Blog number 1505. ಆನಂದಪುರಂ ಇತಿಹಾಸ ಭಾಗ-10 ನವೀಕರಣದ ನೆಪದಲ್ಲಿ ಕಳೆದು ಹೋದ ಶಿವಮೊಗ್ಗ ಮೆಗಾನ್ ಆಸ್ಪತ್ರೆ ಎದುರಿನ ದಾನಿಗಳ ವಿವರ ತಾಮ್ರ ಪಲಕ. ಬದರಿನಾರಾಯಣ ಅಯ್ಯಂಗಾರರು ವಕೀಲಿ ವೃತ್ತಿ ತೊರೆಯಲು ಆ ಒಂದು ಘಟನೆ ಕಾರಣವಾಯಿತು.
#ಆನಂದಪುರಂ_ ಇತಿಹಾಸ_ಭಾಗ_10. #ಬದರಿನಾರಾಯಣ್_ಅಯ್ಯಂಗಾರರು_ಶಿವಮೊಗ್ಗದಲ್ಲಿ_ಪ್ರಾರಂಬಿಸಿದ_ವಕೀಲ_ವೃತ್ತಿ #ವಕೀಲಿ_ವೃತ್ತಿ_ತೊರೆಯಲು_ಕಾರಣ_ಆದ_ಆ_ಪ್ರಕರಣ #ಶಿವಮೊಗ್ಗದ_ಮೆಗ್ಗಾನ್_ಆಸ್ಪತ್ರೆ_ನಿಮಾ೯ಣಕ್ಕೆ_ದೊಡ್ಡ_ಮೊತ್ತದ_ದೇಣಿಗೆ_ನೀಡಿದ_ರಾಮಕೃಷ್ಣ_ಅಯ್ಯಂಗಾರರು #ದೇಣಿಗೆ_ನೀಡಿದ_ಅಮೂಲ್ಯ_ದಾಖಲೆ_ವಿವರದ_ತಾಮ್ರದ_ಫಲಕ_ಈಗ_ಎಲ್ಲಿದೆ? ರಾಮ ಕೃಷ್ಣ ಆಯ್ಯಂಗಾರರ ಶ್ರೀಮ೦ತಿಕೆ, ಸಮಾಜದಲ್ಲಿ ಅವರು ಪಡೆದ ಘನತೆ ಗೌರವಗಳು ಅವರ ಮಕ್ಕಳಲ್ಲಿ ಅಹಂಕಾರ ಅಥವ ದುರ್ಜಟಗಳಿಗೆ ಕಾರಣವಾಗದ್ದು ಸೋಜಿಗ. ಅಯ್ಯಂಗಾರರ ಕುಟುಂಬದಲ್ಲಿ ಕಾಫಿ ಟೀ ಬಳಕೆ ಯಾವತ್ತೂ ಇರಲಿಲ್ಲ, ಬೆಳಿಗ್ಗೆ 9 ಕ್ಕೆ ತೆಳು ಮಜ್ಜಿಗೆ ನಂತರ ಸ್ನಾನ ಪೂಜೆ ನಂತರ ಉಪಹಾರ, ಬದರಿನಾರಾಯಣ ಅಯ್ಯಂಗಾರರು ಮಾತ್ರ ರಾಜಕಾರಣಿ ಆದ್ದರಿಂದ ಅಪರೂಪಕ್ಕೆ ಕಾಫಿ ಸೇವಿಸುತ್ತಿದ್ದರು. ಆ ಕಾಲದಲ್ಲಿ ಶಿವಮೊಗ್ಗದಲ್ಲಿ ಬ್ರಿಟಿಷ್ ವೈದ್ಯ ಮೆಗ್ಗಾನ್ ರ ಹೆಸರಲ್ಲಿ ಜಿಲ್ಲಾ ಆಸ್ಪತ್ರೆ ಕಟ್ಟಲು ಮಹಾರಾಜರು ಯೋಜಿಸುತ್ತಾರೆ, ಆಗ ಮೈಸೂರು ಮಹಾರಾಜರ ಕನಸು ನನಸು ಮಾಡಲು ಜಿಲ್ಲಾ ಪ್ರಮುಖರು ಕೈಜೋಡಿಸಲು ಮುಂದಾಗುತ್ತಾರೆ ಮತ್ತು ಆ ಕಾಲದಲ್ಲೇ ಆನಂದಪುರದಲ್ಲಿ ರಾಮಕೃಷ್ಣ ಅಯ್ಯಂಗಾರರು ತಮ್ಮ ಪತ್ನಿ ಸ್ಮರಣಾಥ೯ ಸಾರ್ವಜನಿಕರಿಗೆ ಆಸ್ಪತ್ರೆ ನಿರ್ಮಿಸಿದ್ದರಿಂದ ಅವರೊಡನೆ ಚರ್ಚಿಸುತ್ತಾರೆ ಇದಕ್ಕೆ ಸಂಪೂರ್ಣ ಬೆಂಬಲ ನೀಡಿ ಆ ಕಾಲದಲ್ಲಿ ಅತ್ಯಂತ ದೊಡ್ಡ ಮೊತ್ತದ ದೇಣಿಗೆ (ಹ...