Blog number 1041. ಆಹಮ್ಮದ್ ಆಲೀ ಖಾನ್ ಸಾಹೇಬರು ಮೂರು ವರ್ಷದ ಹಿಂದೆ ಇದೇ ದಿನ ನಮ್ಮಲ್ಲಿಗೆ ಬಂದಿದ್ದರು ಅವರು ಈಗ ಇಲ್ಲ ಅವರ ನೆನಪು ನಾವು ಮರೆತಿಲ್ಲ
ನಮ್ಮ ಹೊಸ ಕಚೇರಿಗೆ ಆಗಮಿಸಿದ ನನ್ನ ನೆಚ್ಚಿನ ನಾಯಕರಾದ ಆಹಮದ್ ಆಲೀ ಖಾನ್ ಸಾಹೇಬರ ನೆನಪುಗಳು 28 ಅಕ್ಟೋಬರ್ 2019 ರಂದು ಸಂಜೆ ಖಾನ್ ಸಾಹೇಬರು ಅವರ ಮಗ ಮತ್ತು ನನ್ನ ಕ್ಲಾಸ್ ಮೇಟ್ ಮೋಹಿಸಿನ್ ಆಲೀ ಖಾನ್ ಮತ್ತು ಮೊಹಿಸಿನ್ಅವರ ಮಗನ ಜೊತೆ ಬಂದಿದ್ದರು. ಸಾಗರದ ಆಹಮದ್ ಆಲೀ ಖಾನ್ ಸಾಹೇಬರ ಜೀವನದ ಬಗ್ಗೆ ಬರೆದರೆ ಒಂದು ಸ್ವಾರಸ್ಯಕರವಾದ ಗ್ರ೦ಥವೇ ಆದೀತು, 1978-79ರಲ್ಲಿ ಸಾಗರದ ನಿಮ೯ಲ ಹೈಸ್ಕೂಲ್ ಎದರು ಜನತಾ ಪಕ್ಷದ ಸಾಗರದ ಮಾಜಿ ಶಾಸಕರಾದ ಕಾಗೋಡು ತಿಮ್ಮಪ್ಪ ಜನತಾ ಪಕ್ಷ ತೊರೆದು ಕಾ೦ಗ್ರೇಸ್ ಸೇರುವ ಸಭೆ ಇದೆ ಅಂತ ಸಾವ೯ಜನಿಕ ಪ್ರಕಟನೆ ಕೇಳಿ ಮುನ್ಸಿಪಲ್ ಹೈಸ್ಕೂಲ್ ನ 8ನೇ ತರಗತಿಗೆ ಚಕ್ಕರ್ ಹೊಡೆದು ಈ ಸಭೆ ನೋಡಲು ಹೋಗಿದ್ದೆ, ಅಲ್ಲಿ ಕಾಗೋಡು ಜನತಾ ಪಕ್ಷದವರು ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ ಅಂತ ಭಾಷಣ ಮಾಡಿದ್ದು ಮತ್ತು ಖಾನ್ ಸಾಹೇಬರು ಅವರನ್ನ ಕಾಂಗ್ರೇಸ್ ಗೆ ಸೇರಿಸಿಕೊಂಡ ಕ್ಷಣ ಜನರ ಚಪ್ಪಾಳೆ ಅಭೂತ ಪೂವ೯ ಬೆಂಬಲದ ಕ್ಷಣ ಅವತ್ತು 15 ವಷ೯ ಪ್ರಾಯದ ನನ್ನ ಮೆದುಳಲ್ಲಿ ಅಚ್ಚಳಿಯದೆ ಉಳಿದಿದೆ. ಆಗ ದೇಶದ ಪ್ರದಾನಿ ಇಂದಿರಾ ಗಾಂಧಿ ನನ್ನ ಮೂರನೆ ಮಗ ಎನ್ನುತ್ತಿದ್ದ ಮಡಿಕೆರೆಯ ಎಪ್.ಎಂ.ಖಾನ್ ಮತ್ತು ಸಾಗರದ ಆಹಮದಾಲಿ ಖಾನ್ ಖಾಸಾ ಖಾಸಾ, ಗುಂಡುರಾವ್ ರನ್ನ ಮುಖ್ಯಮಂತ್ರಿ ಮಾಡಿದ್ದರಿಂದ ಸೊರಬದ ಬಂಗಾರಪ್ಪ ದೂರ ಆಗಿದ್ದರು ಆಗ ಸಾಗರದ ಶಾಸಕರ...