Skip to main content

Posts

Showing posts with the label George Fernandes dream to build his party in Karnataka but 2004 Anantha Kumar major player for his dream upset

Blog number 893.. ಜಾರ್ಜ್ ಪನಾ೯೦ಡೀಸರು ತಮ್ಮ ತವರು ರಾಜ್ಯದಲ್ಲಿ ರಾಜಕೀಯ ಪಕ್ಷ ಕಟ್ಟುವ ಕನಸು ನನಸಾಗದಂತೆ ಮಾಡುವಲ್ಲಿ 2004 ರಲ್ಲಿ ಅನಂತ ಕುಮಾರರ ದೊಡ್ಡ ಪಾಲಿದೆ.

#ಇವತ್ತು_ಉಡುಪಿ_ಸಂಸದರಾದ_ಐ_ಎಂ_ಜಯರಾಂಶೆಟ್ಟರು_ನೆನಪಾದರು. #ಜೊತೆಗೆ_ಜಾರ್ಜ್_ಪರ್ನಾಂಡೀಸರೂ #ಜಾಜ್೯ರ_ಸಮತಾ_ಪಾರ್ಟಿಯ_ಶಾಸನಗಳು_ಮತ್ತು_ನಿಯಮಗಳನ್ನು_ಕನ್ನಡಕ್ಕೆ_ಅನುವಾದಿಸುವ_ಅವಕಾಶ_ನನ್ನದಾಗಿದ್ದು.    ಜಾರ್ಜ್ ಫರ್ನಾಂಡಿಸ್ ರು ವಾಜಪೇಯಿಯವರ ಎನ್. ಡಿ.ಎ. ಸರ್ಕಾರದಲ್ಲಿ ದೇಶದ ರಕ್ಷಣಾ ಸಚಿವರು, ಕರ್ನಾಟಕದ ಶ್ರೀನಿವಾಸ್ ಪ್ರಸಾದರು ಆಹಾರ ಮತ್ತು ನಾಗರೀಕ ಸೇವೆ ಖಾತೆಯ ಕೇಂದ್ರದ ರಾಜ್ಯ ಸಚಿವರು ಆಗಲೇ ಜಾರ್ಜ್ ರಿಗೆ ತಮ್ಮ ಹುಟ್ಟಿನ ಮೂಲದ ಕನಾ೯ಟಕ ರಾಜ್ಯದಲ್ಲಿ ತಮ್ಮ ಸಮತಾ ಪಾಟಿ೯ ಕಟ್ಟುವ ಆಕಾಂಕ್ಷೆ ಇರುತ್ತದೆ.   ಅದಕ್ಕಾಗಿ ಬೈಂದೂರಿನಿಂದ ಒಂದು ಅವದಿಗೆ ಬಿಜೆಪಿಯಿಂದ ಶಾಸಕರಾಗಿ, ಉಡುಪಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದ (ಆಸ್ಕರ್ ಫರ್ನಾಂಡಿಸ್ ರನ್ನು ಸೋಲಿಸಿ) ಯಡೂರಪ್ಪರಿಗೆ ಆಪ್ತರಾಗಿದ್ದ ಐ.ಎಂ. ಜಯರಾಂ ಶೆಟ್ಟರನ್ನು ಸಮತಾ ಪಾರ್ಟಿಗೆ ಸೇರಿಸಿಕೊಂಡು ಕರ್ನಾಟಕ ರಾಜ್ಯದ ಅಧ್ಯಕ್ಷರನ್ನಾಗಿಸಿದ್ದರು.   ಐ.ಎಂ. ಜಯರಾಂ ಶೆಟ್ಟರು ಬಿಜೆಪಿ ಬಿಟ್ಟು ಬರಲು ಕಾರಣ ಈಗ ಬಿಹಾರದಿಂದ ರಾಜ್ಯಸಭೆಗೆ ಆಯ್ಕೆ ಆಗಿರುವ ಉಡುಪಿ ಮೂಲದ ಅನಿಲ್ ಪ್ರಸಾದ್ ಹೆಗಡೆ ಮುಖ್ಯ ಕಾರಣ.   ಕರ್ನಾಟಕ ರಾಜ್ಯದಲ್ಲಿ ಜಾರ್ಜ್ ರ ಸಮತಾ ಪಾರ್ಟಿ ಮತ್ತು  ಬಿಜೆಪಿ ಕೆಲ ಕ್ಷೇತ್ರಗಳಲ್ಲಿ ಸೀಟು ಹೊಂದಾಣಿಕೆ ಮಾಡಿಕೊಂಡು ರಾಜ್ಯದಲ್ಲಿ NDA ಸರ್ಕಾರ ರಚಿಸುವ ಉದ್ದೇಶವೂ ಅವರದ್ದು...