Skip to main content

Posts

Showing posts with the label Navatur Raju will supply Appemidi for pickle lovers

ಅಪ್ಪೆಮಿಡಿ ಉಪ್ಪಿನಕಾಯಿ ಪ್ರಿಯರೆ ಈ ನವಟೂರು ರಾಜು ಸಂಪರ್ಕಿಸಿದರೆ ನಿಮಗೆ ಮಾವಿನ ಮಿಡಿ ಸಿಗುತ್ತದೆ.

#ಮಲೆನಾಡ_ಅಪ್ಪೆಮಿಡಿ_ಪ್ರಿಯರಿಗಾಗಿ #ರಾಜು_ನವಟೂರು_ಮೊದಲೇ_ಪೋನ್_ಮಾಡಿ_ತಿಳಿಸಿದರೆ_ಮಾವಿನ_ಮಿಡಿ_ಒದಗಿಸುತ್ತಾರೆ. #ನಾನು_ಎರೆಡು_ಸಾರಿ_ಖರೀದಿಸಿದೆ.   ಕಳೆದ ಎರೆಡು ವರ್ಷ ಮಾವಿನ ಮಿಡಿ ಸಿಗಲೇ ಇಲ್ಲ, ಸಿಕ್ಕಿದರೂ ಇನ್ನೂ ಚೆನಾಗಿದ್ದು ನಾಳೆ ಮಾರಾಟಕ್ಕೆ ಬರಬಹುದು ಅಂತ ಮತ್ತು ಇನ್ನೂ ಕಡಿಮೆಗೆ ಸಿಗಬಹುದಂತ ಕಾಯುತ್ತಾ ಇದ್ದಾಗ ಮಾವಿನ ಹಣ್ಣಿನ ಸೀಸನ್ ಬಂದಿತ್ತು.   ನಮ್ಮ ಸುತ್ತ ಮುತ್ತಲಿನ ಮಾವಿನ ಮಿಡಿ ಮಾರಾಟಗಾರರು ಸ್ಥಳಿಯವಾಗಿ ಮಾರಾಟಕ್ಕೆ ಆಸಕ್ತಿವಹಿಸುವುದಿಲ್ಲ ಕಾರಣ ಸ್ಥಳಿಯರು ಅನೇಕ ಪರೀಕ್ಷೆ - ವಿಮರ್ಷೆ - ಚೌಕಾಸಿ ಅಮೇಲೆ ನಿರಾಕರಣೆ ಮಾಡುತ್ತಾರೆ.   ಅದೇ ಉಪ್ಪಿನಕಾಯಿ ಮಾವಿನ ಮಿಡಿ ಕೇಂದ್ರವಾಗಿರುವ ರಿಪ್ಪನ್ ಪೇಟೆಯಲ್ಲಿ ಹೆಬ್ಬಾರ್, ರಮೇಶ್, ಉಪ್ಪಿನಕಾಯಿ ಪ್ಯಾಕ್ಟರಿ ಮತ್ತು ಅನೇಕ ಹೋಟೆಲ್ ಅಂಗಡಿ ಮಾಲಿಕರು ತಕ್ಷಣ ಒ0ದು ಬೆಲೆ ನಿಗದಿ ಮಾಡಿ ಖರೀದಿಸಿ ಹಣ ನೀಡಿ ಕಳಿಸುತ್ತಾರೆ (ನಂತರ ಹೆಚ್ಚು ಬೆಲೆಗೆ ಅವರು ಮಾರುತ್ತಾರೆ).   ಹೀಗಾಗಿ ನಮಗೆ ಮಿಡಿ ಮಾವಿನಕಾಯಿ ಸಿಗುವುದಿಲ್ಲ ಆದ್ದರಿಂದ ಈ ಸಾರಿ ಹೇಗೆ? ಅಂತ ಯೋಚಿಸುವಾಗಲೇ ಗೆಳೆಯ #ಶೇಖ್_ಆಹಮದ್ ಸಾಹೇಬರು ಈ ರಿಪ್ಪನ್ ಪೇಟೆ ಸಮೀಪದ ರಾಜುನ ಮಿಡಿ ಜೊತೆಗೆ ನನ್ನ ಹತ್ತಿರ ಕಳಿಸಿದ್ದರು ನಾನು ಯಾವುದೇ ಪ್ರಶ್ನೆ ಚೌಕಾಸಿ ಮಾಡದೆ ಲೆಖ್ಖ ಮಾಡಿ ಪ್ರತಿ ಮಿಡಿಗೆ ಅವರು ಹೇಳಿದಂತೆ ರೂ 1.50 ಪೈಸೆ ಪಾವತಿ ಮಾಡಲು ಮನೆಯಲ್ಲಿ ತಿಳಿಸಿದ್ದೆ. ...