Skip to main content

Posts

Showing posts with the label Hegade Subbanna specialist in traditional tender mango verifies collection

Blog number 2322. ಅಪ್ಪೆಮಿಡಿ ತಳಿ ಸಂರಕ್ಷಕ ವಿಜ್ಞಾನಿ ಬೇಳೂರು ಹೆಗಡೆ ಸುಬ್ಬಣ್ಣನವರಿಗೆ ಶ್ರದ್ಧಾಂಜಲಿಗಳು

#ಹೆಗಡೆ_ಸುಬ್ಬಣ್ಣ ಇನ್ನು ನೆನಪು ಮಾತ್ರ ಶ್ರದ್ಧಾಂಜಲಿಗಳು ಮಲೆನಾಡ_ಮಾವಿನ_ಅಪ್ಪೆಮಿಡಿ_ತಜ್ಞ #tendermangopickle #pickles #picles #gita #postalstamps #hegade #belurusubbanna #keladi #sagar #shivamogga #foodlover #foodblogger #Agriuniversity #horticulture    ಸಾಗರ ತಾಲೂಕಿನ ಕೆಳದಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಳೂರಿನ ಅಪರೂಪದ ಮಿಡಿ ಮಾವು ತಜ್ಞ ಬಿ.ವಿ. ಸುಬ್ಬರಾವ್‌ (87) ವಯೋಸಹಜವಾದ ದೀರ್ಘ ಕಾಲದ ಅನಾರೋಗ್ಯದ ಹಿನ್ನೆಲೆ ತಮ್ಮ ಸ್ವಗೃಹದಲ್ಲಿ ನ.27ರ ಬುಧವಾರ ಬೆಳಿಗ್ಗೆ ನಿಧನ ಹೊಂದಿದರು. ವಿಶೇಷ ಜ್ಞಾನದ ವಿಶೇಷ ಸಾಧನೆಯ ಇವರಿಗೆ ಶ್ರದ್ಧಾಂಜಲಿಗಳು ಅರ್ಪಿಸುತ್ತೇನೆ.   ನಮ್ಮ ಸಾಗರ ತಾಲ್ಲೂಕಿನ 87ರ ವಯೋವೃದ್ಧರಾದ ಬೇಳೂರಿನ ಸುಬ್ಬಣ್ಣ ಹೆಗ್ಗಡೆ (B.V. ಸುಬ್ಬರಾವ್) ನೂರಕ್ಕೂ ಹೆಚ್ಚಿನ ಅಪ್ಪೆಮಿಡಿ ತಳಿ ಗುರುತಿಸಿ ಸಸಿ ಮಾಡಿದ್ದಾರೆ. ಅಷ್ಟೆ ಅಲ್ಲ ಈ ಎಲ್ಲಾ ಮೂಲ ತಳಿಯ ಸೊನೆಯನ್ನು ಸಂಗ್ರಹಿಸಿದ್ದಾರೆ. ಅದನ್ನೆಲ್ಲ ಮಾಹಿತಿಯೊಂದಿಗೆ ಇದಕ್ಕಾಗಿ ಪ್ರತ್ಯೇಕ ರೆಪ್ರಿಜೇಟರ್ ಲ್ಲಿ ತುಂಬಿ ಕಾಪಿಟ್ಟಿದ್ದಾರೆ.   ನಾನು ಇವರ ಬೇಟಿ ಮಾಡಲು 2008ರಲ್ಲಿ ಇವರ ಮನೆಗೆ ಹೋಗಿದ್ದೆ ಅವರ ಕೃಷಿ_ಅನುಭವ_ಸಂಗ್ರಹಗಳನ್ನ ಪ್ರತ್ಯಕ್ಷ ನೋಡಿದ್ದೆ.    ಅಪ್ಪೆಮಿಡಿ ಮರಗಳನ್ನ ಹುಡುಕಿ ಈ ದಂಪತಿ ಕಾಡು ಮೇಡು ಅಲೆದಿದ್ದಾರೆ ಅಷ್ಟೆ ಅಲ್ಲ ಎತ...