Blog number 1909. ಗಾಡ್ ಫಾದರ್ ಇಲ್ಲದೆ ಸಾದನೆ ಮಾಡಿದ ಕ್ರಿಯಾಶೀಲ ಗೆಳೆಯ ಎಂ. ಸಲೀಂ ನನ್ನ ಕಛೇರಿಯಲ್ಲಿ ಹಿಂದ್ ಸಮಾಚಾರ್ ನ್ಯೂಸ್ ನ ಸಿಸಿಲ್ ಸೋಮನ್ ಜೊತೆ
#ರಾಜ್ಯ_ಕಾಂಗ್ರೇಸ್_ಮುಖಂಡರಾದ_ಎಂ_ಸಲೀಂ #ಭಾನುವಾರ_ನನ್ನ_ಕಛೇರಿಗೆ_ಬೇಟಿ_ನೀಡಿದ್ದರು #ಸಾಗರ_ತಾಲ್ಲೂಕಿನ_ತಾಳಗುಪ್ಪದ_ಸಲೀಂ #ಸಾಗರದ_ಲಾಲ್_ಬಹುದ್ದೂರು_ಪದವಿ_ಕಾಲೇಜು_ವಿದ್ಯಾರ್ಥಿ_ಆಗಿದ್ದವರು #ಎನ್_ಸಿ_ಸಿ_ಸೈಕಲನಲ್ಲಿ_ದೇಶ_ಪರ್ಯಟನೆ_ಪ್ಯಾರಾ_ಸೈಕಲಿಂಗ್_ಪರ್ವತಾರೋಹಣ_ಪೋಟೋಗ್ರಪಿ_ಯೋಗಾಸನ #ಜನಪರ_ಹೋರಾಟದಲ್ಲಿ_ಮು೦ಚೂಣಿಯಲ್ಲಿದ್ದವರು. #ಯಾವುದೇ_ಗಾಡ್_ಪಾದರ್_ಇಲ್ಲದೆ_ರಾಜ್ಯ_ರಾಜಕಾರಣದಲ್ಲಿ_ಉತ್ತುಂಗಕ್ಕೆ_ಏರಿದವರು. ಬಾನುವಾರ (7 ಜನವರಿ 2024) ಸಾಗರದ ಒಂದು ಕಾಲದ ನನ್ನ ಸಂಗಾತಿ ನಿವೃತ್ತ ಸೈನಿಕರಾಗಿದ್ದ ಸೋಮನ್ ಪುತ್ರ ಈಗ ಕಂಟ್ರಾಕ್ಟರ್ ಮತ್ತು ಹಿಂದ್ ಸಮಾಚಾರ್ ಸುದ್ದಿ ಸಂಸ್ಥೆಯ ಮುಖ್ಯಸ್ಥರಾದ ಸಿಸಿಲ್ ಸೋಮನ್ ಪೋನ್ ಮಾಡಿ ನನ್ನ ಕಚೇರಿಯಲ್ಲಿ ನಾನು ಇದ್ದರೆ ಬೇಟಿ ಮಾಡುವುದಾಗಿ ಮತ್ತು ಜೊತೆಯಲ್ಲಿ ರಾಜ್ಯ ಕಾಂಗ್ರೇಸ್ ಮುಖಂಡರಾದ ಎಂ. ಸಲೀ೦ ನಿಮ್ಮ ಬೇಟಿಗೆ ಬರಲಿದ್ದಾರೆ ಎಂದರು. ನಮ್ಮ ಊರಿನ ಅಕ್ಕಿ ಗಿರಣಿ ಮಾಲೀಕರ ಮಗನ ಮದುವೆಯ ರಿಸಪ್ಷನಲ್ಲಿ ಭಾಗವಹಿಸಿ ನನ್ನ ಆಫೀಸಿಗೆ ಬಂದಿದ್ದರು. ರಾಜ್ಯ ಕಾಂಗ್ರೇಸ್ ಮುಖಂಡ ಮಾಜಿ ಸಂಸದ ಉಗ್ರಪ್ಪರೊಂದಿಗೆ ಬೆಂಗಳೂರಿನ ಕೆ. ಪಿ. ಸಿ.ಸಿ. ಕಛೇರಿಯಲ್ಲಿ ಕಾಂಗ್ರೇಸ್ ಪಕ್ಷದ ಪತ್ರಿಕಾಗೋಷ್ಠಿಯ ಪ್ರಾರಂಭದಲ್ಲಿ ಪರ್ಸೆಂಟೇಜ್ ಕಲೆಕ್ಷನ್ ಗಿರಾಕಿಗಳ ಪೊಲಿಟಿಕ್ಸ್ ಎಂದು ಅವರ ಪಕ್ಷದವರೇ ಆದ ಡಿ.ಕೆ.ಶಿವಕುಮಾರ್ ಬಗ್ಗೆ ಮಾತಾ...