ಕೊರಾನಾ ಲಾಕ್ ಡೌನ್ ಡೈರಿ 2020, ಆಶಾ ಕಾಯ೯ಕತೆ೯ಯರ ಪ್ರಶಂಸನೀಯ ಕಾಯ೯ದ ಮೌಲ್ಯಮಾಪನ ಮತ್ತು ಈ ಯೋಜನೆ ಜಾರಿಗೆ ತಂದ ಆಗಿನ ಪ್ರದಾನ ಮಂತ್ರಿ ಮನಮೊಹನ್ ಸಿಂಗ್ ರ ದೂರದೃಷ್ಟಿ ಈ ಸಂದಭ೯ದಲ್ಲಿ ಅಬಿನಂದನೀಯ.
#ಕೊರಾನಾ_ಲಾಕ್_ಡೌನ್_ಡೈರಿ_2020 #ಲೆಟರ್_ನOಬರ್_21 #ದಿನಾ0ಕ_24_ಏಪ್ರಿಲ್_2020 *ದೇಶದಾದ್ಯ೦ತ ಆಶಾ ಕಾಯ೯ಕತೆ೯ಯರ ಸೇವೆ ಸುದ್ದಿ ಮಾಡುತ್ತಿದೆ. *ಅವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. *ಕೊರಾನಾ ವೈರಸ್ ನಿಯ೦ತ್ರಣದಲ್ಲಿ ಬುಡಮಟ್ಟದಲ್ಲಿ ಅವರ ಕೆಲಸ ಪ್ರಶಂಸನೀಯ ಅಷ್ಟೇ ಅಪಾಯಕಾರಿ. ಆಶಾ ಅಂದರೆ ಕನ್ನಡದ ಹೆಸರOತಲೇ ಎಲ್ಲಾ ಬಾವಿಸಿದ್ದಾರೆ ಆದರೆ ಇದು ಇಂಗ್ಲೀಷ್ ನ ACCRIDITED SOCIAL HEALTH ACTIVIST(ASHA) ನ ಶಾಟ್೯ ಪಾರಂ. ಇವರನ್ನ ನ್ಯಾಷನಲ್ ಹೆಲ್ತ್ ಮಿಷನ್ ನ ಅಡಿಯಲ್ಲಿ 2005ರ ರಲ್ಲಿ ಕೇ೦ದ್ರ ಸಕಾ೯ರ ಪ್ರಾರಂಬಿಸಿದ ಯೋಜನೆಯಿಂದ ಗ್ರಾಮಗಳ 1000ದಿಂದ 2000 ಜನಸಂಖ್ಯೆ ಇರುವ ಪ್ರದೇಶಕ್ಕೆ ಒಬ್ಬರಂತೆ ಸ್ಥಳಿಯ ANM ಮತ್ತು ಅಂಗನವಾಡಿ ಕಾಯ೯ಕತೆ೯ಯರ ಜೊತೆಯಲ್ಲಿ ಕಾಯ೯ ನಿವ೯ಹಿಸುತ್ತಾರೆ. ಅಂದಿನ ಪ್ರದಾನ ಮಂತ್ರಿ ಮನಮೊಹನ್ ಸಿಂಗ್ 2005ರಲ್ಲಿ ಉದ್ಘಾಟಿಸಿದ್ದರು ಈ ಯೋಜನೆ 20 I2 ರಲ್ಲಿ ಪೂಣ೯ ಪ್ರಮಾಣದಲ್ಲಿ ಕಾಯ೯ನಿವ೯ಹಿಸಬೇಕೆಂಬ ಕಾಲ ಮಿತಿ ಇಡಲಾಗಿತ್ತು. ಈಗ ದೇಶದಾದ್ಯಂತ ಸುಮಾರು 10 ಲಕ್ಷ ಆಶಾ ಕಾಯ೯ಕತೆ೯ಯರು ಕಾಯ೯ ನಿವ೯ಹಿಸುತ್ತಿದ್ದಾರೆ. ಜನವಸತಿ ಕೇಂದ್ರದ ವ್ಯಾಪ್ತಿಯ ವಿವಾಹಿತ / ವಿದವೆ/ವಿಚ್ಚೇದಿತ 10ನೆ ತರಗತಿವರೆಗೆ ವಿದ್ಯಾಬ್ಯಾಸ ಇರುವ ಸ್ಥಳಿಯ ಸಮೂದಾಯಕ್ಕೆ ಸೇರಿದ ಮಹಿಳೆಯರನ್ನ ಸ್ಥಳಿಯ ಗ್ರಾ.ಪಂ.ಆಯ್ಕೆ ಮಾಡಬೇಕು ಅವರು ವಾರದಲ್ಲ...