ಆನಂದಪುರಂ_ಆನೆ_ಕಾರಿಡಾರ್
ಕಾಡಾನೆ_ಪ್ರವೇಶಕ್ಕೆ_ಕ್ಷಣಗಣನೆ ...
2023 ರ ಅಕ್ಟೋಬರ್ 16ರಂದು ಮೊದಲ ಬಾರಿಗೆ ಒಂದು ತಾಯಿ ಮತ್ತು ಮರಿ ಆನೆ ಹೊಸನಗರ ತಾಲೂಕಿನ ಅರಸಾಳು ಕೆಂಚನಾಲ ಭಾಗದ
ಕೈರದಮನೆ ಎಂಬಲ್ಲಿ ಸ್ಥಳೀಯರ ಸೆಲ್ ಫೋನ್ ಕ್ಯಾಮರಾದಲ್ಲಿ ಸೆರೆ ಆದ ಫೋಟೋ ಕಾಡಾನೆ ಕಾರಿಡಾರ್ ಮೊದಲ ಸಾಕ್ಷಿ.
ಅದರ ನಂತರ 2026ರ ಮಾರ್ಚ್ ತನಕ ಈ ಕಾರಿಡಾರ್ ಗೆ ಭದ್ರಾ ಅಭಯಾರಣ್ಯದಿಂದ 15 ಕ್ಕೂ ಹೆಚ್ಚು ಬಾರಿ ಕಾಡಾನೆ ಪ್ರವೇಶ ಆಗಿದೆ.
2026 ರ ಅಕ್ಟೋಬರ್ ಗೆ ಆನೆ ಕಾರಿಡಾರ್ ಆಗಿ ನಾಲ್ಕು ವರ್ಷ ಆಗಲಿದೆ ಈಗ ಸೆಪ್ಟೆಂಬರ್ ತಿಂಗಳಲ್ಲಿಯೇ ಕಾಡಾನೆಗಳು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅರಸಾಳು ಅರಣ್ಯ ವ್ಯಾಪ್ತಿಯ ತಮ್ಮಡಿಕೊಪ್ಪ, ಬಟಾಣಿ ಜಡ್ಡು ಪ್ರದೇಶಕ್ಕೆ ಬಂದು ತಲುಪಿದೆ.
ಇಲ್ಲಿಂದ ಶಿಕಾರಿಪುರ ತಾಲ್ಲೂಕಿನ ಅಂಚಿನ ಅಂಬ್ಲಿಗೋಳ ಜಲಾಶಯ ತಲುಪಿ ಅಲ್ಲಿಂದ ಸೊರಬ ತಾಲ್ಲೂಕಿನ ಉಳವಿ ಅರಣ್ಯದ ಮೂಲಕ ಶತಮಾನದ ಹಿಂದಿನ ಕಾಳಿ ಮತ್ತು ಭದ್ರಾ ಆನೆ ಕಾರಿಡಾರ್ ಪುನಃ ಕೂಡಿಸಲು ಉತ್ತರ ಕನ್ನಡ ಜಿಲ್ಲೆಯ ಕಾಳಿ ಅಭಯಾರಣ್ಯದ ಕಾಡಾನೆಗಳ ಸಂಪರ್ಕದ ಪ್ರಯತ್ನದಲ್ಲಿ ಈ ಕಾಡಾನೆ ಸಂಚಾರ ಎಂದು ಕಾಡಾನೆಗಳ ಕಾರಿಡಾರ್ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಅರಸಾಳಿನಿಂದ -ಕೆಂಚನಾಲ - ಪತ್ರೆಹೊಂಡ ಮಾರ್ಗದ ಮೂಲಕ ಸಾಗರ ತಾಲೂಕಿನ ಆನಂದಪುರಂ ಸಮೀಪದ ಕೊಲ್ಲಿಬಚ್ಚಲು ಡ್ಯಾಮ್ ತಲುಪಿ ಅಲ್ಲಿಂದ ಕಣ್ಣೂರು ಹಿರಿಯರಕ ಮೂಲಕ ಅಂಬ್ಲಿಗೋಳ ಜಲಾಶಯ ತಲುಪುತ್ತದೆ ಅಥವ ಅರಸಾಳಿನಿಂದ ಹೊಸನಗರ ತಾಲ್ಲೂಕಿನ ಆಲವಳ್ಳಿ ಮಾರ್ಗವಾಗಿ ಚೊರಡಿ -ತುಪ್ಪೂರು - ಅರಣ್ಯದ ಮೂಲಕ ನೇರವಾಗಿ ಅಂಬ್ಲಿಗೊಳ ಡ್ಯಾಮ್ ತಲುಪಿ ಡ್ಯಾಮಿನ ದಂಡೆ ಮೇಲೆ ಸಾಗಿ ಸಾಗರ ತಾಲೂಕಿನ ತ್ಯಾಗರ್ತಿ ಸಮೀಪದ ಇಡುವಳ್ಳಿ ಲಾವಿಗೆರೆ ಮೂಲಕ ಸೊರಬ ತಾಲ್ಲೂಕು ತಲುಪಿ ಅಲ್ಲಿಂದ ಕಾಳಿ ಅರಣ್ಯ ಪ್ರದೇಶದಲ್ಲಿ ಇವುಗಳ ಆಗಮನದ ನಿರೀಕ್ಷೆಯಲ್ಲಿರುವ ಉತ್ತರದ ಭಾಗದಲ್ಲಿ ಉಳಿದಿರುವ ಕಾಡಾನೆಗಳ ಸಂಗಮ ಆಗಲಿದೆ.
ಈ ಭದ್ರಾ ಕಾಡಾನೆ ಹಿಂಡುಗಳು ಸಾಗುವ ಮಾರ್ಗದ ರೈತರು ಅವುಗಳಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಈ ಕಾಡಾನೆ ಈ ಪ್ರದೇಶದ ಬೆಳೆಗಳಿಗೆ ಜನರ ವಾಸ್ತವ್ಯ ಪ್ರದೇಶಕ್ಕೆ ಪ್ರವೇಶ ಮಾಡದೆ ಅವುಗಳ ಗಮ್ಯಕ್ಕೆ ಸೇರಿ ಬಿಡುತ್ತದೆ.
ಅವುಗಳ ಮಾರ್ಗ ಮಧ್ಯೆದಲ್ಲಿ ಜನರು ಪಟಾಕಿ ಸಿಡಿಸಿ ಅವುಗಳನ್ನ ಬಂದ ದಾರಿಯಲ್ಲೇ ಹಿಂದಿರುಗಿಸಿ ಓಡಿಸುವ ಪ್ರಯತ್ನ ಮಾಡಿದರೆ ಮಾತ್ರ ಈ ಆನೆಗಳಿoದ ತೊಂದರೆ ಆಗ ಬಹುದು.
ಆನೆ ಸಂಚರಿಸುವ ಸಾಧ್ಯವಿರುವ ಮಾರ್ಗ ಕಳೆದ ಮೂರು ವರ್ಷಗಳಿಂದ ಈ ಭಾಗದವರಿಗೆ ಅರಿವು ಇರುವುದರಿಂದ ಜನ ಜಾಗೃತಿವಹಿಸಿ ಸಂಚರಿಸ ಬೇಕು ಮತ್ತು ಆನೆಗಳು ಕಂಡು ಬಂದರೆ ಈ ಭಾಗದ ಜನರು ವಾಟ್ಸಪ್ ಗ್ರೂಪ್ ಗಳ ಮುಖಾಂತರ ಅವುಗಳನ್ನ ಮಾನಿಟರ್ ಮಾಡಿ ಜನರಿಗೆ ಮಾಹಿತಿ ಹಂಚಿಕೊಳ್ಳಲು ವಿನಂತಿ.
#anandapuram #arasalu #kali #bhadra #elephant #corridor
Comments
Post a Comment