ನಮ್ಮ_ಊರಿನ_ರಸಿಕರು ಗೊರೂರು_ರಾಮಸ್ವಾಮಿ_ಅಯ್ಯಂಗಾರ್ ಈ ಪುಸ್ತಕ ಓದಬೇಕೆಂಬ ಬಯಕೆ ಬಹು ವರ್ಷಗಳದ್ದು ಆದರೆ ಸಾಧ್ಯವೇ ಆಗಿರಲಿಲ್ಲ, ಓದಬೇಕೆನ್ನುವ ಪುಸ್ತಕ ಓದಲಾಗದ ಪ್ರಸಂಗವೇ ಜಾಸ್ತಿ ಹಾಗಂತ ಎಲ್ಲಾ ಪುಸ್ತಕ ಓದಲು ಒಂದು ಜನ್ಮ ಸಾಕಾಗುವುದಿಲ್ಲ. ಒಬ್ಬ ಮನುಷ್ಯ ನಿರಂತರವಾಗಿ ಪ್ರತಿ ದಿನ 10 ರಿಂದ 20 ಪುಟ ಓದುವುದಾದರೆ ಅವನ ಜೀವಮಾನದಲ್ಲಿ 200 ಪುಟಗಳ ಎರಡು ಸಾವಿರ ಪುಸ್ತಕ ಮಾತ್ರ ಓದಲು ಸಾಧ್ಯ .... ನನ್ನ ಕಥಾ ಸಂಕಲನ ಓದಿದವರೆಲ್ಲ ಈ ಪುಸ್ತಕದ ಬಗ್ಗೆ ಹೇಳಿದ್ದರು ಆದರೆ ನಾನು ಓದಲಾಗಿರಲಿಲ್ಲ. ನನ್ನ 11 ನೇ ವಯಸ್ಸಿನಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅನುವಾದಿಸಿದ್ದ ಮಹಾತ್ಮಾಗಾಂಧೀಜೆ ಆತ್ಮ ಚರಿತ್ರೆ #ಸತ್ಯಾನ್ವೇಷಣೆ ಓದಿದ್ದರೂ ಈ ಪುಸ್ತಕ ಓದಿರಲಿಲ್ಲ. ನನಗೆ ತುಂಬಾ ಇಷ್ಟವಾದ ಪುಸ್ತಕ ಮಾರಾಟಗಾರರಾದ ಶಿಕಾರಿಪುರದ ಸುಪ್ರ ಪ್ರಕಾಶನದವರಿಗೆ ಕೇಳಿದ್ದೆ ಅವರು ಇವತ್ತು ಅಂಚೆಯಲ್ಲಿ ಕಳಿಸಿದ್ದಾರೆ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ 'ನಮ್ಮೂರ ರಸಿಕರು' ಕನ್ನಡ ಸಾಹಿತ್ಯ ಲೋಕದ ಅತ್ಯಂತ ಜನಪ್ರಿಯ ಮತ್ತು ಶ್ರೇಷ್ಠ ಹಾಸ್ಯ ಪ್ರಬಂಧಗಳ ಸಂಕಲನವಾಗಿದೆ. ಗ್ರಾಮೀಣ ಬದುಕಿನ ಮುಗ್ಧತೆ, ಹಾಸ್ಯ ಮತ್ತು ಅಲ್ಲಿನ ವಿಶಿಷ್ಟ ವ್ಯಕ್ತಿತ್ವಗಳನ್ನು ಗೊರೂರರು ಈ ಕೃತಿಯಲ್ಲಿ ಅತ್ಯಂತ ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ಗ್ರಾಮೀಣ ಭಾರತದ ಜೀವ...