#ಬೆಳಗಿನ_ಚಳಿಯಲ್ಲಿ_ವಾಕಿಂಗ್_ಮುಗಿಸಿ_ಬಂದಾಗ
#ಬಿಸಿ_ಬಿಸಿ_ಬೇಯಿಸಿದ_ಗೆಣಸು
#ಗೆಣಸಿನ_ಸ್ಟಾದ_ಅರೋಮ_ಆರೋಗ್ಯ_ಅರಿಯದವರಿಲ್ಲ.
#ಕೆಂಪು_ಬಿಳಿ_ನಸುಹಳದಿ_ಬಣ್ಣದ_ಸಿಹಿ_ಗೆಣಸುಗಳು
#ಕೇರಳದಿಂದ_ಮಹಾರಾಷ್ಟ್ರದ_ಕರಾವಳಿ_ಪ್ರದೇಶದಲ್ಲಿ_ಹೆಚ್ಚು_ಬೆಳೆಯುತ್ತಾರೆ.
#ಕರಾವಳಿಯ_ಜಾತ್ರೆ_ಯಕ್ಷಗಾನದ_ಸ್ಥಳದಲ್ಲಿ_ಬೇಯಿಸಿದ_ಗೆಣಸು_ಮಾರಾಟದ_ಚಹಾ_ಅಂಗಡಿಗಳು
#ಈಗಿಲ್ಲ_ಬೇಯಿಸಿದ_ಗೆಣಸು_ತಿನ್ನುವುದು_ಅವಮಾನವಾ?
https://youtu.be/jM9fCCQrWfA?feature=shared
ಇವತ್ತು ಬೆಳಿಗಿನ ಚಳಿಯಲ್ಲಿ ವಾಕಿಂಗ್ ಮುಗಿಸಿ ಮನೆ ತಲುಪಿದ ನನಗೂ ಮತ್ತು ನನ್ನ ಶಂಭೂರಾಮನಿಗೂ ನಮಗಿಷ್ಟವಾದ ಹಬೆಯಾಡುತ್ತಿರುವ ಕೆಂಪು ಸಿಹಿ ಗೆಣಸು ನಮ್ಮನ್ನು ಕಾಯುತ್ತಿತ್ತು.
ನನಗೆ ಗೆಣಸು ಎಂದರೆ ಪಂಚ ಪ್ರಾಣ, ಹದವಾಗಿ ಉಪ್ಪು ಸೇರಿಸಿ ಬೇಯಿಸಿದ ಸಿಹಿ ಗೆಣಸು ತಿನ್ನುತ್ತಾ ಜೊತೆಗೆ ಎರೆಡೆರುಡು ದೊಡ್ಡ ಲೋಟದ ಚಹ ಅಥವ ಕಾಫಿ ಹೀರುವುದು ಒಂದು ರೀತಿ ಸ್ವರ್ಗ ಲೋಕ ಅನುಭವಿಸಿದಂತೆ.
ಸಿಹಿ ಗೆಣಸಿನಲ್ಲಿ ನೂರಾರು ತಳಿಗಳಿದೆ, ಬಣ್ಣ ಮತ್ತು ಆಕೃತಿ ಅದರ ಗಾತ್ರಗಳೂ ಬಿನ್ನ ವಿಭಿನ್ನವಾಗಿರುತ್ತದೆ.
ಪಶ್ಚಿಮದ ಕರಾವಳಿಯ ಕೇರಳದಿಂದ ಮಹಾರಾಷ್ಟ್ರದ ರತ್ನಗಿರಿವರೆಗೆ ವಿವಿಧ ರುಚಿಯ ಸುವಾಸನೆಯ ಬಣ್ಣದ ಗೆಣಸುಗಳನ್ನು ಅಲ್ಲಿನ ಮರಳು ಭೂಮಿಯಲ್ಲಿ ಬೆಳೆಯುತ್ತಾರೆ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾರಾಟಕ್ಕೆ ಇಡುತ್ತಾರೆ.
50 ವರ್ಷಗಳ ಹಿಂದೆ ಕರಾವಳಿಯ ಪ್ರದೇಶದಲ್ಲಿ ಜಾತ್ರೆ - ಯಕ್ಷಗಾನಗಳು ನಡೆಯುವಲ್ಲಿ ಈ ಬೇಯಿಸಿದ ಸಿಹಿ ಗೆಣಸು ಮಾರುವ ಚಹಾದ ಅಂಗಡಿಗಳು ಇರುತ್ತಿದ್ದವಂತೆ ಆದರೆ ಈಗ ಆ ಜಾಗದಲ್ಲಿ ಚಿಪ್ಸ್ ಇತ್ಯಾದಿ ಮಾರಾಟಕ್ಕೆ ಬದಲಾಗಿದೆ ಬಹುಶಃ ನಮ್ಮ ಮಣ್ಣಿನ ಶ್ರೇಷ್ಟ ಅಹಾರವಾದ ಗೆಣಸು ಸೇವಿಸುವುದು ಅಂತಸ್ತುಗಳಿಗೆ ಅಗೌರವ ಎನ್ನುವ ಸಾಮಾಜಿಕ ತಪ್ಪು ಗ್ರಹಿಕೆ ಕಾರಣ ಆಗಿರಬೇಕು.
ಮೊನ್ನೆ ನಮ್ಮ ಅಣ್ಣ ನನ್ನ ತಾಯಿ ಮನೆದೈವ ಬಸ್ರೂರಿನ ಶ್ರೀ ದೊಟ್ಟಿ ಕಾಲು ಚಿಕ್ಕು ದೇವಸ್ಥಾನದ ಜಾತ್ರೆಗೆ ಹೋದಾಗ ಮರೆಯದೆ ಈ ಗೆಣಸು ತರಲು ತಿಳಿಸಿದ್ದೆ.
ಈ ಸಿಹಿ ಗೆಣಸು ಹಾಲು ಮತ್ತು ಆಲೆಮನೆಯ ಬೆಲ್ಲದ ಜೊತೆಯೂ ತಿನ್ನಲು ರುಚಿಕರವಾಗಿರುತ್ತದೆ.
Comments
Post a Comment