Blog number 1914. ಶಿರಾಳಕೊಪ್ಪದ ಹಜರತ್ ಉಮ್ಮರ್ ಸಾಹೇಬರೆಂಬ ಹತ್ತಿ ಶುಂಠಿ ವ್ಯಾಪಾರಿಗಳು ಮತ್ತು ಅವರ ಜೀವನದ ಅನುಭವಗಳ ವಾಸ್ತವ ಅರಿತ ಅವರಲ್ಲಿರುವ ದಾರ್ಶನಿಕ ವ್ಯಕ್ತಿತ್ವ.
#ಶಿರಾಳಕೊಪ್ಪದ_ಹಜರತ್_ಉಮ್ಮರ್_ಸಾಬ್
#ಮಗಳ_ವಿವಾಹ_ಆಹ್ವಾನ_ಪತ್ರಿಕೆ_ನೀಡಲು_ಬಂದಿದ್ದರು
#ವ್ಯಾಪಾರಸ್ಥರೊ_ದಾಶ೯ನಿಕರೋ_ಎನ್ನುವಂತವರು.
#ಹತ್ತಿ_ಶುಂಠಿ_ವ್ಯಾಪಾರದಲ್ಲಿ_1980_ರಿಂದ_ನಮ್ಮ_ಭಾಗದಲ್ಲಿ_ಚಿರಪರಿಚಿತರು.
#ಇವರ_ಮಾತಿನಲ್ಲಿ_ಗಾದೆಗಳು_ಕಥೆಗಳು_ಕಂತೆ_ಕಂತೆ
#ವ್ಯಾಪಾರಿ_ಆಗಿರುವ_ಹಜರತ್_ಉಮ್ಮರ್_ಸಾಹೇಬರಿಗಿಂತ
#ವಾಸ್ತವ_ಆರಿತ_ಇವರ_ಅನುಭವಗಳಿಂದ_ದಾರ್ಶನಿಕ_ಹಜರತ್_ಉಮ್ಮರ್_ಸಾಹೇಬರು_ನನಗೆ_ಅಚ್ಚು_ಮೆಚ್ಚು.
#ಈ_ಹಸಿ_ಶುಂಠಿ_ಒಣ_ಶುಂಠಿ_ದಾರಣೆ_ಏನಾಗಬಹುದು?
#ಇಂತಹ_ಅನೇಕ_ವಿಚಾರ_ನಮ್ಮಿಬ್ಬರ_ಮಾತಿನಲ್ಲಿ_ದಾಖಲಾಯಿತು.
https://youtu.be/AvGQLclF73Y?feature=shared
ಬಿಳಿ ಜುಬ್ಬಾ, ಬಿಳಿ ಪೈಜಾಮ್, ಸಾಕ್ಸ್ ಇಲ್ಲದ ಕಪ್ಪು ಬೂಟು, ಬಂಗಾರದ ಬಣ್ಣದ ಕಟ್ಟಿನ ಕನ್ನಡಕ, ಹೆಗಲ ಮೇಲೆ ಟರ್ಕಿ ಟವಲ್ ಹಾಕಿ ಕೊಂಡು ಬುಲೆಟ್ ಬೈಕ್ ಬಂದರೆ ಅದು ಹಜರತ್ ಉಮ್ಮರ್ ಸಾಹೇಬರದ್ದೇ ಅಂತ ನಮ್ಮ ಭಾಗದ ರೈತರಿಗೆ ಗೊತ್ತಾಗುತ್ತಿತ್ತು.
ಮಳೆ ಕಡಿಮೆ ಆದಾಗ ಬಯಲು ಸೀಮೆಯ ಹತ್ತಿ ಬೆಳೆ ಮಲೆನಾಡನ್ನು ಒತ್ತುತ್ತಾ ಬಂದ ಕಾಲದಲ್ಲಿ ಹತ್ತಿ ಸುಗ್ಗಿಯಲ್ಲಿ ಕಾಟನ್ ಮಿಲ್ ಗೆ ರೈತರಿಂದ ಹತ್ತಿ ಖರೀದಿ ಮಾಡಲು ಹಜರತ್ ಉಮ್ಮರ್ ಸಾಹೇಬರನ್ನೇ ನಮ್ಮ ಭಾಗದ ರೈತರು ಹೆಚ್ಚು ನಂಬುತ್ತಿದ್ದರು.
ಹಜರತ್ ಉಮ್ಮರ್ ಸಾಹೇಬರು ರೈತರ ಜೊತೆ ಆತ್ಮೀಯವಾಗಿ ಬೆರೆಯುವುದು, ಹೊಂದಿಕೊಂಡು ವ್ಯಾಪಾರ ಖುಲಾಯಿಸುವುದು, ತೂಕದಲ್ಲಿ ರೈತರಲ್ಲಿ ನಂಬಿಕೆ ಉಳಿಸುಕೊಳ್ಳುವುದು ಮತ್ತು ರೈತರ ಹಣ ರೈತರ ಮನೆ ಬಾಗಿಲಿಗೆ ತಲುಪಿಸುವುದು ಇವರ ವ್ಯಾಪಾರದ ಒಂದು ಮುಖ ಆದರೆ, ಹಜರತ್ ಉಮ್ಮರ್ ಸಾಹೇಬರು ಬಂದರೆ ಇಡೀ ಊರನ್ನೆಲ್ಲಾ ನಕ್ಕು ನಗಿಸುವಂತ ಇವರ ಮಾತುಗಳು, ಮಾತಿನ ಮದ್ಯದ ಸಾಂದರ್ಭಿಕ ಗಾದೆಗಳು,ಉಪ ಕಥೆಗಳು ಇವರ ಜೀವನದ ಅನುಭವಗಳು ಸೇರಿ ವಾಸ್ತವದ ಮಾತುಗಳು ಇವರ ಇನ್ನೊಂದು ಮುಖವೇ ನನಗೆ ಇವರು ಹೆಚ್ಚು ಇಷ್ಟ ಆಗುತ್ತಾರೆ.
ಮೊನ್ನೆ ನಾನು ಸಂಜೆಯ ವಾಕಿಂಗ್ ಹೋದಾಗ ಬಂದವರು ನಾನು ವಾಕಿಂಗ್ ಮುಗಿಸಿ ಸ್ನಾನ ಮಾಡಿ ಆಫೀಸಿಗೆ ಬರುವ ತನಕ ಕಾದು ಕುಳಿತಿದ್ದಾರೆ, ಅನೇಕ ವರ್ಷಗಳ ನಂತರ ಇದು ನನ್ನ ಅವರ ಬೇಟಿ, ಇವರ ಮಗಳ ಮದುವೆಯ ಆಹ್ವಾನ ನೀಡಲು ಬಂದಿದ್ದರು.
1985 ರಿಂದ 2000 ಇಸವಿ ತನಕ ನಮ್ಮ ಅಕ್ಕಿ ಗಿರಣಿಯಲ್ಲಿ ಇವರ ಹತ್ತಿ ತುಂಬುವ ಕಲ್ಲಿಗಳು (ಬೃಹತ್ ಗಾತ್ರದ ಚೀಲದ ರೂಪದ ಹತ್ತಿ ತುಂಬುವ ಬಲೆಯ ಚೀಲ) ಹಾಕುತ್ತಿದ್ದರು ಇವರ ಲೋಡಿಂಗ್ ಕಾಮಿ೯ಕರಿಗೆ ನಮ್ಮ ಅಕ್ಕಿ ಗಿರಣಿಯಲ್ಲೇ ವಾಸ್ತವ್ಯ.
ಇವರ ಜೊತೆ ತುಂಬಾ ಹೊತ್ತು ಮಾತಾಡಿದೆ, ಈ ವರ್ಷ ಹಸಿ ಶುಂಠಿ ಖರೀದಿ ಬೆಲೆ ಗರಿಷ್ಟ ಎಷ್ಟಾಗಬಹುದು? ಒಣ ಶುಂಠಿ ಕೇಜಿಗೆ 400 ದಾಟಬಹುದಾ?... 1985 ರ ಕಾಲಕ್ಕೂ ಈಗಿನ ಕಾಲಕ್ಕೂ ರೈತನ ಪರಿಸ್ಥಿತಿ, ಹಣದ ಚಲಾವಣೆ ವ್ಯಾಪಾರಿಗಳಲ್ಲಿ ಆಗಿರುವ ಪರಿಣಾಮಗಳ ಬಗ್ಗೆ ಈ ಕೆಳಗಿನ ವಿಡಿಯೋದಲ್ಲಿ ದಾಖಲಾಗಿದೆ.
Comments
Post a Comment