ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಯ ಊರಲ್ಲಿ ನಡೆಯುವ ಮಾರಿಕಾಂಬಾ ಜಾತ್ರೆಯಿಂದ ರೋಡ್ ಬ್ಲಾಕ್ ಆಗದಂತೆ ತಡೆಯಲು ವಿಶೇಷ ಕ್ರಮದ ಅಗತ್ಯವಿದೆ.
#ಎರೆಡು_ವರ್ಷದ_ಹಿಂದೆ_ಆನಂದಪುರಂ_ಮಾರಿಜಾತ್ರೆ. #ಸುಮಾರು_ನಾಲ್ಕು_ಗಂಟೆ_ರಾಷ್ರೀಯ_ಹೆದ್ದಾರಿ_ಬಂದ್_ಆಗಿತ್ತು. #ರಾಷ್ಟ್ರೀಯ_ಮತ್ತು_ರಾಜ್ಯ_ಹೆದ್ದಾರಿಯ_ಉರಿನಲ್ಲಿ_ಮಾರಿಜಾತ್ರೆ_ಆಗುವಲ್ಲಿ_ಈ_ಸಮಸ್ಯೆ. #ಜಾತ್ರಾ_ಸಮಿತಿ_ಸ್ಥಳಿಯ_ಪೋಲಿಸರ_ಸಹಕಾರದಲ್ಲಿ_ಮುಂಜಾಗೃತೆ_ವಹಿಸಬೇಕು. ಈ ವಿಡಿಯೋ ಇವತ್ತಿಗೆ ಎರೆಡು ವರ್ಷದ ಹಿಂದಿನದ್ದು ಅವತ್ತು ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಆನಂದಪುರಂನ ಮಾರಿಕಾಂಬಾ ಜಾತ್ರೆಯ ರಾತ್ರಿ (11- ಮಾರ್ಚ್ -2020)ಯದ್ದು. ಆನಂದಪುರಂ ಇತಿಹಾಸದಲ್ಲೇ ಅತ್ಯಂತ ಅದ್ದೂರಿ ಜಾತ್ರೆ ಅದು, ಮಾಂಸಹಾರಿಗಳೆಲ್ಲರ ಮನೆಯಲ್ಲಿ ಕುರಿ ಮಾಂಸದ ಬೋಜನಕ್ಕೆ ಆಹ್ವಾನ ಪಡೆದವರೆಲ್ಲ ಆನಂದಪುರಂಗೆ ಸೇರುವ ಶಿಕಾರಿಪುರದಿಂದ ಬರುವ ಹೆದ್ದಾರಿ, ಹೊಸನಗರದಿಂದ ಆನಂದಪುರಂ ಮಾರ್ಗ, ರಿಪ್ಪನ್ ಪೇಟೆಯಿಂದ ಆನಂದಪುರಂ ಮಾರ್ಗ, ಸಾಗರದಿಂದ ಆನಂದಪುರಂ, ಶಿವಮೊಗ್ಗದಿಂದ ಆನಂದಪುರಂ ಮಾರ್ಗ ಹೀಗೆ ಎಲ್ಲಾ ಮಾರ್ಗಗಳಲ್ಲಿ ಜನ ತಮ್ಮ ತಮ್ಮ ದ್ವಿಚಕ್ರ ಮತ್ತು ಕಾರುಗಳಲ್ಲಿ ಒಂದೇ ಸಾರಿ ಬಂದು ಸೇರಿದ್ದರಿಂದ ಎಲ್ಲಾ ಮಾರ್ಗಗಳಲ್ಲಿ ನಾಲ್ಕು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ರೋಡ್ ಬ್ಲಾಕ್ ಆಗಿತ್ತು. ಇದರ ಮಧ್ಯ ಸಿಕ್ಕಿಬಿದ್ದ ಅಂಬ್ಯೂಲೆನ್ಸ್ ಮತ್ತೆ ಚಲಿಸಲು ನಾಲ್ಕು ಗಂಟೆ ಕಾಯಬೇಕಾಯಿತು ಇದರ ಮಧ್ಯ ಬೋಜನ ಕೂಟದ ಅವಸರದಿಂದ ಅಲ್ಲಲ್ಲೇ ವಾಹನ ಬಿಟ್ಟು ಕಾಲ್ನಡಿಗೆಯಲ್ಲಿ ಹೋಗಬೇಕಾದ ಪರಿಸ್ಥಿತಿ. ಇಂತಹ ಪರಿಸ್ಥ...