ಮಲೆನಾಡಿನ ಕಳ್ಳ ಬಂದೂಕುಗಳು, ಸೋ ಬೇಟೆಗಳು, ಬಾಡು ಮಾಂಸಕ್ಕಾಗಿ ಮನುಷ್ಯತ್ವ ಕಳೆದುಕೊಳ್ಳುವ ಬೇಟೆಗಾರರು, ಇವರಿಗೆ ಮದ್ದುಗುಂಡು ಸರಬರಾಜು ಮಾಡುವ ಬಾರೂದ್ ಮನೆತನಗಳು,ನಮ್ಮ ಭಾಗದ ನರಭಕ್ಷಕ ಹೊಡೆದ ಕೆನತ್ ಆಂಡರ್ಸನ್ ಅವರ ಪುಸ್ತಕ ಬೆಳಂದೂರಿನ ನರಭಕ್ಷಕ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ ತೇಜಸ್ಟಿಯವರು ಇವರೆಲ್ಲರ ನೆನಪು ಮಾಡಿದ ತೀರ್ಥಳ್ಳಿಯ ಗನ್ ಶಾಟ್ ಪ್ರಕರಣ
#ಮಲೆನಾಡಿನ_ಶಿಕಾರಿಗಾರರು #ಕಳೆದ_ತಿಂಗಳು_ಹಂದಿ_ಶಿಕಾರಿಗೆ_ಹೋದವರು_ಅಕಸ್ಮಿಕ_ಗುಂಡೇಟಿನಿಂದ_ಸಾವು. #ನಮ್ಮ_ಊರ_ಶಿಕಾರಿಗಾರರು_ಮತ್ತು_ಅವರ_ಕಥೆ. 80 ವರ್ಷದ ಹಿಂದೆ ನರಭಕ್ಷಕ ಹುಲಿಗಳಿದ್ದ ಪ್ರದೇಶ ನಮ್ಮ ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕಿನ ಆನಂದಪುರಂ ಎಂಬುದಕ್ಕೆ ಸಾಕ್ಷಿಯಾಗಿ ಪ್ರಸಿದ್ಧ ಬೇಟೆಗಾರ ಕೆನತ್ ಆಂಡರ್ಸನ್ ಬರೆದ #ಬೆಳಂದೂರು_ನರಭಕ್ಷಕ ಪುಸ್ತಕ ಇದನ್ನು ತೇಜಸ್ವಿಯವರು ಅನುವಾದಿಸಿ ಪ್ರಕಟಿಸಿದ್ದಾರೆ. ನಮ್ಮ ಬಾಲ್ಯದಲ್ಲಿ ಹುಲಿ ಶಿಕಾರಿ ಮಾಡಿಸಿ ಅದರ ಮಾಂಸವನ್ನು ಬೇಯಿಸಿ ತಿಂದು ಮೀಸೆ ತಿರುವಿದ ಆ ಕಾಲದ ನಮ್ಮ ಊರಿನ ಡೇರ್ ಡೆವಿಲ್ ನಲ್ಲಪ್ಪನವರ ಹೆಸರು ಚಿರಸ್ಥಾಯಿ ಆಗಿತ್ತು ಇದರಿಂದ ಆ ಕಾಲದಲ್ಲಿ ಹುಲಿ ಮಾಂಸ ಕಹಿ ಅನ್ನುವ ನಂಬಿಕೆ ಹುಸಿ ಆದ ಘಟನೆ ಇದು. ಪಸಲು ರಕ್ಷಣೆಗೆ ಮಸಿ ಬಂದೂಕಿಗೆ ಜಮೀನು ಮಾಲಿಕತ್ವ ಹೊಂದಿದವರಿಗೆ ಮಾತ್ರ ಬಂದೂಕು ಲೈಸೆನ್ಸ್ ಇರುತ್ತಿತ್ತು, ಆಗ ಜಮೀನು ತೋಟಗಳಿದ್ದರು ಜಮೀನು ಹಕ್ಕು ಪತ್ರ ಇಲ್ಲದವರು ತಲತಲಾಂತರದಿಂದ ಗೇಣಿ ಮಾಡುತ್ತಿದ್ದ ರೈತರಿಗೆ ಮಾತ್ರ ಲೈಸೆನ್ಸ್ ಇಲ್ಲದ ಮಸಿ ಬಂದೂಕು ಪಸಲು ರಕ್ಷಣೆಗೆ ಹೊಂದಿರುತ್ತಿದ್ದರು. ಆಗ ಆನಂದಪುರಂ ಇಡೀ ಹೋಬಳಿಗೆ ಬಂದೂಕು ಮಸಿ ತಯಾರಿಸಿ ಮಾರುವ ಏಕೈಕ ಬಾರೂದ್ ( ಬಂದೂಕು ಮಸಿ - ಗುಂಡು ಮಾರುವವರಿಗೆ ಈ ಹೆಸರು ಆ ಕಾಲದಲ್ಲಿ) ಮನೆ ಆನಂದಪುರಂ ದೊಡ್ಡಿ ಪಕ್ಕದಲ್ಲಿದ್ದ ಹೊನ್...