Blog number 1337. ನನ್ನ ಅನುಭವದ ಅತೀಂದ್ರಿಯ ಶಕ್ತಿ ಭಾಗ-1, ಆ ಗಟ್ಟಿ ಮುಟ್ಟಾದ ಮಾವಿನ ಮರ ಮಳೆ -ಗಾಳಿ ಇಲ್ಲದ ಬಿರು ಬೇಸಿಗೆಯಲ್ಲಿ ಬೀಳುತ್ತದೆಂದು ನನ್ನ ಒಳ ಮನಸ್ಸಿನಲ್ಲಿ ಅನ್ನಿಸಿ ಉಸಿರಾಟ ಎದೆ ಬಡಿತ ಜಾಸ್ತಿ ಮಾಡಿತ್ತು ನಂತರ ಮರ ಬಿದ್ದು ಮನಸ್ಸು ಸಹಜ ಸ್ಥಿತಿಗೆ ಬಂತು.
ಅತೀಂದ್ರಿಯ ಅನುಭವ ಭಾಗ -1. ಅತೀಂದ್ರಿಯ ಶಕ್ತಿ ನನ್ನಲಿದೆಯ? ಕೆಲವು ಘಟನೆಗಳು ಇದಕ್ಕೆ ಸಾಕ್ಷಿ ಆಗಿದೆ ಆದರೆ ಅದು ನನ್ನ ನಿಯಂಂತ್ರಣದಲ್ಲಿ ಇಲ್ಲ. ಎತ್ತರದ ಮಾವಿನ ಮರದ ಕೆಳಗೆ ಕುಳಿತು ಸೆಲ್ ಫೋನಿನಲ್ಲಿ ಸಂಭಾಷಣೆ ಮಾಡುತ್ತಿದ್ದ ಜೆಸಿಬಿ ಯಂತ್ರದ ಸಹ ಚಾಲಕ ಆ ಮರ ಕೆಲವೇ ಕ್ಷಣದಲ್ಲಿ ಅವನು ಕುಳಿತ ಜಾಗದ ಮೇಲೆ ಬೀಳುತ್ತದೆ ಅಂತ ಮನಸ್ಸು ಹೇಳಲು ಪ್ರಾರಂಬಿಸಿತ್ತು. ನಮ್ಮ ಆರು ಎಕರೆ ರಬ್ಬರ್ ಪ್ಲಾಂಟೇಶನ್ ನಮ್ಮ ಮನೆಯಿಂದ ಸುಮಾರು 3 ಕಿ.ಮಿ. ದೂರದ ತಾವರೇಹಳ್ಳಿ ಗ್ರಾಮದ ಜೇಡಿಸರದಲ್ಲಿದೆ. ಅಲ್ಲಿ ಸುತ್ತಲು ಬಿದಿರು ಮೆಳೆಗಳು ಪಕ್ಕದ ಜಮೀನಿನಲ್ಲಿ ಚೊಕ್ಕ ಮಾಡಿಸದಿದ್ದರೆ ಬೇಸಿಗೆಯಲ್ಲಿ ರಬ್ಬರ್ ತೋಟಕ್ಕೆ ಅಪಾಯವಾದ್ದರಿಂದ ಬಾಡಿಗೆ ಜೇಸಿಬಿ ಯಂತ್ರ ಒಂದನ್ನು ಗೊತ್ತು ಮಾಡಿಕೊಂಡು ನಾನು ಮತ್ತು ಸಹಾಯಕ ಗೇರುಬೀಸು ಚೆನ್ನಪ್ಪನ ಜೊತೆ ಹೋಗಿದ್ದೆ. ಚೆನ್ನಪ್ಪ ಬೈಕಲ್ಲಿ ಜೇಸಿಬಿ ಮುಂದೆ ದಾರಿಯಲ್ಲಿ ಹೋದರೆ ನಾನು ಜೇಸಿಬಿಯಲ್ಲಿ ಕುಳಿತು ಪ್ರಯಾಣಿಸಿದ್ದೆ ಈ ಸಂದರ್ಭದಲ್ಲಿ ಈ ಯಂತ್ರದ ಇಬ್ಬರು ಚಾಲಕರು ದೂರದ ಬೆಳಗಾವಿಯಿಂದ ಬಂದವರೆಂದು ಒಬ್ಬನ ಹೆಸರು ಈಶ್ವರ ಮತ್ತೊಬ್ಬ ಮಾರುತಿ. ಅವರಿಗೆ ಕೆಲಸ ತೋರಿಸಿ ಅವರು ಯಂತ್ರ ಪ್ರಾರಂಬಿಸಿದ ಸಮಯ ಬರೆದು ಕೊಂಡು ಅಲ್ಲೇ ಕುಳಿತುಕೊಂಡಿದ್ದೆ ಸಮೀಪದಲ್ಲಿ ಚೆನ್ನಪ್ಪನೂ ಕುಳಿತಿದ್ದ. ಸಹ ಚಾಲಕ ಮಾರುತಿ ಮೊಬೈಲ್ ಪ...