Blog number 1927. ನಡೆಯುತ್ತಾ 18 ಸಾವಿರ ಕಿಲೋ ಮೀಟರ್ ವಿಶ್ವ ಪರ್ಯಟನೆ ಮಾಡಿದ ಶಿಕ್ಷಕ ಬರಹಗಾರ ಟಾಮ್ ಕಳೆದ ವರ್ಷ ನನ್ನ ಅತಿಥಿ ಆಗಿದ್ದರು.
#ಖಂಡಾಂತರ_18000_ಕಿಮಿ_ನಡೆದ_ಟಾಮ್_ಪ್ರೆಮಾಂಟಲ್
#ಟಾಮ್ಸ್_ವರ್ಲ್ಡ್_ವಾಕ್
#ಕಳೆದ_ವರ್ಷ_16_ಜನವರಿ_2023_ನನ್ನ_ಅತಿಥಿ
#ಸೆಪ್ಟೆಂಬರ್_2018ರಲ್ಲಿ_ಪ್ರಾರಂಭ
#ಕೊರಾನಾದಿಂದ_2_ವರ್ಷ_ಸ್ಥಗಿತವಾಗಿತ್ತು
#ಶಾಲಾ_ಶಿಕ್ಷಕ_ಬರಹಗಾರ_ಟಾಮ್_ಸಾಹಸ
ಅಮೆರಿಕಾ- ಐರ್ಲೆಂಡ್-ಯುಕೆ - ಪ್ರಾನ್ಸ್ - ಜಮ೯ನಿ-ಆಸ್ಟ್ರೀಯ - ಸ್ಲೋವಾಕಿಯಾ - ಹಂಗೇರಿಯಾ - ಸೆರ್ಬಿಯಾ - ಬಲ್ಗೇರಿಯಾ - ಟರ್ಕಿ-ಸಿಪ್ರಸ್-ಲೆಬನಾನ್-ಸಿರಿಯಾ - ಜೋರ್ಡಾನ್-ಇಸ್ರೇಲ್ - ಪೋಲಾಂಡ್-ಯುಕ್ರೇನ್-ಇಂಡಿಯಾ- ಇಂಡೋನೇಸಿಯಾ- ಆಸ್ಟ್ರೇಲಿಯಾ - ನ್ಯೂಜಿಲಾಂಡ್-ಐಸ್ ಲ್ಯಾಂಡ್ ಈ ಎಲ್ಲಾ ದೇಶಗಳಲ್ಲಿ ಶಿಕ್ಷಕ ವೃತ್ತಿಯ ಟಾಮ್ ಪಾದಯಾತ್ರೆಯಲ್ಲಿ ಕ್ರಮಿಸಿದ್ದಾರೆ.
2018 ಸೆಪ್ಟೆಂಬರ್ ನಲ್ಲಿ ಅವರು ಖಂಡಾಂತರ ಪಾದಯಾತ್ರೆಯ ಮೂಲಕ 18 ಸಾವಿರ ಕಿಲೋ ಮೀಟರ್ ನಡೆಯುವ ಅವರ ಉದ್ದೇಶ 2020-21 ರ ಕೊರಾನಾದಿಂದ ಮಧ್ಯದಲ್ಲಿ ತಡೆಯಾಯಿತು.
2 ಡಿಸೆಂಬರ್ 2023 ರಂದು ಮಧ್ಯಾಹ್ನ ಐಸ್ ಲ್ಯಾಂಡ್ ನಲ್ಲಿ ಅವರ ಗುರಿ ತಲುಪಿದಾಗ ಅವರ ನಡುಗೆ 11 272 ಮೈಲು ಅಂದರೆ 18 ಸಾವಿರ ಕಿಲೋಮೀಟರ್ ದಾಟಿತ್ತು.
ಈ ದೀರ್ಘ ವಿಶ್ವ ಪರ್ಯಟನೆಯಲ್ಲಿ ಯುಕ್ರೇನ್ ಹ್ಯೂಮೆಟರಿಯನ್ ಸಂಸ್ಥೆಗೆ ಅಪಾರ ದೇಣಿಗೆ ಸಂಗ್ರಹಿಸಿ ನೀಡಿದ್ದಾರೆ.
ಭಾರತದಲ್ಲಿ ಅರಬಿ ಸಮುದ್ರದ ಗೋವಾದ ತಡಿಯಿಂದ ಕಾಲ್ನಡಿಗೆಯಲ್ಲಿ ಚೆನ್ನೈ ಬಂಗಾಳಕೊಲ್ಲಿ ತನಕ ನಡೆಯುವಾಗ ಕಳೆದ ವರ್ಷ ದಿನಾಂಕ 16 - ಜನವರಿ-2023 ನನ್ನ ಅತಿಥಿಯಾಗಿ ತಂಗಿದ್ದರು.
ಇಲ್ಲಿ ಕ್ಲಿಕ್ ಮಾಡಿ ಆ ದಿನದ ಅವರ ಸಂದರ್ಶನ ಓದಬಹುದು.
https://youtu.be/X84PeM6eTr4?feature=shared
https://arunprasadhombuja.blogspot.com/search?q=%E0%B2%9F%E0%B2%BE%E0%B2%AE%E0%B3%8D
ಏಕಾಂಗಿಯಾಗಿ ವಿಶ್ವದಾದ್ಯಂತ 18 ಸಾವಿರ ಕಿ.ಮಿ. ನಡೆಯುವುದು ಸಣ್ಣ ಸಾಹಸವಲ್ಲ ಇದನ್ನು ಸಾಧಿಸಿದ ಶಿಕ್ಷಕ ಬರಹಗಾರ ಟಾಮ್ ಅವರಿಗೆ ಅಭಿನಂದನೆಗಳು ಅವರು ನನ್ನ ಅತಿಥಿಗಳಾಗಿದ್ದರು ಎಂಬುದು ನನಗೆ ಹೆಮ್ಮೆ.
Comments
Post a Comment