#ನಮ್ಮೂರ_ವರಸಿದ್ದಿ_ವಿನಾಯಕ_ಸ್ವಾಮಿ_18ನೇ_ವರ್ಷದ_ರಥೋತ್ಸವ.
#ರೈಲ್ವೆ_ಬ್ರಾಡ್_ಗೇಜ್_ಮಾಗ೯_ವಿದ್ಯುದೀಕರಣದಿಂದ
#ರಥದ_ಎತ್ತರ_ಕಡಿಮೆಗೊಳಿಸ_ಬೇಕಾದ_ಅನಿವಾರ್ಯತೆ
#ನಮ್ಮೂರ_ರಥ_ಶಿಲ್ಪಿ_ವೆಂಕಟರಮಣ_ಆಚಾರ್
#ನಮ್ಮೂರ_ರಥ_ದಾನಿ_ಕೆಂಜಿಗಾಪುರ_ಶ್ರೀಧರ_ಭಟ್ಟರು
#ರಥದ_ಗೋಪುರದ_ಮೇಲ್ಚಾವಣೆ_ಮಾಡಿದವರು_ಆನಂದಪುರಂ_ನರಸಿಂಹಾಚಾರ್
https://youtu.be/cuRSj3DxAkE?feature=shared
ಇದೇ ಫೆಬ್ರುವರಿ 13ರ ಮಂಗಳವಾರ ನಮ್ಮ ಊರಿನ ಶ್ರೀ ವರಸಿದ್ದಿ ವಿನಾಯಕ ದೇವರ 18ನೇ ವರ್ಷದ ಬ್ರಹ್ಮ ರಥೋತ್ಸವ ನಡೆಯಲಿದೆ ಈ ಸಂದರ್ಭದಲ್ಲಿ ಒಂದು ಸಮಸ್ಯೆ ಉದ್ಭವಾಯಿತು ಅದೇನೆಂದರೆ ರಥ ರಾಜಭೀದಿ ಉತ್ಸವ ದೇವಾಲಯದಿಂದ ರಾಷ್ಟ್ರೀಯ ಹೆದ್ದಾರಿಯ ಯಡೇಹಳ್ಳಿ ವೃತ್ತದ ವರೆಗೆ ಪ್ರತಿ ವರ್ಷ ಬರುತ್ತದೆ ಆದರೆ ಈ ಎರ್ಷ ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ರೈಲು ಮಾರ್ಗ ವಿದ್ಯುದೀಕರಣಗೊಳಿಸಿದ್ದರಿಂದ ರೈಲ್ವೆ ಇಲಾಖೆ ರೈಲ್ವೆ ಗೇಟ್ ಸಮೀಪ ಎರಡು ಕಡೆ 15 ಅಡಿಗಿಂತ ಎತ್ತರದ ವಾಹನ ಸಂಚರಿಸದಂತೆ ಬ್ಯಾರಿಕೇಡ್ ಹಾಕಿದೆ.
ಇದರಿಂದ ನಮ್ಮ ದೇವಾಲಯದ ರಥ 22 ಅಡಿ ಎತ್ತರ ಇರುವುದರಿಂದ ರಥ ರಾಜಭೀದಿ ಉತ್ಸವಕ್ಕೆ ತಡೆಯಾಗಿದೆ ಆದರೆ ಪ್ರತಿ ವರ್ಷದಂತೆ ರಥ ರಾಜಭೀದಿ ಉತ್ಸವ ಈ ಮಾರ್ಗದಲ್ಲಿ ನಡೆಸಲೇಬೇಕೆಂದರೆ ನಮ್ಮ ದೇವಾಲಯದ ರಥದ ಎತ್ತರ ಕಡಿಮೆಗೊಳಿಸುವುದು ಅನಿವಾರ್ಯವಾಗಿದೆ.
ಆದ್ದರಿಂದ ನಿನ್ನೆ ಈ ರಥ ನಿರ್ಮಿಸಿದ್ದ ರಥ ಶಿಲ್ಪಿ ವೆಂಕಟರಮಣ ಆಚಾರ್ ಮತ್ತು ಈ ರಥದ ಕಬ್ಬಿಣದ ಗೋಪುರ ಮೇಲ್ಚಾವಣಿ ನಿರ್ಮಿಸಿದ್ದ ಆನಂದಪುರದ ನರಸಿಂಹಾಚಾರ್ ಅವರನ್ನು ಕರೆಸಿಕೊಂಡು ಚರ್ಚಿಸಿದೆವು.
18 ವರ್ಷದ ಹಿಂದೆ ಈ ರಥ ದಾನಿಗಳು ಕೇಂಜಿಗಾಪುರದ ಪುರೋಹಿತರಾದ ಶ್ರೀಧರ ಭಟ್ಟರು,ರಥೋತ್ಸವ ನಡೆಸಲೇಬೇಕೆಂಬ ಸಂಕಲ್ಪ ಮಾಡಿದವರು ನಮ್ಮ ದೇವಾಲಯದ ಟ್ರಸ್ಟಿನ ಗೌರವ ಅಧ್ಯಕ್ಷರಾದ ಬೆಂಗಳೂರಿನ ಡಾಕ್ಟರ್ ಎನ್ ಎಸ್ ವಿಶ್ವಪತಿ ಶಾಸ್ತ್ರಿಗಳು,ಈ ರಥದ ನಾಲ್ಕು ಗಾಲಿಗಳು ಶತಮಾನಕ್ಕಿಂತ ಹಿಂದಿನ ಬಂಡಿ ಗಾಲಿಗಳು ಇದರ ಧಾನಿಗಳು ಶಿವಮೊಗ್ಗ ತಾಲೂಕಿನ ಸಿರಿಗೆರೆಯ ಕಾಚಿನಕೊಪ್ಪದ ಶಿವಪ್ಪ ಮಲ್ಲೇನಹಳ್ಳಿ ಮತ್ತು ಲಿಂಗಪ್ಪ ಬಿನ್ ಈರಪ್ಪ ಮಲ್ಲೇನಹಳ್ಳಿ, ಕುಟುಂಬದವರು.
ಅಂತಿಮವಾಗಿ ಈ ರಥದ ಏಳು ಅಡಿ ಎತ್ತರವನ್ನು ಕಡಿಮೆಗೊಳಿಸುವ ತೀರ್ಮಾನವನ್ನು ಮಾಡಿ ನಾಳೆಯಿಂದ ರಥದ ದುರಸ್ತಿ ಕೆಲಸ ಪ್ರಾರಂಭಿಸಲಿದ್ದಾರೆ.
ರೈಲು ಮಾರ್ಗದ ನವೀಕರಣ ಆಧುನೀಕರಣಗಳು ಊರಿನ ಆಗು ಹೋಗುವ ಮೇಲೆ ಬೀರುವ ಪರಿಣಾಮಗಳಲ್ಲಿ ಇದು ಒಂದು.
Comments
Post a Comment