ಭಾಗ_9_ಕಾಳುಮೆಣಸಿನ_ರಾಣಿ #ಚೆನ್ನಬೈರಾದೇವಿ_ಸಮಾದಿ_ಸ್ಥಳ_ಇಲ್ಲಿದೆ. ರಾಷ್ಟ್ರೀಯ ಸ್ಮಾರಕ ಮಾಡಿ ಸಂರಕ್ಷಣೆ ಮಾಡ ಬೇಕಾದ ಪುರಾತತ್ವ ಇಲಾಖೆ ಮತ್ತು ಸರ್ಕಾರಿ ಸಂಶೋದಕರ ನಿರಾಸಕ್ತಿಯಿಂದ ಅಮೂಲ್ಯವಾದ ರಾಣಿ ಚೆನ್ನ ಬೈರಾದೇವಿ ಸಮಾಧಿ ಶಾಸನ/ ನಿಶಿಧಿ ಶಾಸನ ಒಡೆದು ಕಿತ್ತು ನಿಶಿದಿ ಮಂಟಪದಿಂದ ಹೊರಕ್ಕೆ ಒಗೆಯಲಾಗಿದೆ. #ಶಿವಮೊಗ್ಗ ಜಿಲ್ಲೆಯ #ಸಾಗರ ತಾಲೂಕಿನ #ಆವಿನಹಳ್ಳಿ ಸಮೀಪದ #ಗೆಣಸಿನಕುಣಿಯ_ಸಿದ್ದೇಶ್ವರ_ದೇವಾಲಯವೇ ಮಹಾ ಮಂಡಲೇಶ್ವರಿ ಚೆನ್ನ ಬೈರಾದೇವಿ ಸಮಾಧಿ ಸ್ಥಳ. ಅನೇಕ ಊರಲ್ಲಿ ಜೈನ ಸಮಾದಿ ಸ್ಥಳ ನಿಶಿದಿ ಮಂಟಪಗಳು ಸಿದ್ದಪ್ಪ - ಸಿದ್ದೇಶ್ವರ ಗುಡಿಗಳಾಗಿದೆ ಅದಕ್ಕೆ ಕಾರಣ ವಿವರಿಸುವ ಹಿಂದಿನ ನನ್ನ ಪೇಸ್ ಬುಕ್ ಲೇಖನ ಸರಣಿಗಳಲ್ಲಿ ನೋಡಿದ್ದೀರಿ. ಗೆಣಸಿನಕುಣಿಯ ಸಿದ್ದೇಶ್ವರ ದೇವಾಲಯದಲ್ಲಿ ಇರುವ ಮೂಲ ರಾಣಿ ಚೆನ್ನ ಬೈರಾದೇವಿ ಸಮಾಧಿ ಪೀಠದ ಮೇಲೆ ಇನ್ನೊಂದು ಶಿವಲಿಂಗದ ಪೀಠ ಇಟ್ಟು ಅದರ ಮೇಲೆ ಲಿಂಗ ಪ್ರತಿಷ್ಠಾಪನೆ ಮಾಡಲಾಗಿದೆ. ಇಕ್ಕೇರಿ ಕೋಟೆಯಲ್ಲಿ ಕೆಳದಿ ರಾಜ ವೆಂಕಟಪ್ಪ ನಾಯಕರ ಬಂದನದಲ್ಲಿದ್ದ ಗೇರುಸೊಪ್ಪೆಯ ಸಾಳ್ವ ವಂಶದ ಪೋರ್ಚುಗೀಸರಿಂದ ಕಾಳು ಮೆಣಸಿನ ಬಿರುದು ಪಡೆದ ರಾಣಿ ಚೆನ್ನ ಬೈರಾದೇವಿ 10 ಅಕ್ಟೋಬರ್ 1608 ರಲ್ಲಿ ಸಲ್ಲೇಖನ ವೃತ ಕೈಗೊಂಡು ಇಹಲೋಕ ತ್ಯಜಿಸಿದರು. ಅವರ ಅಂತ್ಯಕ್ರಿಯೆ ಅವಿನಹಳ್ಳಿ ಸಮೀಪದ ಗೆಣಸಿನಕುಣಿಯಲ್ಲಿ ನೆರವೇರಿಸಿ ಅಲ್ಲಿ ಸಮಾದಿ ಮಾಡಿ ಸ...