Skip to main content

Posts

Showing posts with the label Malandoor Master famous teacher

Blog number 1989. ಮಲಂದೂರು ಮೇಷ್ಟರೆಂಬ ಸಜ್ಜನರು ಆನಂದಪುರಂನಲ್ಲಿ ದಿನಸಿ - ಬಟ್ಟೆ-ಹೋಟೆಲ್ ಉದ್ಯಮ ಸ್ಥಾಪಿಸಿ ನಂತರ ದೊಡ್ಡ ಜಮೀನ್ದಾರರಾದ ಕಥೆ.

#ಆನಂದಪುರಂ_ಇತಿಹಾಸ_ಪುಸ್ತಕದಲ್ಲಿ #ಜಮೀನ್ದಾರ್_ಮಲಂದೂರು_ ಮೇಷ್ಟರ_ಲೇಖನ_ಇಲ್ಲದಿದ್ದರೆ_ಪೂರ್ಣ_ಆಗುವುದಿಲ್ಲ #ಆನಂದಪುರಂನ_ಮೊದಲ_ಹೋಲ್_ಸೇಲ್_ದಿನಸಿ_ಮಂಡಿ_ಮಾಡಿದವರು #ಸ್ವಾತಂತ್ರ್ಯ_ಪೂವ೯ದಲ್ಲಿ_ಆನಂದಪುರಂ_ಶಿಕ್ಷಕರು #ನಂತರ_ಶ್ರೀಮಂತ_ಭೂಮಾಲಿಕರಾದರು #ಇವರ_ಪುತ್ರ_ಸತ್ಯನಾರಾಯಣ್_ಮುಂಬೈಯಲ್ಲಿ_ಐಎಎಸ್_ಕೋಚಿಂಗ್_ಸೇರಿದ್ದರು #ರೈಲು_ಅಪಘಾತದಿಂದ_ಅವರ_ಗುರಿ_ಸಾದಿಸಲು_ಆಗಲಿಲ್ಲ   ಆನಂದಪುರಂನ ಕೆ.ವಿ.ಸುರೇಶರು ನಾನು ಬರೆಯುತ್ತಿರುವ #ಆನಂದಪುರಂ_ಇತಿಹಾಸ ಪುಸ್ತಕಕ್ಕೆ ಹೆಚ್ಚಿನ ಮಾಹಿತಿ ಸಹಕಾರ ನೀಡುವವರಲ್ಲಿ ಅವರು ಪ್ರಮುಖರು ಅವರು ಈ ಪುಸ್ತಕದಲ್ಲಿ ಮಲಂದೂರು ಮೇಷ್ಟರ ಲೇಖನ ಇರಲೇಬೇಕು ಅನ್ನುತ್ತಿದ್ದರು ಆದರೆ ಅವರ ಪೋಟೋ ಸಂಗ್ರಹ ಸಾಧ್ಯವಾಗಿರಲಿಲ್ಲ.    ಮೊನ್ನೆ ಮಧ್ಯಾಹ್ನ ಮಲಂದೂರು ಮೇಷ್ಟರ ಮೊಮ್ಮಕ್ಕಳು ಅಂದರೆ ಸತ್ಯನಾರಾಯಣರ ಮಕ್ಕಳಾದ ಶ್ರೀಮತಿ ವಿದ್ಯಾಸೂರ್ಯಕುಮಾರ್, ಶ್ರೀಮತಿ ಜ್ಯೋತಿ ಸಂಜೀವ್, ರಮೇಶ್, ಗೀತಾಂಜಲಿ ದತ್ತಾತ್ರೇಯ ಮತ್ತು ಹರೀಶ್ ಸಾಗರದ ಅವರ ಸಂಬಂದಿಗಳ ಮನೆಯ ನಾಗ ಪ್ರತಿಷ್ಟಾಪನೆಯ ವಾರ್ಷಿಕೋತ್ಸವಕ್ಕೆ ಹೋಗುವಾಗ ನನ್ನ ಕಛೇರಿಗೆ ಬಂದಿದ್ದರು.    ಒಂದು ವಿಶೇಷ ಅಂದರೆ ಇವರ ತಂದೆ ಸತ್ಯನಾರಾಯಣಣ್ಣ ಮತ್ತು ನನ್ನ ತಂದೆ ಗಳಸ್ಯ ಕಂಠಸ್ಯ ಸ್ನೇಹಿತರು, ವಿದ್ಯಾ ನನ್ನ ಅಕ್ಕ ಉಮಾದೇವಿ ಕ್ಲಾಸ್ ಮೇಟ್, ರಮೇಶ ನನ್ನ ಕ್ಲಾಸ್ ಮೇಟ್, ಗೀತಾಂಜಲಿ ನನ್ನ ಪತ್ನಿಯ ಕ್ಲಾಸ್ ಮೇಟ್ ಆ...