Skip to main content

Posts

Showing posts with the label STATE EDUCATION MINISTER A.R. BADRINARAYAN IYENGAR STUDIED ANANDAPURAM GOVT PRIMARY SCHOOL

ವಿದ್ಯಾಮಂತ್ರಿ ಪ್ರಾಥಮಿಕ ವಿದ್ಯೆ ಕಲಿತ ಆನಂದಪುರಂನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ

.       #ಭಾಗ_5. #ವಿದ್ಯಾಮಂತ್ರಿಗೆ_ವಿದ್ಯೆ_ಕಲಿಸಿದ_ಶಾಲೆ #ರಾಜ್ಯದ_ಶಿಕ್ಷಣಮಂತ್ರಿ_ಆಗಿದ್ದ_ಬದರಿನಾರಾಯಣ_ಆಯ್ಯಂಗಾರರು_ಓದಿದ್ದ #ಸಕಾ೯ರಿ_ಕಿರಿಯಪ್ರಾಥಮಿಕ_ಶಾಲೆಗೆ_ಈಗ_122_ವರ್ಷ.   #ಆನಂದಪುರದ_ಜಾಮಿಯ_ಮಸೀದಿ_ಎದುರಿನ_ಶಾಲೆ   ಆನಂದಪುರಂನ ಬದರಿನಾರಾಯಣ ಅಯ್ಯಂಗಾರರು ಶಾಸಕರಾಗಿ, ಮಂತ್ರಿಯಾಗಿ, ಸಂಸದರಾಗಿ ರಾಜ್ಯದ ರಾಜಕಾರಣದಲ್ಲಿ ತಮ್ಮ ಚಾಪು ಮೂಡಿಸಿದವರು ಇವರಿಂದ ಇವರ ಹುಟ್ಟೂರು ಆನಂದಪುರಂ ಕೂಡ ಪ್ರಸಿದ್ದಿ ಪಡೆಯಲು ಕಾರಣರಾದರು.   ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಆನಂದಪುರದ ಹಾಲಿ ಜಾಮಿಯ ಮಸೀದಿಯ ಎದುರಿನ ಸಕಾ೯ರಿ ಕಿರಿಯ ಪ್ರಾಥಮಿಕ  ಶಾಲೆಯಲ್ಲಿ ಮಾಡಿದ್ದು ಇತಿಹಾಸ.   ಇದು ಬ್ರಿಟೀಶ್ ಆಡಳಿತ ಕಾಲದಲ್ಲಿ ಯಡೇಹಳ್ಳಿ ಪ್ರವಾಸಿ ಮಂದಿರ ನಿರ್ಮಾಣದ ಸರಿ ಸುಮಾರು ಒಂದೇ ಕಾಲದಲ್ಲಿ ನಿರ್ಮಾಣ ಆಗಿರ ಬಹುದು.    ಈ ಶಾಲೆಗೆ 1999 ರಲ್ಲಿ ನೂರು ವರ್ಷ ಆಗಿತ್ತು ಆಗ ಈ ಶಾಲೆಯ ಶತಮಾನೋತ್ಸವ ಆಚರಿಸಬೇಕು, ವಿಶೇಷ ಅಂದರೆ ಈ ಶಾಲೆಯಲ್ಲಿ ವಿದ್ಯಾಬ್ಯಾಸ ಮಾಡಿದ ನಮ್ಮ ಊರಿನ ಬದರಿನಾರಾಯಣ ಅಯ್ಯಂಗಾರರು ಈ ರಾಜ್ಯದ ವಿದ್ಯಾ ಮಂತ್ರಿ ಆಗಿದ್ದು ಎಂದು ನಾನು ಆಗ ಜಿಲ್ಲಾ ಪಂಚಾಯತ್  ಸದಸ್ಯನಾಗಿದ್ದಾಗ ಪ್ರಯತ್ನ ಮಾಡಿದಾಗ ಅದನ್ನು ಉದ್ದೇಶಪೂರ್ವಕವಾಗಿ ನಡೆಯದಂತೆ ತಡೆಯುವ ಪ್ರಯತ್ನದಿಂದ ನಾನು ಈ ಮಹತ್ತರ ಕಾಯ೯ಕ್ರಮ ನಡೆಸಲು ಸಾಧ್ಯವಾಗಲಿಲ್ಲ. ...