Skip to main content

Posts

Showing posts with the label Indipendence Golden jubilee gift of State government primary school was wanished before Indipendence dimond jubilee

Blog number 1960. ಸುವರ್ಣ ಸ್ವಾತಂತ್ರ್ಯೋತ್ಸವದ ಸವಿನೆನಪಿನ ಪ್ರಾಥಮಿಕ ಶಾಲೆಗಳ ಕೊಡುಗೆಯ ಬಹುಪಾಲು ಆನಂದಪುರಂ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ತಂದಿದ್ದೆ ಆದರೆ ಆ ಸಂಭ್ರಮ ಸ್ವಾತಂತ್ರ್ಯೋತ್ಸವದ ವಜ್ರ ಮಹೋತ್ಸವ ಆಚರಣೆ ಸಂದರ್ಭದಲ್ಲಿ ಇರಲಿಲ್ಲ ಇಂತಹ ಅನೇಕ ಶಾಲೆಗಳು ಬಾಗಿಲು ಮುಚ್ಚಿದೆ.

#25ವಷ೯ದ_ಹಿಂದಿನ_ನೆನಪು_ತರಿಸಿತು. #ಸ್ವಾತಂತ್ತ್ಯೋತ್ಸವದ_ಸುವರ್ಣಮಹೋತ್ಸವದ_ಪ್ರಾಥಮಿಕ_ಶಾಲೆಗಳು #ಸ್ವಾತಂತ್ರ್ಯೋತ್ಸವದ_ವಜ್ರಮಹೋತ್ಸವದಲ್ಲಿ_ಬಾಗಿಲು_ಹಾಕುತ್ತಿದೆ #ಏಕೆ...   1997 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದು 50 ನೇ ವರ್ಷದ ಆಚರಣೆ ಆಗಿದ್ದರಿಂದ #ಸುವರ್ಣ_ಸ್ವಾತಂತ್ಯೋತ್ಸವದ ಸಡಗರವೇ ಆಗಿತ್ತು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿಶೇಷ ಕಾಯ೯ಕ್ರಮಗಳು ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ್ ಗಳಿಗೂ ಪ್ರೇರಣೆ ನೀಡಿತ್ತು.   ಆಗ ಉತ್ಸಾಹಿ ಜಿಲ್ಲಾ ಪಂಚಾಯತನ ಸದಸ್ಯರಾಗಿದ್ದ ನಾವೆಲ್ಲ ಸೇರಿ ಜಿಲ್ಲಾ ಪಂಚಾಯತ್ ನಲ್ಲಿ ರಾತ್ರಿ 12ಕ್ಕೆ ವಿಶೇಷ ಸಭೆ ಆಯೋಜಿಸಿದ್ದೆವು, ಈಸೂರಿನಿಂದ ಸ್ವಾತಂತ್ರ ಜ್ಯೋತಿಯನ್ನು ತಂದಿದ್ದೆವು.   ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ಸುವರ್ಣ ಸ್ವಾತಂತ್ಯೋತ್ಸವದ ಸವಿ ನೆನಪಿಗಾಗಿ ಪ್ರಾಥಮಿಕ ಶಾಲಾ ಸೌಲಭ್ಯವಿಲ್ಲದ ಹಳ್ಳಿಗೆ ಹೊಸ ಶಾಲೆ ಮತ್ತು ಅದಕ್ಕೆ ಏಕ ಕೊಠಡಿ ಕಟ್ಟಡ ಮಂಜೂರು ಮಾಡಲು ಮುಂದಾಗಿತ್ತು.   ಶಿವಮೊಗ್ಗ ಜಿಲ್ಲಾ ಪಂಚಾಯತ್ ನ ಅವತ್ತಿನ 27 ಸದಸ್ಯರ ಕ್ಷೇತ್ರಕ್ಕೆ ಒಂದರಂತೆ 27 ಹೊಸ ಶಾಲೆಗೆ ಪ್ರಸ್ತಾವನೆ ಕೇಳಿದ್ದರು.   ಆದರೆ ಹಳ್ಳಿಗಳಲ್ಲಿ ಶಾಲೆಗೆ ಜಾಗ ಹೊಂದಿಸುವುದು, ಖಾಸಾಗಿ ಶಾಲಾ ಪೈಪೋಟಿಯಲ್ಲಿ ಸರ್ಕಾರಿ ಶಾಲೆಗೆ ಜನ ಆಸಕ್ತಿ ವಹಿಸುವುದಿಲ್ಲ ಎಂದು ಈ ಯೋಜನೆ ಟೇಕ್ ಆಫ್ ಆಗಲಿಲ್ಲ ಆದರೆ ನನ್ನ ಕ್ಷೇತ್ರದಲ್ಲಿ ಹೊಸ...