Blog number 1909. ಗಾಡ್ ಫಾದರ್ ಇಲ್ಲದೆ ಸಾದನೆ ಮಾಡಿದ ಕ್ರಿಯಾಶೀಲ ಗೆಳೆಯ ಎಂ. ಸಲೀಂ ನನ್ನ ಕಛೇರಿಯಲ್ಲಿ ಹಿಂದ್ ಸಮಾಚಾರ್ ನ್ಯೂಸ್ ನ ಸಿಸಿಲ್ ಸೋಮನ್ ಜೊತೆ
#ರಾಜ್ಯ_ಕಾಂಗ್ರೇಸ್_ಮುಖಂಡರಾದ_ಎಂ_ಸಲೀಂ
#ಭಾನುವಾರ_ನನ್ನ_ಕಛೇರಿಗೆ_ಬೇಟಿ_ನೀಡಿದ್ದರು
#ಸಾಗರ_ತಾಲ್ಲೂಕಿನ_ತಾಳಗುಪ್ಪದ_ಸಲೀಂ
#ಸಾಗರದ_ಲಾಲ್_ಬಹುದ್ದೂರು_ಪದವಿ_ಕಾಲೇಜು_ವಿದ್ಯಾರ್ಥಿ_ಆಗಿದ್ದವರು
#ಎನ್_ಸಿ_ಸಿ_ಸೈಕಲನಲ್ಲಿ_ದೇಶ_ಪರ್ಯಟನೆ_ಪ್ಯಾರಾ_ಸೈಕಲಿಂಗ್_ಪರ್ವತಾರೋಹಣ_ಪೋಟೋಗ್ರಪಿ_ಯೋಗಾಸನ
#ಜನಪರ_ಹೋರಾಟದಲ್ಲಿ_ಮು೦ಚೂಣಿಯಲ್ಲಿದ್ದವರು.
#ಯಾವುದೇ_ಗಾಡ್_ಪಾದರ್_ಇಲ್ಲದೆ_ರಾಜ್ಯ_ರಾಜಕಾರಣದಲ್ಲಿ_ಉತ್ತುಂಗಕ್ಕೆ_ಏರಿದವರು.
ಬಾನುವಾರ (7 ಜನವರಿ 2024) ಸಾಗರದ ಒಂದು ಕಾಲದ ನನ್ನ ಸಂಗಾತಿ ನಿವೃತ್ತ ಸೈನಿಕರಾಗಿದ್ದ ಸೋಮನ್ ಪುತ್ರ ಈಗ ಕಂಟ್ರಾಕ್ಟರ್ ಮತ್ತು ಹಿಂದ್ ಸಮಾಚಾರ್ ಸುದ್ದಿ ಸಂಸ್ಥೆಯ ಮುಖ್ಯಸ್ಥರಾದ ಸಿಸಿಲ್ ಸೋಮನ್ ಪೋನ್ ಮಾಡಿ ನನ್ನ ಕಚೇರಿಯಲ್ಲಿ ನಾನು ಇದ್ದರೆ ಬೇಟಿ ಮಾಡುವುದಾಗಿ ಮತ್ತು ಜೊತೆಯಲ್ಲಿ ರಾಜ್ಯ ಕಾಂಗ್ರೇಸ್ ಮುಖಂಡರಾದ ಎಂ. ಸಲೀ೦ ನಿಮ್ಮ ಬೇಟಿಗೆ ಬರಲಿದ್ದಾರೆ ಎಂದರು.
ರಾಜ್ಯ ಕಾಂಗ್ರೇಸ್ ಮುಖಂಡ ಮಾಜಿ ಸಂಸದ ಉಗ್ರಪ್ಪರೊಂದಿಗೆ ಬೆಂಗಳೂರಿನ ಕೆ. ಪಿ. ಸಿ.ಸಿ. ಕಛೇರಿಯಲ್ಲಿ ಕಾಂಗ್ರೇಸ್ ಪಕ್ಷದ ಪತ್ರಿಕಾಗೋಷ್ಠಿಯ ಪ್ರಾರಂಭದಲ್ಲಿ ಪರ್ಸೆಂಟೇಜ್ ಕಲೆಕ್ಷನ್ ಗಿರಾಕಿಗಳ ಪೊಲಿಟಿಕ್ಸ್ ಎಂದು ಅವರ ಪಕ್ಷದವರೇ ಆದ ಡಿ.ಕೆ.ಶಿವಕುಮಾರ್ ಬಗ್ಗೆ ಮಾತಾಡಿದ್ದು ದೊಡ್ಡ ವೈರಲ್ ಸುದ್ದಿ ಆಗಿತ್ತು ಇದರಿಂದ ರಾಜ್ಯ ರಾಜಕಾರಣದಿಂದ ಸಲೀಂರನ್ನು ಬದಿಗೆ ಸರಿಸಲಾಯಿತು ಆದರೆ ಉಗ್ರಪ್ಪರನ್ನು ಮುಟ್ಟುವ ದೈರ್ಯ ಯಾರೂ ಮಾಡಲಿಲ್ಲ.
ಅಷ್ಟಕ್ಕೂ ಬಲಿಪಶು ಆದ ಸಲೀಂ ಮಾಡಿದ ತಪ್ಪಾದರೂ ಏನು? ... ಉಗ್ರಪ್ಪನವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದೇ ಅಪರಾದವಾ?...ಸಲೀಂ ಹೇಳಿದ್ದು ಸುಳ್ಳಾ?... ಸತ್ಯ ಹೇಳಿದ್ದಕ್ಕೆ ಶಿಕ್ಷೆಯಾ?..... ಇದಕ್ಕೆ ಕಾಲವೇ ಉತ್ತರಿಸಬೇಕು.
ಸಲೀಂ 60 ವರ್ಷ ವಯಸ್ಸು ದಾಟಿ ಸೀನಿಯರ್ ಸಿಟಿಜನ್ ಆಗಿದ್ದಾರೆ ಆದರೆ ಅವರ ದೈನಂದಿನ ವಾಕಿಂಗ್ ನಿರಂತರ 2 ಗಂಟೆ ಮತ್ತು 14000 ಹೆಜ್ಜೆಗಳು ಅಂದರೆ ಪ್ರತಿ ದಿನ ಕನಿಷ್ಟ 10 ಕಿ.ಮಿ. ನಡೆಯುತ್ತಾರೆ ಅವರ ಸ್ಮಾರ್ಟ್ ವಾಚ್ ದಾಖಲೆಗಳನ್ನು ತೋರಿಸಿದರು.
ಬಿಪಿ ಶುಗರ್ ಇಲ್ಲದ ಅವರ ಹೆಲ್ತ್ ಕಾರ್ಡ್ ಅವರ ಪಿಟ್ ನೆಸ್ ತೋರಿಸುತ್ತದೆ.
ವಿದ್ಯಾರ್ಥಿ ಜೀವನದಲ್ಲಿ NCC ಯಲ್ಲಿ ಅಮೋಘ ಸಾದನೆ ಮಾಡಿದ ಇವರು ಸೈಕಲ್ ನಲ್ಲಿ ದೇಶ ಪರ್ಯಟನೆ ಮಾಡಿದ್ದರು, ಕೈನೆಟಿಕ್ ಹೊಂಡಾ ಸ್ಕೂಟರ್ ನಲ್ಲಿ ಹಿಮಾಲಯ ಶ್ರೇಣಿಗೆ ಪ್ರವಾಸ, ವಿದ್ಯಾರ್ಥಿ ಯುವ ಜನರಿಗೆ ಪ್ರೇರೇಪಿಸುವ ಇವರ ಸಾಹಸದ ಕಾಯ೯ ಚಟುವಟಿಕೆಗಳಿಂದ ಪ್ರಸಿದ್ಧಿ ಪಡೆದಿದ್ದರು.
ನಂತರ ಸಾಗರ ತಾಲೂಕಿನಲ್ಲಿ ಯುವ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ಪೋಟೋಗ್ರಪಿಯಲ್ಲಿ ಸ್ವಯಂ ಉದ್ಯೋಗ ಕಂಡುಕೊಂಡಿದ್ದರು.
ಒಂದು ಕಾಲದಲ್ಲಿ ಸಲೀಂ ಸಾಗರ ವಿಧಾನಸಭಾ ಕ್ಷೇತ್ರದ ಕೆ.ಪಿ.ಸಿ.ಸಿ. ಸದಸ್ಯರಾಗಿದ್ದವರು, ಆಗ ಮಂತ್ರಿ ಆಗಿದ್ದ ಕಾಗೋಡು ತಿಮ್ಮಪ್ಪ ಪಕ್ಕದ ಹೊಸನಗರ ತಾಲೂಕಿನಿಂದ ಕೆ.ಪಿ.ಸಿ.ಸಿ. ಸದಸ್ಯರಾಗ ಬೇಕಾಯಿತು.
ಕೆ.ಪಿ.ಸಿ.ಸಿ. ಕಛೇರಿಯಲ್ಲಿ ಉಗ್ರಪ್ಪರ ಜೊತೆಯ ಪ್ರೆಸ್ ಮೀಟ್ ಒಂದು ಇವರ ರಾಜಕೀಯ ಭವಿಷ್ಯಕ್ಕೆ ತಾತ್ಕಾಲಿಕ ತಡೆ ಆಯಿತು ಆದರೂ ಮುಂದಿನ ದಿನಗಳಲ್ಲಿ ನಮ್ಮ ಗೆಳೆಯ ಸಲೀಂಗೆ ಉನ್ನತ ಸ್ಥಾನಗಳು ಸಿಗಲಿದೆ.
ಇಡೀ ರಾಜ್ಯದಲ್ಲೇ ಚುನಾವಣೆಯಲ್ಲಿ ಹಣ ಖರ್ಚು ಮಾಡಿ ಎಲ್ಲರೂ ಶಾಸಕರಾದರೆ ನಮ್ಮ ಸಾಗರ ತಾಲೂಕಿನಲ್ಲಿ ಜನರೇ ಹಣ ನೀಡಿ ಬೇಳೂರು ಗೋಪಾಲಕೃಷ್ಣ ಅವರನ್ನು ಆಯ್ಕೆ ಮಾಡಿದ್ದು ವಿಶೇಷ ಎಂದ ಸಲೀಂ ಗೋಪಾಲಕೃಷ್ಣ ಬೇಳೂರು ಪರವಾಗಿ ಪ್ರಚಾರ ಮಾಡಿದ್ದರು.
ಇವರು ಸಾಗರ ತಾಲ್ಲೂಕಿಗೆ ಬಂದಾಗೆಲ್ಲ ಇವರ ಅಭಿಮಾನಿಗಳು ಇವರನ್ನು ಮುತ್ತಿಕೊಳ್ಳುತ್ತಾರೆ ಅಂತಹ ಅಭಿಮಾನಿ ಬಳಗ ಹೊಂದಿರುವ ಸಲೀಂ ಈ ಸಾರಿ ಬೆಂಗಳೂರಿಗೆ ಬಂದಾಗ ಅವರ ಅತಿಥಿ ಆಗಿ ಅತಿಥ್ಯ ಸ್ವೀಕರಿಸ ಬೇಕೆಂಬ ಆಹ್ವಾನ ನೀಡಿದ್ದಾರೆ.
Comments
Post a Comment