#ಕೆಂಜಿಗಾಪುರದ_ಶ್ರೀವೀರಭದ್ರಸ್ವಾಮಿ_ದೇವರ_ಜಾತ್ರೆ_ರಥೋತ್ಸವ.
#ಆನಂದಪುರಂ_ಸಮೀಪದ_ಕೆಂಜಿಗಾಪುರದಲ್ಲಿ
#ಪ್ರತಿವರ್ಷ_ಹೋಳಿಹುಣ್ಣಿಮೆ_ದಿನ_ರಥೋತ್ಸವ_ಆಚರಣೆ
#ವಿಜಯನಗರದ_ಅರಸು_ಪ್ರೌಡ_ಪ್ರತಾಪ_ರಾಯ_606_ವರ್ಷದ_ಹಿಂದೆ_ನಿರ್ಮಿಸಿದ_ದಾಖಲೆಯಿದೆ
#ಪ್ರೌಡ_ಪ್ರತಾಪರಿಗೆ_ಗಜ_ಬೇಟೆಗಾರ_ಎಂಬ_ಬಿರುದು_ಇತ್ತು.
#shivamogga #sagar #ananandapuram #Yadehalli #kenjigapura #veerabadreshwara #temple
ವಿಜಯನಗರದ ಅರಸು ಪ್ರೌಡ ಪ್ರತಾಪರಾಯ ಆ ಕಾಲದಲ್ಲಿ ಅರಣ್ಯದಲ್ಲಿನ ಕಾಡಾನೆಗಳನ್ನು ಹಿಡಿದು ಪಳಗಿಸಿ ಅದನ್ನು ತನ್ನ ಸೈನ್ಯದಲ್ಲಿ ಬಳಸುತ್ತಿದ್ದಂತ ಸಾಹಸಿ ಆದ್ದರಿಂದ ಪ್ರೌಢ ಪ್ರತಾಪ ರಾಯರಿಗೆ #ಗಜ_ಬೇಟೆಗಾರ ಎಂಬ ಬಿರುದು ಇತ್ತು.
ಆರುನೂರು ವರ್ಷಗಳ ಹಿಂದೆ ಈ ಪ್ರದೇಶ ದೊಡ್ಡ ಜನ ವಸತಿ ಪ್ರದೇಶ ಆಗಿರಬೇಕು.
ಕೆಂಜಿಗಾಪುರದ ಶ್ರೀವೀರಭದ್ರೇಶ್ವರ ದೇವಾಲಯ ನಿರ್ಮಾಣವಾಗಿ ಇಲ್ಲಿನ ಶಾಸನಗಳ ಪ್ರಕಾರ 606 ವರ್ಷಗಳಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ಹೋಬಳಿಯ ಚಿಕ್ಕ ಗ್ರಾಮ ಕೆಂಜಿಗಾಪುರ ಈಗ ಯಡೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದೆ.
ಈ ದೇವಾಲಯ ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿದೆ.
ಪ್ರತಿ ವರ್ಷ ಹೋಳಿ ಹುಣ್ಣಿಮೆಯಂದು ಶ್ರೀವೀರಭದ್ರ ದೇವರ ರಥೋತ್ಸವ ನೆರವೇರುತ್ತದೆ ಅದರ ಹಿಂದಿನ ದಿನ ಹೂವಿನ ಪಲ್ಲಕ್ಕಿ ಉತ್ಸವ ನಡೆಯುತ್ತದೆ.
ನಾಳೆ 14 -ಮಾರ್ಚ್- 2025 ಶುಕ್ರವಾರ ಹೋಳಿ ಹುಣ್ಣಿಮೆ ದಿನ ಕೆಂಜಿಗಾಪುರದ ಶ್ರೀವೀರಭದ್ರೇಶ್ವರ ದೇವರ ರಥೋತ್ಸವ ನಡೆಯಲಿದೆ.
ಈ ದೇವಾಲಯ ವಿಜಯನಗರ ಸಾಮ್ರಾಜ್ಯದ ಅರಸು ಪ್ರೌಡ ಪ್ರತಾಪ ರಾಯ 1419 ರಲ್ಲಿ ನಿರ್ಮಿಸಿದ ಶಾಸನವಿದೆ (ಪ್ರೌಢಪ್ರತಾಪರಾಯ ಆಡಳಿತ ಅವಧಿ 1422-1446).
ಇಪ್ಪತ್ತು ವರ್ಷದ ಹಿಂದಿನ ತನಕ ವೀರಭದ್ರ ದೇವರ ರಥ ಯಡೇಹಳ್ಳಿ ವೃತ್ತದ ತನಕ ನಡೆಯುತ್ತಿತ್ತು.
1975ರ ತನಕ ಈ ರಥ ರಾಜ ಬೀದಿ ಉತ್ಸವ ಆನಂದಪುರಂನ ಸಂತೆ ಮಾರ್ಕೆಟ್ ತನಕ ನಡೆಯುತ್ತಿತ್ತು.
Comments
Post a Comment