Blog number 1176. ಕಾಗೋಡು ಹರತಾಳು ಜುಗಲ್ಬಂದಿ, ರಾಜಕೀಯ ಲಾಭ ನಷ್ಟದ ಲೆಕ್ಕಾಚಾರ, ಗೆದ್ದವರು ಮತ್ತು ಸೋತವರ ಸೌಹಾರ್ದ ಸಂಬಂದ
#ಹರತಾಳುಕಾಗೋಡು ಜುಗಲ್ಬ೦ದಿ, ಹಾಲಪ್ಪರ ಜಾಣ ನಡೆ ಹತಾಷ ಕಾ೦ಗ್ರೇಸ್ ಕಾಯ೯ಕತ೯ರು# ಇಡೀ ರಾಜ್ಯದಲ್ಲೇ ಬಹುಶಃ ವಿಧಾನ ಸಭೆಗೆ ಪರಸ್ಪರ ಸ್ಪದಿ೯ಸಿದ ಸೋತವರೂ ಗೆದ್ದವರೂ ಈ ರೀತಿ ಸಾಮರಸ್ಯದಲ್ಲಿ ಇರುವುದು ಶಿವಮೊಗ್ಗ ಜಿಲ್ಲೆಯ ಸಾಗರ ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ ಅಂತ ನನ್ನ ಅಂದಾಜು. ಸೊರಬದಲ್ಲಿ ಕುಮಾರ್ ಮತ್ತು ಮದು, ತೀಥ೯ಹಳ್ಳಿಯಲ್ಲಿ ಜ್ಞಾನೆಂದ್ರ ಮತ್ತು ಕಿಮ್ಮನೆ, ಭದ್ರಾವತಿಯಲ್ಲಿ ಸಂಗಮೇಶ್ ಮತ್ತು ಅಪ್ಪಾಜಿಗೌಡರು, ಶಿವಮೊಗ್ಗದಲ್ಲಿ ಈಶ್ವರಪ್ಪ ಮತ್ತು ಪ್ರಸನ್ನ ಕುಮಾರ್, ಶಿಕಾರಿಪುರದಲ್ಲಿ ಯಡೂರಪ್ಪ ಮತ್ತು ಗೋಣಿ ಮಾಲ್ತೇಶ್, ಶಿವಮೊಗ್ಗ ಗ್ರಾಮಾಂತರದಲ್ಲಿ ಅಶೋಕ ನಾಯಕ ಮತ್ತು ಶಾರದಾ ಪೂಯ೯ ನಾಯಕ್ ರ ಜಟಾಪಟಿ ಮತ್ತು ಆಯಾ ಪಕ್ಷದ ಕಾಯ೯ಕತ೯ರು ಹಾವು ಮುಂಗುಸಿಯ೦ತೆ ಇದ್ದಾರೆ. ಆದರೆ ಸಾಗರದ ಶಾಸಕರಾಗಿರುವ ಹರತಾಳು ಹಾಲಪ್ಪ ತಾವು ಸೋಲಿಸಿದ ಕಾಂಗ್ರೇಸ್ ನ ಮಂತ್ರಿ ಕಾಗೋಡು ತಿಮ್ಮಪ್ಪ ರ ಜೊತೆ ಗೆಳೆತನ ಬೆಳೆಸಿದ್ದಾರೆ, ಪರಸ್ಪರ ವೇದಿಕೆಯಲ್ಲಿ ಅವರವರ ಪಕ್ಷದ ಹಿತ ಕಾಪಾಡುವ ಮಾತು ವತ೯ನೆ ಕಡಿಮೆ ಏನು ಆಗಿಲ್ಲ. ಮತದಾರರಿಗೆ ಇವರಿಬ್ಬರ ಈ ಸಂಬಂದ ಆದಶ೯ವಾಗಿ ಕಂಡು ಬಂದರೂ ಬಿಜೆಪಿ ಮತ್ತು ಕಾಂಗ್ರೇಸ್ ಕಾಯ೯ಕತ೯ರಿಗೆ ಇದು ಬಿಸಿ ತುಪ್ಪ ಆಗಿದೆ ನುOಗಲು ಆಗುತ್ತಿಲ್ಲ ಉಗಳಲು ಸಾಧ್ಯವಿಲ್ಲ. ಹಾಲಿ ಶಾಸಕರಾದ ಹಾಲಪ್ಪರಿಗೆ ಇದರಿಂದ ಲಾಭವೇ ಹೊರತು ನಷ್ಟವಿಲ್ಲ ಆದರೆ ಕಾಗೋಡರ ಕಾಂಗ್...