Skip to main content

Posts

Showing posts with the label Kenjigapura veerabadra swamy temple

Blog number 3399. ಕೆಂಜಿಗಾಪುರ ವೀರ ಭದ್ರ ದೇವರ ರಥೋತ್ಸವ

#ಕೆಂಜಿಗಾಪುರದ_ಶ್ರೀವೀರಭದ್ರಸ್ವಾಮಿ_ದೇವರ_ಜಾತ್ರೆ_ರಥೋತ್ಸವ. #ಆನಂದಪುರಂ_ಸಮೀಪದ_ಕೆಂಜಿಗಾಪುರದಲ್ಲಿ #ಪ್ರತಿವರ್ಷ_ಹೋಳಿಹುಣ್ಣಿಮೆ_ದಿನ_ರಥೋತ್ಸವ_ಆಚರಣೆ #ವಿಜಯನಗರದ_ಅರಸು_ಪ್ರೌಡ_ಪ್ರತಾಪ_ರಾಯ_606_ವರ್ಷದ_ಹಿಂದೆ_ನಿರ್ಮಿಸಿದ_ದಾಖಲೆಯಿದೆ #ಪ್ರೌಡ_ಪ್ರತಾಪರಿಗೆ_ಗಜ_ಬೇಟೆಗಾರ_ಎಂಬ_ಬಿರುದು_ಇತ್ತು. #shivamogga #sagar #ananandapuram #Yadehalli #kenjigapura #veerabadreshwara #temple     ವಿಜಯನಗರದ ಅರಸು ಪ್ರೌಡ ಪ್ರತಾಪರಾಯ ಆ ಕಾಲದಲ್ಲಿ ಅರಣ್ಯದಲ್ಲಿನ ಕಾಡಾನೆಗಳನ್ನು ಹಿಡಿದು ಪಳಗಿಸಿ ಅದನ್ನು ತನ್ನ ಸೈನ್ಯದಲ್ಲಿ ಬಳಸುತ್ತಿದ್ದಂತ ಸಾಹಸಿ ಆದ್ದರಿಂದ ಪ್ರೌಢ ಪ್ರತಾಪ ರಾಯರಿಗೆ #ಗಜ_ಬೇಟೆಗಾರ ಎಂಬ ಬಿರುದು ಇತ್ತು.    ಆರುನೂರು ವರ್ಷಗಳ ಹಿಂದೆ ಈ ಪ್ರದೇಶ ದೊಡ್ಡ ಜನ ವಸತಿ ಪ್ರದೇಶ ಆಗಿರಬೇಕು.    ಕೆಂಜಿಗಾಪುರದ ಶ್ರೀವೀರಭದ್ರೇಶ್ವರ ದೇವಾಲಯ ನಿರ್ಮಾಣವಾಗಿ ಇಲ್ಲಿನ ಶಾಸನಗಳ ಪ್ರಕಾರ 606 ವರ್ಷಗಳಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ಹೋಬಳಿಯ ಚಿಕ್ಕ ಗ್ರಾಮ  ಕೆಂಜಿಗಾಪುರ ಈಗ ಯಡೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದೆ.   ಈ ದೇವಾಲಯ ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿದೆ.    ಪ್ರತಿ ವರ್ಷ ಹೋಳಿ ಹುಣ್ಣಿಮೆಯಂದು ಶ್ರೀವೀರಭದ್ರ ದೇವರ ರಥೋತ್ಸವ ನೆರವೇರುತ್ತದೆ ಅದರ ಹಿಂದಿನ ದಿನ ಹೂವಿನ ಪಲ್ಲಕ್ಕಿ ಉತ್ಸವ ನ...