#ರೂಪಾ ರಾಜೀವ್ ಎಂಬ ಉತ್ಸಾಹಿ FB ಗೆಳೆಯರು ಬರೆದಿರುವ ಲೇಖನ ಓದಿ, ಇದು ಅತ್ಯುತ್ತಮ ಮಾಹಿತಿ ಒಬ್ಬ ಕೊರಾನಾ ವೈರಸ್ ಪೀಡಿತರಿಗೆ ಖಾಸಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಆಸ್ಪತ್ರೆ ಎಷ್ಟು ವೆಚ್ಚ ಮಾಡಬೇಕು ನೋಡಿ. * * * ಕೋವಿಡ್ ರೋಗಿಗಳನ್ನು ಕೋವಿಡ್ ರೋಗಿಗಳು ಅಂತಾ ಗೊತ್ತಾದ ಮೇಲೆ, ಬೇರೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮಾಡೋದು ಬಹಳ ಕಷ್ಟ ಅಂತಾ ನಿನ್ನೆ ಹೇಳಿದ್ದೆ. ಯಾಕೆ ಕಷ್ಟ ಅಂತಾ ಲೆಕ್ಕ ಕೊಡ್ತೀನಿ ನೋಡಿ. ಒಂದು ಪೇಷಂಟ್ ನಾ ದಿನದ ೨೪ ಗಂಟೆ ನೋಡಿಕೊಳ್ಳೋಕೆ ಆರು ಗಂಟೆಯ ಒಂದು ಶಿಫ್ಟ್ ಅಂದರೆ, ಒಟ್ಟು ನಾಲ್ಕು ಜನ ನರ್ಸ್ ಗಳು ಬೇಕು. ಜೊತೆಗೆ ಆ ರೋಗಿಯ ರೂಮ್ ಕ್ಲೀನ್ ಮಾಡೋಕೆ ನಾಲ್ಕು ಕ್ಲೀನಿಂಗ್ ಸ್ಟಾಫ್ ಬೇಕು. ನಾಲ್ಕು ಡಾಕ್ಟರ್ ಗಳು ಬೇಕು. ಒಂದು ಪಿಪಿಇ ಕಿಟ್ ಬೆಲೆ ಸುಮಾರು ೭೦೦ ರೂಗಳು. ಅಂದ್ರೆ ದಿನಕ್ಕೆ ಒಂದು ಪೇಷಂಟ್ ಗೆ ಖರ್ಚಾಗುವ ಪಿಪಿಇ ಕಿಟ್ ಗಳು ಸುಮಾರು ೧೨ ಕಿಟ್. ಬರೀ ಕಿಟ್ ಗಳಿಗೆ ಹತ್ತು ಸಾವಿರವಾಗುತ್ತದೆ. ಇನ್ನೂ ರೂಮ್ ಚಾರ್ಜ್, ಎಲೆಕ್ಟ್ರಿಸಿಟಿ ಚಾರ್ಜ್, ನೀರಿನ ಚಾರ್ಜ್, ಆ ಪೇಷಂಟ್ ನ ಊಟ ತಿಂಡಿಯ ಚಾರ್ಜ್, ಮೆಡಿಸಿನ್ ಚಾರ್ಜ್, etc., ಲೆಕ್ಕ ಹಾಕಿಕೊಳ್ಳಿ. ಆಮೇಲೆ ಇಷ್ಟೆಲ್ಲಾ ಕೆಲಸ ಮಾಡುವ ಸಿಬ್ಬಂದಿಗಳು ಒಂದು ವಾರ ಮಾತ್ರ ಕೆಲಸ ಮಾಡೋಕೆ ಆಗೋದು. ಆಮೇಲೆ ಅವರು ಕನಿಷ್ಠ ಎರಡು ವಾರಗ...