#ನಮ್ಮ_ಜಿಲ್ಲೆ_ಶಿವಮೊಗ್ಗದಲ್ಲಿ_ಮತ್ತೆ_ಕ್ಯಾಸನೂರು_ಪಾರೆಸ್ಟ್_ಡಿಸೀಸ್
#ಹೊಸವರ್ಷದಲ್ಲಿ_ಮಂಗನ_ಕಾಯಿಲೆಗೆ_ಮೊದಲ_ಬಲಿ
#ಶಿವಮೊಗ್ಗ_ಜಿಲ್ಲೆಯ_ಹೊಸನಗರ_ತಾಲ್ಲೂಕಿನ_ಅರಮನೆಕೊಪ್ಪ_ಗ್ರಾಮ_ಪಂಚಾಯತಿಯ
#ಬಪ್ಪನುಮನೆ_ಗ್ರಾಮದ_18_ವರ್ಷದ_ಅನನ್ಯ.
#ದಿನಾಂಕ_5_ಜನವರಿ_2019ರಂದು_ಅರಲಗೋಡಿನ_ಶ್ವೇತಾ.
#ದಿನಾಂಕ_2_ಮೇ_2022ರಂದು_ಅರಲುಗೋಡಿನ_ಗ್ರಾಮ_ಪಂಚಾಯಿತಿ_ಸದಸ್ಯ
#ರಾಮಸ್ವಾಮಿ_ಕರುಮನೆ_ಮತ್ತು_ಅನೇಕರು_ಜೀವ_ತ್ಯಾಗ_ಮಾಡಿದ್ದಾರೆ
#ಮಂಗನ_ಕಾಯಿಲೆಗೆ_ವ್ಯಾಕ್ಸಿನ್_ಇದಿಯಾ?
#ಅದು_ಪರಿಣಾಮಕಾರಿಯಾ?
#ಪರಿಕ್ಷಾ_ಕೇಂದ್ರ_ಲ್ಯಾಬ್_ಆಗಿದೆಯಾ?
2024 ರ ಹೊಸ ವರ್ಷದ ಮೊದಲ ತಿಂಗಳಲ್ಲೇ ಮಂಗನಕಾಯಿಲೆ / ಕ್ಯಾಸನೂರು ಪಾರೆಸ್ಟ್ ಡಿಸೀಸ್ / ಕೆ.ಎಪ್.ಡಿ. ಎಂಬ ಕಾಯಿಲೆಗೆ ಮೊದಲ ಬಲಿ ಆಗಿರುವುದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಮನೆ ಕೊಪ್ಪ ಗ್ರಾಮ ಪಂಚಾಯಿತಿನ ಒಪ್ಪನು ಮನೆ ಗ್ರಾಮದ 18 ವರ್ಷದ ಅನನ್ಯ.
2019 ರ ಜನವರಿ 5ರಂದು ಸಾಗರ ತಾಲೂಕಿನ ಅರಲು ಗೋಡು ಗ್ರಾಮ ಪಂಚಾಯಿತಿ ವಿಶ್ವ ವಿಖ್ಯಾತ ಜೋಗ ಜಲಪಾತದಿಂದ ಕೇವಲ 5-6 ಕಿ.ಮೀ. ವ್ಯಾಪ್ತಿಯಲ್ಲಿದೆ ಅಲ್ಲಿನ ಕಾಲೇಜು ವಿದ್ಯಾರ್ಥಿನಿ ಶ್ವೇತ ಕಾಲೇಜಿನ ರಜಾ ದಿನದಲ್ಲಿ ತಮ್ಮ ಅಡಿಕೆ ತೋಟದಲ್ಲಿ ಬಿದ್ದ ಅಡಿಕೆ ಸಂಗ್ರಹಿಸುವಾಗ ಈ ಮಂಗನ ಕಾಯಿಲೆಗೆ ತುತ್ತಾಗಿದ್ದು ನಂತರ ಸುಮಾರು 25 ಕ್ಕೂ ಅಧಿಕ ಜನರು ಇದಕ್ಕೆ ಬಲಿಯಾದರು.
2022 ರಲ್ಲಿ ಇದೇ ಗ್ರಾಮ ಪಂಚಾಯಿತಿ ಸದಸ್ಯರಾದ ರಾಮಸ್ವಾಮಿ ಕರುಮನೆ ಬಲಿಯಾದರು.
ಇವತ್ತು 2024 ರ ಪ್ರಾರಂಬದಲ್ಲಿ ಅನನ್ಯ ಹೀಗೆ ನಮ್ಮ ಜಿಲ್ಲೆಯಾದ ಶಿವಮೊಗ್ಗದ ಮಂಗನ ಕಾಯಿಲೆ ಉತ್ತರ ಕನ್ನಡ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆಯ 6000 ಚ.ಕಿ. ಪ್ರದೇಶದಲ್ಲಿ ಯಾವತ್ತಾದರೂ ಯಾರನ್ನಾದರೂ ಬಲಿ ಪಡೆಯಲು ಕಾಯುತ್ತಿದೆ.
ಇದಕ್ಕೆ ಔಷದಿ ಕಂಡು ಹಿಡಿದಿದ್ದಾರಾ? ಲ್ಯಾಬ್ ಇದಿಯಾ? ಚಿಕಿತ್ಸೆ ಇದೀಯಾ? ಇದೆಲ್ಲ ಚರ್ಚೆ ಇಲ್ಲಿ ಅನಗತ್ಯ ಮಳೆ ಕಡಿಮೆ, ವಿಪರೀತ ತಾಪ ಮಾನದ ಬೇಸಿಗೆ, ಮಂಗನಿಂದ ಹರಡುವ ಉಗುಣಗಳು ಕಾಡಿಗೆ ಉರವಲು, ಜಮೀನಿನ ಬೇಲಿಗೆ ಬೇಕಾದ ಗೂಟ - ಮುಳ್ಳು ಸಂಗ್ರಹಿಸಲು ಹೋಗುವವರಿಗೆ, ಕಾಡಿಗೆ ಮೇಯಲು ಹೋಗುವ ಜಾನುವಾರುಗಳಿಂದ ಈ ಕಾಯಿಲೆ ಹರಡುತ್ತದೆ.
ಮಲೆನಾಡಿನ ಹಂದಿಗೋಡು ಕಾಯಿಲೆ ಮತ್ತು ಮಂಗನ ಕಾಯಿಲೆ ಬಗ್ಗೆ ಸ್ವಾತಂತ್ರ್ಯ ಬಂದು 75 ವರ್ಷವಾದರೂ ಸರ್ಕಾರಗಳು ಯಾವ ಕ್ರಮ , ಸಂಶೋಧನೆ ಮತ್ತು ಪರಿಹಾರ ನೀಡಿದೆ ಎಂಬುದು ಕೂಡ ನಿಗೂಡವಾಗಿದೆ.
Comments
Post a Comment