#ಆನಂದಪುರದ_ಚಿರಪರಿಚಿತರಾದ_ಹೋಟೆಲ್_ಕೃಷ್ಣಣ್ಣರ_ನೆನಪುಗಳು ನಮ್ಮ ತಂದೆ ಆದಿ ಆಗಿ ಆಗಿನವರೆಲ್ಲ ಈಗಿಲ್ಲ ಅವರ ಕಿರಿಯ ಒಡನಾಡಿ ತಿಂಡಿ ಕೃಷ್ಣಣ್ಣ ಮೂರು ತಿಂಗಳ ಹಿಂದೆ ಇಹಲೋಕ ತ್ಯಜಿಸಿದ್ದಾರೆ. ಹೋಟೆಲ್ ಕೃಷ್ಣಣ್ಣ, ತಿಂಡಿ ಕೃಷ್ಣಣ್ಣ ಅಂತೆಲ್ಲ ಕರೆಯುವ ಸದಾ ನಗುಮೊಗದ ಕೃಷ್ಣಣ್ಣ 14 - ಡಿಸೆಂಬರ್- 2022 ರಂದು ಸಿಕ್ಕಿದ್ದರು ಅವರಿಗೆ ಆಗ 84 ವರ್ಷ ಆದರೆ ಅವರು 35 ವರ್ಷದವರಷ್ಟೆ ಕ್ರಿಯಾಶೀಲರು. ಪ್ರತಿನಿತ್ಯ ಬೆಳಿಗ್ಗೆ ಸಂಜೆ ಅವರ ಕೃಷಿ ಕೆಲಸದ ಜೊತೆ ಆನಂದಪುರದಲ್ಲಿನ ಅವರ ಹೋಟೆಲ್ ವ್ಯವಹಾರ ನಿರಂತರ ನಡೆಸಿ ಕೊಂಡು ಬರುತ್ತಿದ್ದಾರೆ. ಇದರ ಮಧ್ಯೆ ಸುತ್ತ ಮುತ್ತಲಿನ ಸಂತೆ ಮತ್ತು ಜಾತ್ರೆಯಲ್ಲಿ ಇವರ ಬೆಂಡು ಬತ್ತಾಸು, ಬೂಂದಿ ಖಾರ ಮತ್ತು ಮಂಡಕ್ಕಿ ಅಂಗಡಿ ಇರದಿದ್ದರೆ ನೆರೆದ ಜನ ಆ ವಷ೯ದ ಜಾತ್ರೆ ಜೋರಾಗಿಲ್ಲ ತಿಂಡಿ ಕೃಷ್ಣಣ್ಣ ಅಂಗಡಿನೇ ಹಾಕಿಲ್ಲ ಅನ್ನುವಷ್ಟರವರೆಗೆ ಇವರ ಪ್ರಸಿದ್ದಿ ಮತ್ತು ಜಾತ್ರೆ ಬ್ರಾಂಡ್ ಆಗಿದ್ದರು. 1960 ರ ದಶಕದಲ್ಲಿ ಇವರೆಲ್ಲ ಆನಂದಪುರದ ಪ್ರಸಿದ್ದ ನಾಟಕ ಕಲಾವಿದರು ನಮ್ಮ ತಂದೆ ಕೃಷ್ಣಪ್ಪ ಹೀರೋ ಪಾತ್ರವಂತೆ,ಸ್ತ್ರಿ ಪಾತ್ರದಾರಿ ಕೆರಹಿತ್ತಲು ಲಿಂಗಾರ್ಜುನ ಗೌಡರದ್ದಂತೆ ಇವರೆಲ್ಲರ ಜೊತೆ ತಿಂಡಿ ಕೃಷ್ಣಣರದ್ದು ನಾಟಕದಲ್ಲಿ ಮುಖ್ಯ ಪಾತ್ರ. ಆಗ ಜೋಗಿ ಹನುಮಂತಣ್ಣ ನಾಟಕಗಳ ನಿದೇ೯ಶನ ಮಾಡುತ್ತಿದ್ದದ್ದು ನನಗೆ ಗೊತ್ತಾಗಿದ್ದೆ ಕೃಷ್ಣಣ್ಣರ ಹತ್ತಿರ ಮಾತಾಡಿದಾಗ. ...