Blog number 1830. ಶಿವಮೊಗ್ಗದಲ್ಲಿ ಇಂದಿರಾ ಗಾಂಧಿ ಅವರಿಗೆ ಕಲ್ಲು ಹೊಡೆದು ಹಲ್ಲೆ ಮಾಡಿದ ಘಟನೆ ನಡೆದು 46 ವರ್ಷವಾಯಿತು ಇವತ್ತು ಶ್ರೀಮತಿ ಇಂದಿರಾ ಗಾಂಧಿ ಅವರ 106 ನೇ ಹುಟ್ಟು ಹಬ್ಬ.
#ಶಿವಮೊಗ್ಗದಲ್ಲಿ_ಇಂದಿರಾಗಾಂಧಿ_ಅವರಿಗೆ_ಕಲ್ಲೆಸೆದವರು_ಯಾರು ? #ಈಗಿನ_ರಾಜಕಾರಣದಲ್ಲಿರುವವರಿಗೆ_ಗೊತ್ತೇ_ಇರಲಿಕ್ಕಿಲ್ಲ. #ಇವತ್ತು_ಇಂದಿರಾ_106ನೇ_ಹುಟ್ಟುಹಬ್ಬ #ಮುಚ್ಚಿಟ್ಟ_ಕಾಂಗ್ರೇಸ್_ಇತಿಹಾಸದ_ಪುಟ. #ಅಮೇರಿಕಾದ_ನ್ಯೂಯಾರ್ಕ್_ಟೈಮ್ಸ್_ಈ_ಸುದ್ದಿ_ಮೊದಲು_ಪ್ರಕಟಿಸಿದ_ಪತ್ರಿಕೆ. #ಇಡೀ_ದೇಶದಲ್ಲೇ_ಈ_ಸುದ್ದಿ_ಸಂಚಲನ_ಉಂಟು_ಮಾಡಿತ್ತು. ಇವತ್ತು ದೇಶದ ಉಕ್ಕಿನ ಮಹಿಳೆ ಮೊದಲ ಮಹಿಳಾ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ 106ನೇ ಹುಟ್ಟುಹಬ್ಬ. 19- ನವೆಂಬರ್ -1917 ಇಂದಿರಾರ ಜನ್ಮ ದಿನ. ಇಂದಿರಾ ಗಾಂಧಿ ಅವರ 60ನೇ ಹುಟ್ಟುಹಬ್ಬಕ್ಕೆ 20 ದಿನ ಮೊದಲು ದಿನಾಂಕ 30 ಅಕ್ಟೋಬರ್ 1977ರಂದು ಶಿವಮೊಗ್ಗದಲ್ಲಿ ಕಾಂಗ್ರೇಸ್ ಪಕ್ಷ ಬಹಿರಂಗ ಸಭೆಯೊಂದನ್ನು ಹಮ್ಮಿಕೊಂಡಿತ್ತು ಈ ಸಭೆಯನ್ನು ಉದ್ದೇಶಿಸಿ ಶ್ರೀಮತಿ ಇಂದಿರಾ ಗಾಂಧಿ ಮಾತಾಡುವವರಿದ್ದರು. ಈ ಸಭೆ ನಂತರ ತೀರ್ಥಹಳ್ಳಿ ಮಾರ್ಗವಾಗಿ ಶೃಂಗೇರಿ ಮೂಲಕ ಅವರು ಮಂಗಳೂರು ತಲುಪುವ ಕಾರ್ಯಕ್ರಮ ನಿರ್ಧಾರವಾಗಿತ್ತು. ಆ ದಿನ ಶಿವಮೊಗ್ಗದಲ್ಲಿ ಇಂದಿರಾ ಗಾಂಧಿ ನೋಡಲು ಜಿಲ್ಲೆಯ ಮೂಲೆ ಮೂಲೆಯಿಂದ ಸಹಸ್ರಾರು ಜನ ಸ್ವಯಂ ಪ್ರೇರಣೆಯಿಂದ ಬಂದಿದ್ದರು, ಇಂದಿರಾ ಗಾಂಧಿ ಈ ಯಶಸ್ವಿ ಸಭೆ ನಡೆಸಿ ತೀರ್ಥಹಳ್ಳಿಗೆ ನಿರ್ಗಮಿಸುವ ಮಾರ್ಗದಲ್ಲಿ ಇಂದಿರಾರ ಕಾರಿಗೆ ಕಲ್ಲು ಹೊಡೆಯುವ ಹೇಯ ಕೃತ್ಯಕ್ಕೆ ಒಂದು ಗುಂಪು ಗುಪ್ತವಾಗಿ ತಯಾರಿ ನಡೆಸಿತ್ತು....