ಭಾಗ -49, ಆನಂದಪುರಂ ಇತಿಹಾಸ, ಭಾಂಗ್ಲಾ ವಿಮೋಚನಕ್ಕಾಗಿ ಭಾ೦ಗ್ಲಾ ಪಾಕಿಸ್ಥಾನ ಯುದ್ಧದಲ್ಲಿ ಭಾಗವಹಿಸಿದ್ದ ಭಾರತೀಯ ಸೈನಿಕರಾಗಿ ಗುಂಡೇಟು ತಿಂದು ನಿವೃತ್ತರಾಗಿ ಆನಂದಪುರಂನಲ್ಲಿ ನೆಲೆಸಿ ಆನಂದಪುರಂನ ಮೊದಲ ಪತ್ರಿಕಾ ವಿತರಕರಾಗಿದ್ದ ಹುಚ್ಚಾಚಾರ್.
#ಭಾಗ_49. #ಆನಂದಪುರಂ_ಇತಿಹಾಸ. #ಆನಂದಪುರಂನ_ಮೊದಲ_ಪತ್ರಿಕಾ_ವಿತರಕರು_ನಿವೃತ್ತ_ಸೈನಿಕರು. #ಬಾಂಗ್ಲಾ_ಪಾಕಿಸ್ತಾನ_ಯುದ್ಧದಲ್ಲಿ_ಕಾಲಿಗೆ_ಗುಂಡೇಟು_ತಿಂದವರು. #ಆನಂದಪುರಂನಲ್ಲಿ_ನೆಲೆಸಿ_ಮಕ್ಕಳನ್ನು_ವಿದ್ಯಾವಂತರಾಗಿಸಿ_ಆನಂದಪುರಂನಲ್ಲೇ_ಜೀವಾಂತ್ಯ_ಆದವರು. 1950ರ ದಶಕದಲ್ಲಿ ಆನಂದಪುರಂಗೆ ಬಂದವರು ನಿವೃತ್ತ ಯೋದ ಹುಚ್ಚಾಚಾರರು, ಬಂದವರಿಗೆ ನೆಲೆ ಕಾಣಲು ಸಹಕರಿಸಿದವರು ವೆಂಕಟಾಚಲಯ್ಯಂಗಾರರು ಅಗ್ರಹಾರದ ಅವರದ್ದೇ ಮನೆ ಬಾಡಿಗೆ ಪಡೆದು ಆನಂದಪುರಂನಲ್ಲಿ ಕುಟುಂಬದೊಂದಿಗೆ ನೆಲೆಸುತ್ತಾರೆ. ಇವರಿಗೆ ಸಹಕರಿಸಿದವರು ಶಿಕ್ಷಕರಾಗಿದ್ದ ಶೇಷಾಚಾರ್ ಕುಟುಂಬ ( ಪ್ರಾಣೇಶ್ ಆಚಾರ್ ತಂದೆ). ಬಾಂಗ್ಲಾ ವಿಮೋಚನ ಯುದ್ದ ಬಾಂಗ್ಲಾ ಮತ್ತು ಪಾಕಿಸ್ತಾನದ ಜೊತೆ ನಡೆದಾಗ ಭಾರತೀಯ ಸೈನ್ಯ ಬಾಂಗ್ಲಾ ಪರವಹಿಸಿತ್ತು ಆಗ ಯುದ್ಧದಲ್ಲಿ ಕಾಲಿಗೆ ಗುಂಡು ಬಿದ್ದು ನಿವೃತ್ತರಾಗಿ ಬಂದವರು ಹುಚ್ಚಾಚಾರ್. ಚಳಿ ಇರಲಿ ಮಳೆ ಇರಲಿ ಎಡ ಮುಂಗೈಯಲ್ಲಿ ಪತ್ರಿಕೆಗಳನ್ನು ಹಿಡಿದು ಕೊಂಡು ಗುಂಡು ಬಿದ್ದು ಊನ ಆಗಿದ್ದ ಕಾಲು ಎಳೆದುಕೊಂಡು ಶುಭ್ರ ಪಂಚೆ ಶರ್ಟ ಧರಿಸಿ ಯಾವತ್ತೂ ಶೇವ್ ಆಗಿರುವ ಮುಖದಲ್ಲಿ ಇಡೀ ಆನಂದಪುರಂಗೆ ಪತ್ರಿಕೆಯನ್ನು ನಡೆದುಕೊಂಡೇ ಹೋಗಿ ವಿತರಿಸುತ್ತಿದ್ದರು. ಆಗ ಪತ್ರಿಕೆ ಓದುವವರೂ ಕಡಿಮೆ, ಹುಚ್ಚಾಚಾರರು ತಮ್ಮ ನಿವೃತ್ತಿ ವೇತನದಿಂದ ಜೀವನ ಮಾಡುತ್ತ...