Blog number 889. ಮುಂಗಾರು ಬಂತೆಂದರೆ ಕಳಲೆ ಎಂಬ ಬಿದಿರು ಬೊಂಬಿನ ಮೊಳಕೆಯ ರುಚಿಕರ ಖಾದ್ಯಗಳ ಕಾಲ, ಪಶ್ಚಿಮ ಘಟ್ಟ ಪ್ರದೇಶದ ಮಲೆನಾಡಿನ ಜನ ತಾವು ಬೆಳೆಯುವ ಅಕ್ಕಿಯಿಂದ ರೊಟ್ಟಿ ತಯಾರಿಸಿ ಕಳಲೆ ಪಲ್ಯದೊಂದಿಗೆ ಸವಿಯುತ್ತಾರೆ, ಇದರಲ್ಲಿನ ನೈಸರ್ಗಿಕ ವಿಷ ನಿವಾರಿಸಿ ತಿನ್ನುವ ಬಗೆಯ ಮಾಹಿತಿ ತಲತಲಾಂತರದಿಂದ ಜನರಿಗೆ ತಿಳಿದಿದೆ.
#ಇದು_ಕಳಲೆ_ಖಾದ್ಯ_ತಿನ್ನುವ_ಕಾಲ_ #ಕಳಲೆ_ಪಲ್ಯ_ಅಕ್ಕಿರೊಟ್ಟಿ_ಪಶ್ಚಿಮಘಟ್ಟ_ಪ್ರದೇಶದ_ಮಲೆನಾಡ_ವಿಶೇಷ. #ಕಳಲೆ_ಕ್ಯಾನ್ಸರ್_ಹೃದಯ_ಸಂಬಂದಿ_ಕಾಯಿಲೆ_ದೂರ_ಮಾಡುತ್ತದೆ. #ಈಶಾನ್ಯ_ಭಾರತದಲ್ಲಿ_ಕಳಲೆ_ಮಾಂಸಹಾರ_ಅಡುಗೆಯಲ್ಲಿ_ಹೆಚ್ಚು_ಬಳಕೆ. ಪ್ರತಿ ವರ್ಷ ಮುಂಗಾರು ಪ್ರಾರಂಭದ ಜೂನ್ - ಜುಲೈ ಮತ್ತು ಆಗಸ್ಟ್ ನಲ್ಲಿ ಬಿದಿರು ಬೊಂಬಿನ ಚಿಗುರು ಅರಳುವ ಕಾಲ, ಬಿದಿರ ಮೆಳೆಯ ಬುಡದಲ್ಲಿ ನಾವು ಸ್ಥಳಿಯವಾಗಿ ಕರೆಯುವ ಕಳಲೆ ಮಣ್ಣಿನಿಂದ ಚುಪಾದ ಬಾಣದಂದೆ ಎದ್ದು ಬಂದು ನೋಡ ನೋಡುತ್ತಲೆ ಮುಗಿಲೆತ್ತರಕ್ಕೆ ಬೆಳೆದು ಬಿದಿರ ಬೊಂಬಾಗಿ ಬಿಡುತ್ತದೆ. ಭೂಮಿ ಬಿಟ್ಟು ಒಂದೆರೆಡು ಅಡಿ ಬೆಳೆಯುವ ಮುನ್ನ ಕತ್ತರಿಸಿ ಅದರ ಸಿಪ್ಪೆ ತೆಗೆದು ಅದರ ಒಳಗಿನ ಬೊಂಬಿನ ತಿರಳು ಸ್ಲೈಸ್ ಮಾಡಿ ನೀರಲ್ಲಿ ಎರಡರಿಂದ ಮೂರು ದಿನ ನೆನಸಿ ಪ್ರತಿ ದಿನ ನೀರು ಬದಲಿಸಿದರೆ ಮಾತ್ರ ಇದರಲ್ಲಿನ ನೈಸರ್ಗಿಕ ವಿಷ ನಿವಾರಿಸಲು ಸಾಧ್ಯ ನಂತರ ಇದನ್ನು ತರಕಾರಿಯಂತೆ ವಿವಿಧ ರೀತಿಯ ಖಾದ್ಯ ತಯಾರಿಸಬಹುದು. ಈಶಾನ್ಯ ಭಾರತದಲ್ಲಿನ ವಿಬಿನ್ನ ಬಿದಿರಿನ ಕಳಲೆ ಅರಿಷಿಣ ಪುಡಿಯೊಂದಿಗೆ 10 ರಿಂದ 15 ನಿಮಿಷ ಬೇಯಿಸಿ ನೀರು ತೆಗೆದರೆ ಸಾಕು ಆದರೆ ದಕ್ಷಿಣ ಭಾರತದ ಪಶ್ಚಿಮ ಘಟ್ಟದ ಬಿದಿರಿಗೆ 3 ದಿನ ಬೇಕೇ ಬೇಕು. ನಾಗಲ್ಯಾಂಡ್, ಮಣಿಪುರ, ಅಸ್ಸಾಂ, ಜಾರ್ಕಂಡ್, ಸಿಕ್ಕಿಂ, ಹಿಮಾಚಲ ಪ್ರದೇಶದಲ್ಲಿ ಇದನ್ನು ಮೀನು ಮ...