Skip to main content

Posts

Showing posts from January, 2024

Blog number 1937. ಶಿವಮೊಗ್ಗ ಸ್ಮಾರ್ಟ್ ಸಿಟಿ ಸಾವಿರ ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿದೆ ಆದರೆ ಪಾದಚಾರಿ ನಡೆದರೆ ಕುಸಿದು ಸಾಯುವ ಚರಂಡಿ ಸ್ಲಾಬ್, ಟ್ರೇ ಪಾರ್ಕ್ ನಲ್ಲಿ 5 ವರ್ಷದ ಮಗು ಕುಳಿತ ಜಿಂಕೆ ಪ್ರತಿಮೆ ಮುರಿದು ಬಿದ್ದು ಸಾಯುವುದಾದರೆ ....

#ಶಿವಮೊಗ್ಗದ_ಸ್ಮಾರ್ಟ_ಸಿಟಿ_ಯೋಜನೆ #ಮುದ್ದಿನಕೊಪ್ಪದ_ಟ್ರೀ_ಪಾರ್ಕ್ #ಇನ್ನೆಷ್ಟು_ಜೀವ_ಬಲಿ_ಪಡೆದೀತು? #ಇದಕ್ಕೆ_ಉತ್ತರದಾಯಿತ್ವ_ಯಾರು? #ಕಳಪೆ_ಕಾಮಗಾರಿ_ಫಲಾನುಭವಿಗಳು_ಯಾರು? #ಶಿವಮೊಗ್ಗ_ಪಾದಚಾರಿಗಳೆ_ಎಚ್ಚರ! #ಮಕ್ಕಳನ್ನು_ಪಾರ್ಕಗೆ_ಕರೆದೊಯ್ಯುವ_ಪೋಷಕರೆ_ಎಚ್ಚರ! #ನಿಮ್ಮ_ಜೀವಕ್ಕೆ_ಬೆಲೆಯೂ_ಇಲ್ಲ_ಗ್ಯಾರಂಟಿಯೂ_ಇಲ್ಲ.     ಇದು ಪ್ರಜ್ಞಾವಂತರ ಜಿಲ್ಲೆ ನಾಲ್ಕು ಮುಖ್ಯಮಂತ್ರಿಗಳನ್ನು ನೀಡಿದ, ರೈತ ಚಳವಳಿ - ದಲಿತ ಚಳವಳಿ ಹುಟ್ಟಿಗೆ ಕಾರಣದ ಶಿವಮೊಗ್ಗ ಜಿಲ್ಲೆಯಲ್ಲಿ ಅನೂಷ್ಟಾನವಾಗಿರುವ ಕಳಪೆ ಗುಣಮಟ್ಟದ ಕಾಮಗಾರಿಗಳು.    ಶಿವಮೊಗ್ಗ ಸಿಟಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೇಂದ್ರ ಸರ್ಕಾರ ಸಾವಿರ ಕೋಟಿ ರೂಪಾಯಿಗಳನ್ನು ವಿನಿಯೋಗಿಸಿದೆ ಯೋಜನೆ ರೂಪು ರೇಷೆ ಒಳ್ಳೆಯದೆ ಆದರೆ ಅನೂಷ್ಟಾನ ಅನುಮಾನವೇ ಆಗಿದೆ.  ಶಿವಮೊಗ್ಗದ ಚರಂಡಿಗೆ ಹಾಕಿದ ಸ್ಲಾಬ್ ಕುಸಿದು ಪಾದಚಾರಿ ಮರಣ ಹೊಂದಿದ ಘಟನೆ ನಡೆದಿದೆ ಅಂದರೆ ಚರಂಡಿ ಸ್ಲಾಬ್ ಒಬ್ಬ ಮನುಷ್ಯನ ಬಾರವೂ ತಡೆದುಕೊಳ್ಳದಂತ ಸ್ಲಾಬ್ ಗಳನ್ನು ಹಾಕಿ ಎಷ್ಟು ಹಣ ಬಿಲ್ ಆಗಿರಬಹುದು?   ಅರಣ್ಯ ಇಲಾಖೆಯ ಮುದ್ದಿನಕೊಪ್ಪದ ಟ್ರೀ ಪಾರ್ಕ್ ನಲ್ಲಿ ಸಿಮೆಂಟ್ ಜಿಂಕೆ ಏರಿದ 5 ವರ್ಷದ ಮಗು ಜಿಂಕೆ ಪ್ರತಿಮೆಯೆ ಕುಸಿದು ಸಾವಿಗೆ ಈಡಾಯಿತು ಅಂದರೆ ಟ್ರೀ ಪಾರ್ಕ್ 10 ಕೇಜಿ ಬಾರದ ಮಗುವಿನ ತೂಕ ತಾಳಲಾರದೇ ಬೀಳುವ ಸಿಮೆಂಟಿನ ಜಿಂಕೆ ವಿಗ್ರಹ ಅಳವಡಿಸಿದ್ದಾರೆಂದರೆ?  

Blog number 1936. ನಮ್ಮೂರ ರಥ ಶಿಲ್ಪಿಗಳೊಂದಿಗೆ

#ನಮ್ಮೂರ_ವರಸಿದ್ದಿ_ವಿನಾಯಕ_ಸ್ವಾಮಿ_18ನೇ_ವರ್ಷದ_ರಥೋತ್ಸವ. #ರೈಲ್ವೆ_ಬ್ರಾಡ್_ಗೇಜ್_ಮಾಗ೯_ವಿದ್ಯುದೀಕರಣದಿಂದ #ರಥದ_ಎತ್ತರ_ಕಡಿಮೆಗೊಳಿಸ_ಬೇಕಾದ_ಅನಿವಾರ್ಯತೆ #ನಮ್ಮೂರ_ರಥ_ಶಿಲ್ಪಿ_ವೆಂಕಟರಮಣ_ಆಚಾರ್ #ನಮ್ಮೂರ_ರಥ_ದಾನಿ_ಕೆಂಜಿಗಾಪುರ_ಶ್ರೀಧರ_ಭಟ್ಟರು #ರಥದ_ಗೋಪುರದ_ಮೇಲ್ಚಾವಣೆ_ಮಾಡಿದವರು_ಆನಂದಪುರಂ_ನರಸಿಂಹಾಚಾರ್ https://youtu.be/cuRSj3DxAkE?feature=shared    ಇದೇ ಫೆಬ್ರುವರಿ 13ರ ಮಂಗಳವಾರ ನಮ್ಮ ಊರಿನ ಶ್ರೀ ವರಸಿದ್ದಿ ವಿನಾಯಕ ದೇವರ 18ನೇ ವರ್ಷದ ಬ್ರಹ್ಮ ರಥೋತ್ಸವ ನಡೆಯಲಿದೆ ಈ ಸಂದರ್ಭದಲ್ಲಿ ಒಂದು ಸಮಸ್ಯೆ ಉದ್ಭವಾಯಿತು ಅದೇನೆಂದರೆ ರಥ ರಾಜಭೀದಿ ಉತ್ಸವ ದೇವಾಲಯದಿಂದ ರಾಷ್ಟ್ರೀಯ ಹೆದ್ದಾರಿಯ ಯಡೇಹಳ್ಳಿ ವೃತ್ತದ ವರೆಗೆ ಪ್ರತಿ ವರ್ಷ ಬರುತ್ತದೆ ಆದರೆ ಈ ಎರ್ಷ ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ರೈಲು ಮಾರ್ಗ ವಿದ್ಯುದೀಕರಣಗೊಳಿಸಿದ್ದರಿಂದ ರೈಲ್ವೆ ಇಲಾಖೆ ರೈಲ್ವೆ ಗೇಟ್ ಸಮೀಪ ಎರಡು ಕಡೆ 15 ಅಡಿಗಿಂತ ಎತ್ತರದ ವಾಹನ ಸಂಚರಿಸದಂತೆ ಬ್ಯಾರಿಕೇಡ್ ಹಾಕಿದೆ.    ಇದರಿಂದ ನಮ್ಮ ದೇವಾಲಯದ ರಥ 22 ಅಡಿ ಎತ್ತರ ಇರುವುದರಿಂದ ರಥ ರಾಜಭೀದಿ ಉತ್ಸವಕ್ಕೆ ತಡೆಯಾಗಿದೆ ಆದರೆ ಪ್ರತಿ ವರ್ಷದಂತೆ ರಥ ರಾಜಭೀದಿ ಉತ್ಸವ ಈ ಮಾರ್ಗದಲ್ಲಿ ನಡೆಸಲೇಬೇಕೆಂದರೆ ನಮ್ಮ ದೇವಾಲಯದ ರಥದ ಎತ್ತರ ಕಡಿಮೆಗೊಳಿಸುವುದು ಅನಿವಾರ್ಯವಾಗಿದೆ.   ಆದ್ದರಿಂದ ನಿನ್ನೆ ಈ ರಥ ನಿರ್ಮಿಸಿದ್ದ ರಥ ಶಿಲ್ಪಿ ವೆಂಕಟರಮಣ

Blog number 1935. ಶಿಕಾರಿಪುರದ ಪಡುವಾರಳ್ಳಿ ಪಾಂಡವರಾಗಿ ಯಡೂರಪ್ಪರ ನೇತೃತ್ವದ ಮಂತ್ರಿ ವೆಂಕಟಪ್ಪರ ವಿರುದ್ದ ಹೋರಾಟದಲ್ಲಿ ಪೋಲಿಸರಿಂದ ದೈಹಿಕ ಹಲ್ಲೆಗೊಳಗಾಗಿ ಬಳ್ಳಾರಿ ಜೈಲು ಸೇರಿದ ಶಿಕಾರಿಪುರದ ರಾಜು ನಾಥಪಂಥದ ಅನುಯಾಯಿ ನನ್ನ ಅತಿಥಿ.

#ಹತ್ತು_ವರ್ಷದ_ನಂತರದ_ಬೇಟಿ #ಶಿಕಾರಿಪುರದ_ರಾಜು #ನಾಥ_ಪಂಥದ_ಅನುಯಾಯಿಗಳು #ಹಲವಾರಿ_ಮಠದ_ಹಿಂದಿನ_ಸ್ವಾಮಿಗಳಾದ_ಪೀರ್_ಸೋಮನಾಥಜೀ_ಶಿಷ್ಯರು #ಜೀವ_ತ್ಯಾಗ_ಮಾಡಿದ_ಗುರುಗಳು_ಕಣ್ಣು_ತೆರೆದ_ಪವಾಡ #ಶಿಕಾರಿಪುರದ_ಪಡುವಾರಳ್ಳಿ_ಪಾಂಡವರು_ಇವರು    ಹೊಸನಗರದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸೂಪರಿಡೆಂಟ್ ಆಗಿದ್ದ ಶಿಕಾರಿಪುರದ ರಾಜು ಮತ್ತು ಗ್ರಾಮ ಲೆಖ್ಖಗಿರಾಗಿದ್ದ ಮೋಹನ್ ಅವರು ನನಗೆ ಆಪ್ತರಾಗಿದ್ದು ಇವರಿಬ್ಬರು ನಾಥ ಪಂಥದ ಅನುಯಾಯಿಗಳಾದ್ದರಿಂದ,   ನಾಥ ಪಂಥದ ಬಗ್ಗೆ ಹೆಚ್ಚು ತಿಳಿದಿದ್ದಾರೆ - ಓದಿದ್ದಾರೆ ಮತ್ತು ನಾಥ ಪಂಥದ ಅನೇಕ ಉತ್ತರ ಭಾರತದ ಕ್ಷೇತ್ರಗಳನ್ನು ವರ್ಷಂಪ್ರತಿ ಸಂದರ್ಶಿಸುತ್ತಾರೆ.    ಕೊಡಚ್ಚಾದ್ರಿ ಸಿದ್ದ ಪೀಠ ಯಡಮೊಗೆಯ ಹಲವಾರಿ ಮಠ ನಾಥ ಪಂಥದ ಉತ್ತರಪ್ರದೇಶದ ಗೋರಕಪುರದ ಮಹಾಂತರಾದ ಯೋಗಿ ಆದಿತ್ಯನಾಥರ ಆಡಳಿತಕ್ಕೆ ಒಳಪಟ್ಟಿದೆ ಪ್ರತಿ 12 ವರ್ಷಕ್ಕೆ ನಾಸಿಕದಲ್ಲಿ ನಡೆಯುವ ಕುಂಭಮೇಳದ ಮರುದಿನ ಹೊರಡುವ ಬಾರಾಪಂಥ ಯಾತ್ರೆಯಲ್ಲಿ ನೂರಾರು ಸಂತರು ಪಶ್ಚಿಮ ಘಟ್ಟ ಪ್ರದೇಶದ ಮಧ್ಯ ನಡೆದು ಬರುತ್ತಾರೆ ಅಂತಿಮವಾಗಿ ಮಂಗಳೂರಿನ ಕದ್ರಿ ಮಠ ತಲುಪುವ ಬಾರಾಪಂಥ್ ಯಾತ್ರೆ ಈ ಹಲವಾರಿ ಮಠದಲ್ಲಿ ತಂಗುತ್ತದೆ.    ಈ ಮಠದ ಹಿಂದಿನ ಗುರುಗಳಾದ ಗ್ಯಾಲಿಯರ್ ನ ಫೀರ್ ಸೋಮನಾಥಜೀ ಅವರಿಗೆ ಇವರಿಬ್ಬರೂ ತುಂಬಾ ಆತ್ಮೀಯರಾಗಿದ್ದರು, ಅವರು 2014ರಲ್ಲಿ ದೇಹಾಂತ್ಯಕ್ಕೆ ಮೊದಲು ಅವರ ಸೇವೆ ಮಾಡಿದವರು ಇವರು.    ಅವತ್ತು ಗುರುಗಳು

Blog number 1934. ಅರಸೀಕೆರೆ ಕಸ್ತೂರ್ಬಾ ಗಾಂಧಿ ರಾಷ್ಟ್ರೀಯ ಮೆಮೋರಿಯಲ್ ಟ್ರಸ್ಟ್ ನಿಂದ ವಿಧಾಯ ಘೋಷಿಸಿದ 75 ರ ವಯೋಮಾನದ ನಾರಾಯಣ ರಾವ್ ಶರ್ಮಾರ ಸಾರ್ಥಕ ಸೇವೆ ಶ್ಲಾಘನೀಯ ಮತ್ತು ಸ್ಮರಣೀಯ.

#ಅರಸಿಕರೆ_ಕಸ್ತೂರಬಾ_ಆಶ್ರಮದ_ನಾರಾಯಣ_ರಾವ್_ಶರ್ಮ #ದಿನಾಂಕ_14_ಫೆಬ್ರುವರಿ_2024ಕ್ಕೆ_75_ವಷ೯ #ಎಲ್ಲಾ_ಜವಾಬ್ದಾರಿಗಳಿಂದ_ನಿವೃತ್ತಿ_ಘೋಷಿಸಿದ್ದಾರೆ #ಸ್ವಾತಂತ್ರ್ಯ_ಹೋರಾಟಗಾರ_ದಂಪತಿಗಳು_ಮಂತ್ರಿಗಳೂ_ಆಗಿದ್ದ_ಹೆಚ್_ದಾಸಪ್ಪ_ಮತ್ತು_ಯಶೋಧರಮ್ಮ #ಸ್ಥಾಪಿಸಿದ_ಅರಸಿಕೆರೆಯ_ಕಸ್ತೂರಬಾ_ರಾಷ್ಟ್ರೀಯ_ಸ್ಮಾರಕ_ಟ್ರಸ್ಟ್ #ಇಲ್ಲಿ_ಮಹಾತ್ಮಾ_ಗಾಂಧಿ_ಚಿತಾಭಸ್ಮ_ತಂದು_ಗಾಂಧೀಜಿ_ಸಮಾದಿ_ನಿರ್ಮಿಸಿದ್ದಾರೆ.   ಇವತ್ತು ಅರಸಿಕೆರೆಯ ಕಸ್ತೂರಬಾ ರಾಷ್ಟ್ರೀಯ ಟ್ರಸ್ಟಿನ ಕಾರ್ಯಕಾರಿ ಸಮಿತಿ ಸದಸ್ಯತ್ವಕ್ಕೆ, ಇಲ್ಲಿನ ಭಾರತೀಯ ಗೋ ಪರಿವಾರ ಚಾರಿಟಬಲ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಸ್ಥಾನಕ್ಕೆ ನಾಳೆ ರಾಜಿನಾಮೆ ಸಲ್ಲಿಸಲಿದ್ದೇನೆ ಎಂದು ನಾರಾಯಣ ರಾವ್ ಶರ್ಮಾ ಘೋಷಿಸಿದ್ದಾರೆ.   ಇವರ 75ನೇ ಹುಟ್ಟು ಹಬ್ಬ ಇದೇ ಬರುವ ಫೆಬ್ರುವರಿ 14 ಕ್ಕೆ ಇದೆ ಆದರೆ ಅವರು ಅದನ್ನು ಆಚರಿಸುವುದಿಲ್ಲ ಅವರೇ ಬರೆದು ಕೊಂಡಂತೆ ಅವರಿಗೆ 20 ವರ್ಷದ ಪ್ರಾಯ ತಲುಪುವ ತನಕ ಹುಟ್ಟು ಹಬ್ಬದ ಆಚರಣೆ ರಾಷ್ಟ್ರೀಯ ನಾಯಕರು ಮಾತ್ರ ಆಚರಿಸುವುದು ಎಂದು ಬಾವಿಸಿದವರು.   ಪೇಸ್ ಬುಕ್ ಗೆಳೆಯರಾಗಿರುವ ಇವರ ಎಲ್ಲಾ ಕಾರ್ಯಚಟುವಟಿಕೆ ಗಮನ ಸೆಳೆಯುತ್ತಿತ್ತು, ಅದರಲ್ಲಿ ವಿಶೇಷವಾಗಿ ಅರಸಿಕೆರೆಯ ಪ್ರಥಮ ಮತ್ತು ಏಕೈಕ ಸಾವಯವ ತರಕಾರಿ ಮಾರಾಟ ಕೇಂದ್ರ ಅಲ್ಲಿ ಟೋಮೋಟೋ ಕಾರ್ಡ್ ಪಡೆದರೆ ವರ್ಷಪೂರ್ತಿ ಕೇವಲ 10 ರೂಪಾಯಿಗೆ ಒಂದು ಕಿಲೋ ಸಾವಯವ ಟೋಮೋಟೋ ಸಿಗುತ್ತದೆ ಮಾರುಕಟ್ಟೆಯಲ್ಲಿ 80 ರೂಪಾಯಿಗೆ

Blog number 1933. ಸಾಗರ ಪಟ್ಟಣದವರು ತಮ್ಮ ಊರು ಕಟ್ಟಿದ ರಾಜನನ್ನೆ ಮರೆತಿದ್ದಾರೆ.

#ಕೆಳದಿ_ರಾಜರ_ಕೊಡುಗೆ. #ಒಂದು_ಸುಸಜ್ಜಿತ_ಪಟ್ಟಣವನ್ನು_ತನ್ನ_ಅಜ್ಜನ_ನೆನಪಿಗಾಗಿ_ನಿರ್ಮಿಸಿದ_ಐತಿಹಾಸಿಕ_ದಾಖಲೆ #ಈಗಿನ_ಸಾಗರಕ್ಕೆ_ಇದೆ #ಇಲ್ಲಿ_ನಡೆಯುವ_ಅದ್ದೂರಿ_ಮಾರಿ_ಜಾತ್ರೆ_ರಾಜ್ಯದಲ್ಲೇ_ಪ್ರಸಿದ್ದಿ_ಪಡೆದಿದೆ #ಯುದ್ದ_ಗೆದ್ದು_ಬಂದ_ಕೆಳದಿ_ರಾಜ_ಮಾರಿಕಾಂಬೆಯ_ಊರ_ಹೊರಗಿದ್ದ_ಪಾದಗಳನ್ನು_ಊರೊಳಗೆ_ಸ್ಥಾಪಿಸುತ್ತಾರೆ #ಸಾಗರ_ಪಟ್ಟಣ_ಕೆರೆ_ಮಾರಿಕಾಂಬ_ಗದ್ದುಗೆ_ನಿರ್ಮಿಸಿದ_ಕೆಳದಿ_ರಾಜ_ವೆಂಕಟಪ್ಪನಾಯಕರ_ಪುನರ್_ಸ್ಮರಣೆ_ಆಗಲಿ #ಸಾಗರ_ಪಟ್ಟಣದ_ಹೆಸರು_ನಾಲ್ಕು_ಶತಮಾನದ_ಹಿಂದೆ_ಸದಾಶಿವಸಾಗರ #ಈಗಿನ_ಗಣಪತಿಕೆರೆಯೆ_ಸದಾಶಿವಸಾಗರ_ಎಂಬ_ಸರೋವರ. #ಸಾಗರ_ಪಟ್ಟಣ_ನಿರ್ಮಿಸಿದ_ರಾಜ_ಹಿರಿಯವೆಂಕಟಪ್ಪನಾಯಕರ_ಒಂದೂ_ಸ್ಮಾರಕ_ಸಾಗರದಲ್ಲಿ_ಇಲ್ಲ    ಈಗ #ಸಾಗರ ಎಂಬ ನಮ್ಮ ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಕೇಂದ್ರ ಸುಮಾರು ನಾಲ್ಕುನೂರು ವರ್ಷದ ಹಿಂದೆ ಕೆಳದಿ ರಾಜ ಹಿರಿಯ ವೆಂಕಟಪ್ಪ ನಾಯಕರು ತಮ್ಮ ಅಜ್ಜ ಸದಾಶಿವ ನಾಯಕರ (ಆಳಿದ ಕಾಲ ಮಾನ 1530 - 1566) ಸ್ಮರಣಾರ್ಥ ಅವರ ಹೆಸರಲ್ಲಿ ಅಂದರೆ #ಸದಾಶಿವಸಾಗರ ಎಂದು ನಾಮಕರಣ ಮಾಡಿ ನಿರ್ಮಿಸಿದ ಆ ಕಾಲದ ಸುಂದರ ಪಟ್ಟಣ ಆಗಿತ್ತು.   ಇದೇ ಹೆಸರಿನ ಸುಂದರ ಸರೋವರ ಗಣಪತಿ ದೇವಸ್ಥಾನದ ಕೆಳಗೆ ನಿಮಿ೯ಸಿದ್ದರು ಕಾಲಾಂತರದಲ್ಲಿ ಈ ಸದಾಶಿವ ಸಾಗರ ಎಂಬ ಸರೋವರ ಗಣಪತಿ ಕೆರೆ ಎಂದಾಗಿದೆ. ಕೆಳದಿ ರಾಜರಲ್ಲಿ ಹಿರಿಯ ವೆಂಕಟಪ್ಪ ನಾಯಕರು ದೀಘ೯ ಕಾಲದ 43 ವಷ೯ಆಡಳಿತ ಮಾಡಿದವರು(ಆಳಿದ ಕಾಲ ಮಾನ 1586-1629)

Blog number 1932. ಆಡಳಿತದಲ್ಲಿರುವ ರಾಜಕಾರಣಿಗಳು ತಮ್ಮ ಎದುರಾಳಿ ತಮಗೆ ಸ್ವರ್ದೆ ನೀಡುತ್ತಾನೆಂದರೆ ಅವನನ್ನು ರಾಜಕೀಯವಾಗಿ ಮುಗಿಸಲು ಮಾಡುವ ತಂತ್ರಗಾರಿಕೆ ರವಡಿ ಲೀಸ್ಟ್ ಗೆ ಸೇರಿಸುವುದು.

#ಬಹು_ದಶಕದ_ಬೇಡಿಕೆ. #ಜಿಲ್ಲೆಯ_ROWDY_ಲಿಸ್ಟ್_ಪರಿಷ್ಕರಣೆ #ಈಡೇರಿ_ಎರೆಡು_ವರ್ಷಗಳಾಯಿತು #ಸಾಗರ_ವಿಧಾನಸಭಾ_ಕ್ಷೇತ್ರದ_ಅಭಿವೃದ್ಧಿಗಾಗಿ_ಪ್ರಾಮಾಣಿಕ_ಸೇವೆ_ಮಾಡಿದ್ದಕ್ಕೆ #ನನಗೂ_ಈ_ಪಟ್ಟಿಯಲ್ಲಿ_ಸ್ಥಾನ_ಕಲ್ಪಿಸಿದ್ದರು. #ಪರಿಷ್ಕರಣೆಯಲ್ಲಿ_ಪಟ್ಟಿಯಿಂದ_ಒಂದು_ಸಾವಿರದ_ನಾಲ್ಕುನೂರ_ಇಪ್ಪತ್ತು_ಜನ_ಹೊರಗೆ. #ಇನ್ನೊಮ್ಮೆ_ಅಭಿನಂದನೆಗಳು_ಆಗಿನ_ಜಿಲ್ಲಾ_ಕ್ಷಣಾಧಿಕಾರಿ_ಲಕ್ಷ್ಮೀಪ್ರಸಾದ್_ಗೃಹ_ಸಚಿವಗಿದ್ದ_ಆರಗಜ್ಞಾನೇಂದ್ರರಿಗೆ    ROWDY LIST ಅನ್ನೋದು ಸಮಾಜವನ್ನು ಕ್ರಿಮಿನಲ್ ಗಳ ಕಿರುಕುಳದಿಂದ ತಪ್ಪಿಸಲು ಮತ್ತು ಕ್ರಿಮಿನಲ್ ಗಳ ಮೇಲೆ ಕಣ್ಣಿಡಲು ಪೋಲಿಸ್ ಇಲಾಖೆಯ ಕಾನೂನು ಸುವ್ಯವಸ್ಥೆಯ ಆಚರಣೆಯ ಅಂಗವಾಗಿದೆ.   ಸಂವಿದಾನದಲ್ಲಿ ನ್ಯಾಯಾಂಗ ವ್ಯವಸ್ಥೆ ಇರುವಾಗ ಕಾರ್ಯಾಂಗದಲ್ಲಿ ಈ ವ್ಯವಸ್ಥೆ ಬೇಕಾ ಅಥವ ಬೇಡವೇ ಅನ್ನುವ ಚರ್ಚೆ ಇದೆ ಆದರೆ ಪೋಲಿಸರಿಗಿಂತ ಇದನ್ನು ದುರ್ಬಳಕೆ ಮಾಡುತ್ತಿರುವುದು ಮಾತ್ರ ಆಡಳಿತರೂಢ ರಾಜಕಾರಣಿಗಳು.   ಎರೆಡು ವರ್ಷದ ಹಿಂದೆ ನಮ್ಮ ಜಿಲ್ಲೆಯವರೇ ಆದ ಗೃಹ ಮಂತ್ರಿ ಆರಗ ಜ್ಞಾನೇಂದ್ರ ಅವರ ಆದೇಶದಂತೆ ಅಂದಿನ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳು ಶಿವಮೊಗ್ಗ ಜಿಲ್ಲೆ ಯ Rowdy list ಪರಿಷ್ಕರಣೆ ಮಾಡಿ 1420 ಜನರನ್ನು ಈ ಪಟ್ಟಿಯಿಂದ ಹೊರ ಹಾಕಲಾಗಿದೆ ಎಂಬ ಪ್ರಕಟನೆ ಘೋಷಿಸಿದ್ದರು.    ಬಹುಶಃ ರಾಜ್ಯದ ಪೋಲಿಸ್ ಇಲಾಖೆಯಲ್ಲಿಯೇ ಇಷ್ಟು ದೊಡ್ಡ ಪ್ರಮಾಣದ ರವಡಿ ಪಟ್ಟಿ ಪರಿಷ್ಕರಣೆ ಇದೆ ಮೊದಲಾಗಿರಬಹುದು ಮತ್ತು

Blog number 1931. ಆಚಾಪುರದ ತೀರ್ಥದಲ್ಲಿರುವ ಶಿಲಾಶಾಸನ 945 ವರ್ಷದ ಹಿಂದಿನದ್ದು ಆಗಿನ ಆಚಾಪುರದ ಹೆಸರು ಮಾಚರಾಜಪುರ,

#ಹತ್ತನೆ_ಶತಮಾನದಲ್ಲಿ_ಆಚಾಪುರದ_ಹೆಸರು_ಮಾಚರಾಜಪುರ #ಆಚಾಪುರ_ತೀರ್ಥದಲ್ಲಿನ_ಹತ್ತನೇ_ಶತಮಾನದ_ಶಿಲಾಶಾಸನ, #ಕಲ್ಯಾಣಿ_ಚಾಲುಕ್ಯರಾಜ_ಇಮ್ಮುಡಿ_ಜಯಸಿಂಹನ_ಸಾಮಂತ_ಮಾಚಿರಾಜನ_ಶಾಸನ #ಈಗಿನ_ಅಂದಾಸುರ_ಆ_ಕಾಲದಲ್ಲಿ_ಮಾಚಿರಾಜನ_ರಾಜದಾನಿ_ಆಗಿತ್ತು. #ಆಚಾಪುರದ_ಜಮೀನ್ದಾರರಾಗಿದ್ದ_ದಿವಂಗತ_ಬಸಪ್ಪಗೌಡರು_ಶಿಲಾಶಾಸನ_ಸಂರಕ್ಷಿಸಿಟ್ಟಿದ್ದಾರೆ #ಮಾಚಿರಾಜ_ಸ್ಥಾಪಿಸಿದ_ಮಾಚೇಶ್ವರ_ಆದಿತ್ಯ_ವಿಷ್ಣು #ಆದಿತ್ಯ_ವಿಷ್ಣು_ದೇವಾಲಯದ_ಸ್ಥಳ_ಅಕ್ಕಪಕ್ಕದಲ್ಲಿದ್ದು_ಅವಸಾನ_ಹೊಂದಿರಬೇಕು. #ಈಗ_ಇರುವುದು_ಮಾಚೇಶ್ವರ_ಮಾತ್ರ_ಅದು_ಜನರ_ಬಾಯಲ್ಲಿ_ತೀರ್ಥದ_ಈಶ್ವರ. #ಅಲ್ಲಿರುವ_ಬೋರ್ಡ್_ಮಹಾಬಲೇಶ್ವರ_ದೇವಾಲಯ_ಬಸವ_ತೀರ್ಥ_ಆಚಾಪುರ_ಎಂದಿದೆ. #ಕಾಲಾಂತರದಲ್ಲಿ_ಇಲ್ಲಿದ್ದ_ಆದಿತ್ಯ_ಮತ್ತು_ವಿಷ್ಣು_ದೇವರು_ಇಲ್ಲವಾಗಿದೆ.     ಎಪಿಗ್ರಾಪಿಯಾ ಕನಾ೯ಟಕ ಸಂಪುಟದಲ್ಲಿ 1902 ರಲ್ಲಿ ಆಗಿನ ಮೈಸೂರು ರಾಜ್ಯದ ಆರ್ಕಾಲಾಜಿಕಲ್ ಡಿಪಾರ್ಟ್ಮೆ೦ಟ್  ನಿರ್ದೇಶಕರಾಗಿದ್ದ ಬೆಂಜಮಿನ್ ಲೇವಿಸ್   ರೈಸ್ ರವರು ಸ್ವತಃ ಬಂದು ಆನಂದಪುರಂನ ಈ ಶಿಲಾ ಶಾಸನಗಳ ದಾಖಲು ಮಾಡಿರುವುದು ವಿಶೇಷ.   ಈ ಶಿಲಾ ಶಾಸನದ ಕಾಲ ಮಾನ ಕ್ರಿ.ಶ.1079 ಅಂದರೆ 945 ವರ್ಷಗಳ ಹಿಂದಿನ ಈ ಶಿಲಾ ಶಾಸನ ಆನಂದಪುರಂ ಇತಿಹಾಸಕ್ಕೆ ಅತ್ಯಂತ ಮಹತ್ವದಾಗಿದೆ.   ಈ ಶಿಲಾ ಶಾಸನ ಆಚಾಪುರದ ತೀರ್ಥದ ಹಾಲಿ ಈಶ್ವರ ದೇವಸ್ಥಾನದಲ್ಲಿ ನವೀಕೃತ ದೇವಾಲಯದಲ್ಲಿ ಒಳ ಭಾಗದಲ್ಲಿ ಸುರಕ್ಷಿತವಾಗಿ ಸಂರಕ್ಷಿಸಿಟ್ಟಿರುವುದು ಸ೦ತೋಷದ ವಿಷಯ ಆಗ

Blog number 1930. ಭಾಗ - 2 ವಿದ್ಯಾಮಂತ್ರಿ ಎ.ಆರ್. ಬದರಿ ನಾರಾಯಣ ಅಯ್ಯಂಗಾರ್ ನೆನಪುಗಳು

#ಭಾಗ_2. #ಆನಂದಪುರಂ_ವೇದನಾರಾಯಣ_ಭಟ್ಟರ_ಕಿರಿಯ_ಪುತ್ರ #ಕೆ_ವಿ_ಸುರೇಶ್_ಕುಮಾರ್_ನೆನಪಿನ_ಸುರಳಿಯಲ್ಲಿ #ವಿದ್ಯಾಮಂತ್ರಿ_ಆನಂದಪುರಂ_ಆರ್_ಬದರಿನಾರಾಯಣ_ಅಯ್ಯಂಗಾರ್_ನೆನಪುಗಳು. #ಆಗಿನ_ಮುಖ್ಯಮಂತ್ರಿ_ನಿಜಲಿಂಗಪ್ಪನವರ_ವಿರುದ್ದ_ಬಂಡಾಯದ_ಗುಪ್ತ_ಸಭೆ_ಆನಂದಪುರಂನಲ್ಲಿ  https://youtu.be/ZVQVnSJCCzI?feature=shared   ರಾಜಕಾರಣದ ಬಂಡಾಯ ಈಗಿನದ್ದೇನಲ್ಲ ನಿಜಲಿಂಗಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ದೇವರಾಜ ಅರಸರ ನೇತೃದಲ್ಲಿ ನಿಜಲಿಂಗಪ್ಪನವರ ವಿರೋದಿಗಳು ಆನಂದಪುರಂನ ಎ.ಆರ್. ಬದರಿ ನಾರಾಯಣರ ತೋಟದ ಮನೆಯಲ್ಲಿ ಅನೇಕ ರಹಸ್ಯ ಸಭೆಗಳು ನಡೆಯುತ್ತಿದ್ದವು.    ಆಗೆಲ್ಲ ಬಂದ ಅತಿಥಿಗಳಿಗೆ ಸತ್ಕಾರ ಮಾಡುವ ಜವಾಬ್ದಾರಿ ಸುರೇಶ್ ಕುಮಾರ್ ಮತ್ತು ಅವರಣ್ಣ ರಂಗನಾಥ ಭಟ್ಟರದ್ದು.   ಗ್ರಾಮ ಲೆಖ್ಖಿಗರಾಗಿದ್ದ ರಂಗನಾಥ ಭಟ್ಟರಿಗೆ ದೂರದ ಊರಿಗೆ ವಗಾ೯ವಣೆ ಆದಾಗ ರಾಜಕಾರಣದಿಂದ ನಿವೃತ್ತರಾಗಿದ್ದ ಬದರಿ ನಾರಾಯಣ ಅಯ್ಯಂಗಾರ್ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಅವರ ಮನೆಗೆ ಸ್ವತಃ ಬಂದು ವರ್ಗಾವಣೆ ಆದೇಶ ರದ್ದು ಮಾಡಿಸುತ್ತಾರೆ ಆಗ ಮುಖ್ಯಮಂತ್ರಿ PS ಆಗಿದ್ದವರು ತಾಳಗುಪ್ಪ ರಾಮಪ್ಪನವರು.    ದೇವರಾಜ ಅರಸು ಸಂಪುಟದಲ್ಲಿ ವಿದ್ಯಾಮಂತ್ರಿ ಆಗಿದ್ದ ಬದರಿ ನಾರಾಯಣ ಅಯ್ಯಂಗಾರ್ ಕರ್ನಾಟಕ ನಾಮಕರಣಕ್ಕೆ ಪ್ರಮುಖ ಕಾರಣ ಕರ್ತರು.

Blog number 1929. ಶೃಂಗೇಶ್ ಸಂಪಾದಕತ್ವದ ಜಿಲ್ಲಾ ದೈನಿಕ ಪತ್ರಿಕೆಗೆ 20 ನೇ ವಾರ್ಷಿಕೊತ್ಸವ, ನಮ್ಮಿಬ್ಬರ ಗೆಳೆತನಕ್ಕೆ ಮೂರು ದಶಕ.

#ಶೃ೦ಗೇಶರ_ಜನಹೋರಾಟ_ದಿನ_ಪತ್ರಿಕೆಯ_ವಾರ್ಷಿಕೋತ್ಸವ #ಇವತ್ತಿನ_ಪತ್ರಿಕೆ_20ನೇ_ವಷ೯ದ_ಮೊದಲ_ಪತ್ರಿಕೆ  #ಸಂಪಾದಕರಾದ_ಶೃಂಗೇಶ್_ಮತ್ತು_ಅವರ_ಪತ್ರಿಕಾ_ಬಳಗಕ್ಕೆ_ಅಭಿನಂದನೆಗಳು. #ರವಿಬೆಳೆಗೆರೆ_ಅವರ_ಹಾಯ್_ಬೆಂಗಳೂರ್_ರೋವಿಂಗ್_ರಿಪೋರ್ಟರ್ #ನನ್ನ_ಎರೆಡು_ಪ್ರಸ್ತಕದ_ಮುದ್ರಕರು #ನಮ್ಮ_ಸಂಸ್ಥೆಯ_ಎಲ್ಲಾ_ಮುದ್ರಣ_ಆಗುವುದು_ಇವರ_ಜನಹೋರಾಟಾ_ಪ್ರಿಂಟರ್ಸ್    ಶೃಂಗೇಶ್ ಸಂಪಾದಕತ್ವದ ಜಿಲ್ಲಾ ದಿನಪತ್ರಿಕೆ #ಜನಹೋರಾಟಕ್ಕೆ 19 ವರ್ಷ ತುಂಬಿತು ಇವತ್ತಿನ ಪತ್ರಿಕೆ ಇಪ್ಪತ್ತನೇ ವರ್ಷದ ಮೊದಲ ಪತ್ರಿಕೆ ಆಗಿದೆ.     ಗಣ ರಾಜ್ಯೋತ್ಸವದ ಜನವರಿ 26 ನೇ ತಾರೀಖು 20 ವರ್ಷದ ಹಿಂದೆ ಶಿವಮೊಗ್ಗದಲ್ಲಿ ಇವರ ಜನ ಹೋರಾಟ ಪತ್ರಿಕೆ ಪ್ರಾರಂಭ ಆಯಿತು.    ರವಿ ಬೆಳಗೆರೆ ಅವರ ಹಾಯ್ ಬೆಂಗಳೂರ್ ಪತ್ರಿಕೆಯ ರೋವಿಂಗ್ ರಿಪೋರ್ಟರ್ ಎಂದೇ ಸ್ವತಃ ರವಿ ಬೆಳೆಗೆರೆ ಇವರಿಗೆ ಬಿರುದು ನೀಡಿದ್ದರು.     ಜಿಲ್ಲಾ ಮಟ್ಟದ ಜನ ಹೋರಾಟ ಪತ್ರಿಕೆ ಜೊತೆ ಇವರು ಪ್ರಾರಂಬಿಸಿದ ಪ್ರಿಂಟಿಂಗ್ ಉದ್ಯಮ ಇವರ ಕೈ ಹಿಡಿದಿದೆ ಪ್ರತಿಷ್ಟಿತ ಸಂಸ್ಥೆಗಳ ಮುದ್ರಣ ಗುತ್ತಿಗೆ ಇವರದ್ದೇ ಸಂಸ್ಥೆ ನಡೆಸುತ್ತಿದೆ.     ನಮ್ಮ ಸಂಸ್ಥೆಯ ಎಲ್ಲಾ ಮುದ್ರಣದ ಕೆಲಸ ಇವರದ್ದೇ ನನ್ನ ಎರೆಡು ಪುಸ್ತಕ ಮುದ್ರಿಸಿ ಕೊಟ್ಟಿದ್ದು ಇವರದ್ದೇ ಸಂಸ್ಥೆ,   ಕಳೆದ 30 ವರ್ಷದಿಂದ ನನ್ನ ಮತ್ತು ಇವರ ಗೆಳೆತನ ನವನವೀನವಾಗಿ ಉಳಿದಿರುವುದು ನನಗೇ ಆಶ್ಚರ್ಯ ಹೆಚ್ಚಿನ ಗೆ

Blog number 1928. ಭಾಗ 1 ಕೆ. ವಿ. ಸುರೇಶ್ ಕುಮಾರ್ ಸಂದರ್ಶನ

#ಭಾಗ_1. https://youtu.be/Y4YDhPlbEC0?feature=shared #ಇವರು_ಕೆ_ವಿ_ಸುರೇಶ್, #ಕೋಳಿವಾಡ_ವೇದನಾರಾಯಣ_ಭಟ್ಟರ_ಪುತ್ರ_ಸುರೇಶ್ #ಇವರ_ಮನೆಯಲ್ಲೇ_ದ್ವಾರಕಾ_ಸಂಶೋಧಿಸಿದ_S_R_ರಾವ್_ಜನಿಸಿದ್ದು #ಇವರ_ತಂದೆಯ_ಪುಸ್ತಕ_ಸಂಗ್ರಹದಿಂದ_ರಾಮಾಯಣ_ಮಹಾಭಾರತ_ಮಲೆಗಳಲ್ಲಿ_ಮದುಮಗಳು #ನಾನು_5_6ನೇ_ತರಗತಿ_ಓದುವಾಗ_ನಮ್ಮ_ತಂದೆ_ನನ್ನ_ಓದಿನ_ಹಸಿವು_ಇಂಗಿಸಿದ್ದರು #ಆನಂದಪುರಂ_ಇತಿಹಾಸ_ಎಂಬ_ನನ್ನ_ಪುಸ್ತಕದ_ಪ್ರಕಟನೆಗೆ_ಇವರ_ಸಹಕಾರವಿದೆ.       ನನ್ನ ಅಣ್ಣನ ಶಾಲಾ ಸಹಪಾಟಿ ನನ್ನ ತಂದೆಯ ಕಿರಿಯ ಗೆಳೆಯರಾಗಿದ್ದ ಕೆ.ವಿ.ಸುರೇಶ್ ಆನಂದಪುರಂ ಇತಿಹಾಸದ ಮಾಹಿತಿಗಳ ಕಣಜ.   ನಾನು ಬರೆದಿರುವ #ಆನಂದಪುರಂ_ಇತಿಹಾಸ ಪ್ರಸ್ತಕಕ್ಕೆ ಇವರ ಸಹಕಾರ ಹೆಚ್ಚು ಇವರಿಂದ ಪಡೆದಿದ್ದೇನೆ.    ಇವರ ತಂದೆ ವೇದ ನಾರಾಯಣ ಭಟ್ಟರು ಅಸಮಾನ್ಯರು,  ಮುಳುಗಿದ ದ್ವಾರಕೆ ಸಂಶೋಧಿಸಿದ ಪ್ರಖ್ಯಾತ ಸಂಶೋದಕ S.R. ರಾವ್ ಜನಿಸಿದ್ದು ಇವರ ಮನೆಯಲ್ಲೇ.   ಇವರ ಸರಣಿ ಸಂದರ್ಶನ ನೋಡಿ. ಆನಂದಪುರಂನ ಮೊದಲ ವಿಲೇಜ್ ಪಂಚಾಯಿತಿ ಚೇರ್ಮನ್ ಅದವರು ಎ.ಆರ್. ವೆಂಕಟಾಚಲಯ ಅಯ್ಯಂಗಾರ್ ಇವರು ವಿದ್ಯಾ ಮಂತ್ರಿಗಳಾಗಿದ್ದ ಎ.ಆರ್. ಬದರಿನಾರಾಯಣ ಅಯ್ಯಂಗಾರ್ ಅಣ್ಣ ಅವರ ಒಡನಾಟದ ಬಗ್ಗೆ ಈ ಸಂದರ್ಶನವಿದೆ.

Blog number 1927. ನಡೆಯುತ್ತಾ 18 ಸಾವಿರ ಕಿಲೋ ಮೀಟರ್ ವಿಶ್ವ ಪರ್ಯಟನೆ ಮಾಡಿದ ಶಿಕ್ಷಕ ಬರಹಗಾರ ಟಾಮ್ ಕಳೆದ ವರ್ಷ ನನ್ನ ಅತಿಥಿ ಆಗಿದ್ದರು.

#ಖಂಡಾಂತರ_18000_ಕಿಮಿ_ನಡೆದ_ಟಾಮ್_ಪ್ರೆಮಾಂಟಲ್ #ಟಾಮ್ಸ್_ವರ್ಲ್ಡ್_ವಾಕ್ #ಕಳೆದ_ವರ್ಷ_16_ಜನವರಿ_2023_ನನ್ನ_ಅತಿಥಿ #ಸೆಪ್ಟೆಂಬರ್_2018ರಲ್ಲಿ_ಪ್ರಾರಂಭ #ಕೊರಾನಾದಿಂದ_2_ವರ್ಷ_ಸ್ಥಗಿತವಾಗಿತ್ತು #ಶಾಲಾ_ಶಿಕ್ಷಕ_ಬರಹಗಾರ_ಟಾಮ್_ಸಾಹಸ   ಅಮೆರಿಕಾ- ಐರ್ಲೆಂಡ್-ಯುಕೆ - ಪ್ರಾನ್ಸ್ - ಜಮ೯ನಿ-ಆಸ್ಟ್ರೀಯ - ಸ್ಲೋವಾಕಿಯಾ - ಹಂಗೇರಿಯಾ - ಸೆರ್ಬಿಯಾ - ಬಲ್ಗೇರಿಯಾ - ಟರ್ಕಿ-ಸಿಪ್ರಸ್-ಲೆಬನಾನ್-ಸಿರಿಯಾ - ಜೋರ್ಡಾನ್-ಇಸ್ರೇಲ್ - ಪೋಲಾಂಡ್-ಯುಕ್ರೇನ್-ಇಂಡಿಯಾ- ಇಂಡೋನೇಸಿಯಾ- ಆಸ್ಟ್ರೇಲಿಯಾ - ನ್ಯೂಜಿಲಾಂಡ್-ಐಸ್ ಲ್ಯಾಂಡ್ ಈ ಎಲ್ಲಾ ದೇಶಗಳಲ್ಲಿ ಶಿಕ್ಷಕ ವೃತ್ತಿಯ ಟಾಮ್ ಪಾದಯಾತ್ರೆಯಲ್ಲಿ ಕ್ರಮಿಸಿದ್ದಾರೆ.    2018 ಸೆಪ್ಟೆಂಬರ್ ನಲ್ಲಿ ಅವರು ಖಂಡಾಂತರ ಪಾದಯಾತ್ರೆಯ ಮೂಲಕ 18 ಸಾವಿರ ಕಿಲೋ ಮೀಟರ್ ನಡೆಯುವ ಅವರ ಉದ್ದೇಶ 2020-21 ರ ಕೊರಾನಾದಿಂದ ಮಧ್ಯದಲ್ಲಿ ತಡೆಯಾಯಿತು.    2 ಡಿಸೆಂಬರ್ 2023 ರಂದು ಮಧ್ಯಾಹ್ನ ಐಸ್ ಲ್ಯಾಂಡ್ ನಲ್ಲಿ ಅವರ ಗುರಿ ತಲುಪಿದಾಗ ಅವರ ನಡುಗೆ 11 272 ಮೈಲು ಅಂದರೆ 18 ಸಾವಿರ ಕಿಲೋಮೀಟರ್ ದಾಟಿತ್ತು.    ಅಲ್ಲಿಂದ ಅವರು ತೈವಾನ್ ಗೆ ಅವರ ಪ್ರಿಯತಮೆಯ ಬೇಟಿಗೆ ತೆರಳಿದರು.    ಈ ದೀರ್ಘ ವಿಶ್ವ ಪರ್ಯಟನೆಯಲ್ಲಿ ಯುಕ್ರೇನ್ ಹ್ಯೂಮೆಟರಿಯನ್ ಸಂಸ್ಥೆಗೆ ಅಪಾರ ದೇಣಿಗೆ ಸಂಗ್ರಹಿಸಿ ನೀಡಿದ್ದಾರೆ.    ಭಾರತದಲ್ಲಿ ಅರಬಿ ಸಮುದ್ರದ ಗೋವಾದ ತಡಿಯಿಂದ ಕಾಲ್ನಡಿಗೆಯಲ್ಲಿ ಚೆನ್ನೈ ಬಂಗಾಳಕೊಲ್ಲಿ ತನಕ