಗ ಗೌಸ್ ಅವರ ರೂಲ್ಸ್ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾತ್ರ ಓಡಿಸಬೇಕಿತ್ತು, ಅವಸರ - ವೇಗದ ಚಾಲನೆ ಅವರಿಗೆ ನಿಶೇದವಾಗಿತ್ತು.   ನಂತರ ಸ್ವಂತ ಲಾರಿ ಖರೀದಿಸಿದ್ದ ರಾಮಣ್ಣ ಅ...