Blog number 915. ಸ್ಥಳಿಯ ಮತ್ತು ಆಯಾ ಊರಿನ ಸಮೀಪದ ಪ್ರವಾಸಿ ತಾಣಗಳ ಮಾಹಿತಿ ಕೈಪಿಡಿ ಆಯಾ ಊರುಗಳ ಉಪಹಾರ ಮತ್ತು ವಸತಿ ಗೃಹಗಳ ಮಾಲಿಕರು ತಮ್ಮಲ್ಲಿಗೆ ಬರುವ ಪ್ರವಾಸಿಗಳಿಗೆ ನೀಡಿ ಪ್ರವಾಸೋದ್ಯಮ ಅಭಿವೃದ್ದಿಗೆ ಕೈ ಜೋಡಿಸಬಹುದು.
#ಪ್ರತಿ_ಊರಿನ_ಸಮೀಪದ_ಪ್ರವಾಸಿ_ತಾಣಗಳ_ಮಾಹಿತಿ_ಪ್ರವಾಸಿಗಳಿಗೆ_ಸಿಗಬೇಕು. #ನಮ್ಮ_ಲಾಡ್ಜ್_ಕೇಂದ್ರವಾಗಿಸಿ_ಸಮೀಪದ_ಪ್ರವಾಸಿತಾಣಗಳ_ಕೈಪಿಡಿ. #ಸಮೀಪದ_50_ಕೀಮಿ_ಒಳಗಿನ_50ರಿಂದ_100ಕಿಮಿ_ಮತ್ತು_100ಕಿಮಿ_ನಂತರದ_ಪ್ರವಾಸಿಕೇಂದ್ರ_ಗುರುತಿಸಿದೆ. #ಸ್ಥಳಿಯ_ಲಾಡ್ಜ್_ರೆಸ್‌ಟೋರೆಂಟಲ್ಲಿ_ಇದು_ಪ್ರವಾಸಿಗಳಿಗೆ_ಉಚಿತವಾಗಿ_ಸುಲಭವಾಗಿ_ಸಿಗುವಂತಾಗಬೇಕು. ನಮ್ಮ ನಮ್ಮ ಊರ ಸಮೀಪದಲ್ಲಿ ಏನಿದೆ ಎಂಬುದು ನಮಗೆ ಗೊತ್ತಿರುತ್ತದೆ ಆದರೆ ದೂರದಿಂದ ಪ್ರವಾಸ ಬಂದವರಿಗೆ ಇದು ಗೊತ್ತಿರುವುದಿಲ್ಲ ಆದರೆ ಅವರಿಗೆ ನಾವು ಸುಲಭವಾಗಿ ಈ ಮಾಹಿತಿ ನೀಡುವ ಕೈಪಿಡಿ ಅಚ್ಚುಹಾಕಿಸಿ ಆಸಕ್ತರಿಗೆ ಸಿಗುವಂತೆ ಮಾಡುವ ಕೆಲಸ ಆಯಾ ಊರಿನ ಲಾಡ್ಜ್ ಮತ್ತು ರೆಸ್ಟೋರೆಂಟ್ ಗಳು ಮಾಡಬೇಕು ಯಾಕೆಂದರೆ ಪ್ರವಾಸಿಗಳು ತಮ್ಮ ವಸತಿ ಮತ್ತು ಆಹಾರಕ್ಕೆ ಈ ಕೇಂದ್ರಗಳನ್ನೆ ಅವಲಂಬಿಸುತ್ತಾರೆ. ನಮ್ಮ ಲಾಡ್ಜ್ #ಹೊಂಬುಜ_ರೆಸಿಡೆನ್ಸಿ ಮತ್ತು ಹೊಸ ಬ್ಲಾಕ್ #ಹೊಂಬುಜ_ಗಾರ್ಡನೀಯ, ಸಸ್ಯ ಹಾರಿ #ಮಲ್ಲಿಕಾ_ವೆಜ್ ರೆಸ್ಟೋರೆಂಟ್,#ಚಂಪಕಾ_ಪ್ಯಾರಾಡೈಸ್ ನಾನ್ ವೆಜ್ ಹೋಟೆಲ್,#ಕೃಷ್ಣ_ಸರಸ_ಕನ್ವೆನ್ಷನ್_ಹಾಲ್ ಮತ್ತು #ವಿಕ್ಟೋರಿಯಾ_ಕಾಟೇಜ್, ಶಿರೋದಾರ_ಚಿಕಿತ್ಸಾ_ಕೇಂದ್ರಗಳು ಶಿವಮೊಗ್ಗದಿಂದ ಜೋಗ್ ಫಾಲ್ಸ್ ಮಾರ್ಗದಲ್ಲಿ 50 ಕಿ.ಮಿ.ದೂರದ ಆನಂದಪುರಂನ ಪ್ರಾರಂಭದಲ್ಲಿ ಸಿಗುವ #ಯಡೇಹಳ್ಳಿ_ವೃತ್ತದಲ್...