Skip to main content

Posts

Showing posts with the label Sri varasiddi vinayaka swamy miniature by advanced 3D technology

Blog number 1141.ತ್ರೀಡಿ ಟೆಕ್ನಾಲಜಿ ಎಂಬ ಹೊಸ ಅವಿಷ್ಕಾರದಿಂದ ನಮ್ಮ ಊರಿನ ಶ್ರೀ ವರಸಿದ್ಧಿ ವಿನಾಯಕ ದೇವರ ಮಿನಿಯೇಚರ್ ವಿಗ್ರಹಗಳ ತಯಾರಿಯ ಪ್ರಯತ್ನ. ಈ ಸ್ಕ್ಯಾನರ್ ಬೆಲೆ 50 ಲಕ್ಷ!!

#ಹೊಸ_ತಂತ್ರಜ್ಞಾನದ_3D_ಸ್ಕ್ಯಾನಿಂಗ್_ಪ್ರಿಂಟಿಂಗ್_ಮೌಲ್ಡಿಂಗ್. #ನಮ್ಮೂರ_ವರಸಿದ್ದಿ_ವಿನಾಯಕ_ದೇವಸ್ಥಾನದಲ್ಲಿ #ದೇವರ_ವಿಗ್ರಹದ_ಯಥಾವತ್ತಾದ_ನಾಲ್ಕು_ಇಂಚಿನ_ಗಾತ್ರದ_ವಿಗ್ರಹ_ತಯಾರಿಗಾಗಿ. #ಈ_ತಂತ್ರಜ್ಞಾನದಿಂದ_ವೈದ್ಯಕೀಯ_ಕ್ಷೇತ್ರ_ಆಟೋಮೊಬೈಲ್_ಕ್ಷೇತ್ರದಲ್ಲಿ_ಹೊಸ_ಶಕೆ_ಪ್ರಾರಂಭ. #ಭಾರತದಲ್ಲಿ_ಬೆರಳೆಣಿಕೆಯಷ್ಟು_ಸಂಸ್ಥೆಗಳಿದೆ_ಅದರಲ್ಲಿ_ಈ_ಆಕೃತಿ_3D_ನಂಬರ್_ಒನ್_ಸಂಸ್ಥೆ.     ನಮಗೆ ಡಿಪ್ಲೋಮದ ಮೊದಲ ವರ್ಷ ಡ್ರಾಯಿಂಗ್ ಕ್ಲಾಸ್ ಇತ್ತು, ಅದರಲ್ಲಿ 3D ಡ್ರಾಯಿಂಗ್ ಮಾಡುವುದು ಕಷ್ಟಕರ ಅಂತ ಸಾಗರದ ಸಂಜಯ್ ಮೆಮೊರಿಯಲ್ ಪಾಲಿಟೆಕ್ನಿಕ್ ನ ಡ್ರಾಯಿಂಗ್ ಮಾಸ್ಟರ್ ಜೋಷಿ ಹೇಳುತ್ತಿದ್ದರು.   ಆದರೆ ಅದು ನನಗೆ ಮಾತ್ರ ಸುಲಭವಾಗಿತ್ತು ಆಗಿನ ವಾಷಿ೯ಕ ಪರೀಕ್ಷೆಯಲ್ಲಿ 3D ಡ್ರಾಯಿಂಗ್ ಗೆ 45 ಅಂಕ ಇಟ್ಟಿದ್ದರಿಂದ ನಾನು ಅದನ್ನೆ ಬಿಡಿಸಲು ಪ್ರಾರಂಬಿಸಿದ್ದೆ.    ಪರೀಕ್ಷಾ ಕೊಠಡಿಯ ಮೇಲ್ವಿಚಾರಕರಿಗೆ ಇಡೀ ಕೊಠಡಿಯಲ್ಲಿ ನಾನೊಬ್ಬನೆ ಮಾತ್ರ ಇದನ್ನು ಬಿಡಿಸುತ್ತಿರುವುದು ನೋಡಿ ಅನುಮಾನದಿಂದ ಪ್ರಶ್ನಿಸಿದರು ಆಗ ನಾನು ಪ್ರಶ್ನೆ ಪತ್ರಿಕೆಯ ತೋರಿಸಿದೆ.    ಆದರೆ ಅವರಿಗೆ ಅನುಮಾನ ಉಂಟಾಯಿತು ಈ ವಿದ್ಯಾರ್ಥಿ ತಪ್ಪಾಗಿ ಬರೆದು ಪೇಲ್ ಆದಾನೆಂಬ ಸದುದ್ದೇಶದಿಂದ ಆಡಳಿತ ಮಂಡಳಿಗೆ ತಿಳಿಸಿದ್ದಾರೆ ತಕ್ಷಣ ನಮ್ಮ ಜೋಷಿ ಮಾಸ್ಟರ್ ನ್ನೇ ಕಳಿಸಿದ್ದಾರೆ ಅವರು.    ತುಂಬಾ ಗಡಿಬಿಡಿ...