Skip to main content

Posts

Showing posts with the label they are all working extraordinarily in sports

ಹೊಸನಗರ ತಾಲ್ಲೂಕಿನ ಮಾದಾಪುರದ ಸಮಾಜ ಸೇವೆ -ಕ್ರೀಡೆ -ಕಲೆಗಳಲ್ಲಿ ಮು೦ಚೂಣಿಯಲ್ಲಿರುವ ರೇವಣ್ಣ ಸಹೋದರರ ಕುಟುಂಬ

#ಮಾದಾಪುರದ_ಪ್ರತಿಭಾವಂತ_ಸಹೋದರರು. #ಕ್ರೀಡೆ_ಮತ್ತು_ಸಾಂಸ್ಕೃತಿಕ_ಕಾಯ೯ಕ್ರಮದಲ್ಲಿ_ಅದ್ವಿತೀಯರು. #ಹೊಸನಗರ_ತಾಲ್ಲೂಕು_ರಿಪ್ಪನ್ಪೇಟೆ_ಸಮೀಪದ_ಮಾದಾಪುರ.     1985 ರಿಂದ 1995 ರವರೆಗೆ ಈ ಭಾಗದವರೆಗೆ ನನ್ನ ಅಕ್ಕಿ ಗಿರಣಿಗೆ ಎತ್ತಿನಗಾಡಿಯಲ್ಲಿ ಅಕ್ಕಿ ಮಾಡಿಸಲು ಭತ್ತ ಹೇರಿ ಕೊಂಡು ಬರುವ ರೈತರಿದ್ದರು, ನಾನು ಗಮನಿಸಿದಂತೆ ಈ ಮಾದಾಪುರದ ರೈತರು ಬೇರೆ ಭಾಗದ ರೈತರಿಗಿಂತ ಬಿನ್ನರು.   ಆಗ ನನಗೆ ಗಮನ ಸೆಳೆದದ್ದು ಈ ಊರಿನ ಮುಸಲ್ಮಾನರು, ಹಿಂದುಳಿದವರು, ಮುಂದುವರಿದ ದೈವಜ್ಞ ಬ್ರಾಹ್ಮಣರು ಸೇರಿ ಎಲ್ಲರ ಮನೆ ಎದುರು ವಿಶಾಲವಾದ ದನದ ಕೊಟ್ಟಿಗೆ, ಮನೆ ಅಂಗಳದಲ್ಲಿ ಧಾನ್ಯ ಸಂಗ್ರಹದ ಪಣತ, ಗಟ್ಟಿ ಮುಟ್ಟಿನ ಎತ್ತಿನಗಾಡಿ ಅದಕ್ಕೆ ಸರಿ ಹೊಂದುವ ಹಾಸನ ಜೋಡಿ ಎತ್ತು, ಸಿಂಗಾರದ ಬಾರಿ ಕೋಲು, ಗೆಜ್ಜೆಯ ಗಾಡಿ ಚಕ್ರದ ಕೀಲುಗಳು ಮತ್ತು ಶುದ್ದಾ ಶುದ್ಧಾ ಹಣಕಾಸು ವ್ಯವಹಾರ.   ಇವರ ಹಿರಿಯ ಸಹೋದರ ಲೋಕಪ್ಪ ಮಾದರಿ ಕೃಷಿಕರು, ಜಾನಪದ ಕಲಾವಿದರು ಮತ್ತು ಕೆಲ ಕಾಲ ಗ್ರಾಮ ಪಂಚಾಯತ್ ಸದಸ್ಯರಾಗಿ ರಾಜಕಾರಣವೂ ಮಾಡಿದ್ದರು, ಇನ್ನೊಬ್ಬ ಸಹೋದರ ಹೊಸನಗರದಲ್ಲಿ ಶಿಕ್ಷಕರಾಗಿದ್ದಾರೆ ರಾಷ್ಟ್ರ ಮಟ್ಟದ ಹಿರಿಯರ ಕ್ರೀಡೆಯಲ್ಲಿ ಪದಕ ಪಡೆದವರು, ಇವರೂ ಜಾನಪದ ಕಲಾವಿದರು.   ಕಿರಿಯ ಸಹೋದರ ರೇವಣ್ಣ ಅಸಾದರಣ ಜಾನಪದ ಕಲಾವಿದರು ಈಗ ಬಿ ಆರ್ ಪಿ ಯಲ್ಲಿ ಮಾದರಿ ಶಿಕ್ಷಕರಾಗಿದ್ದು ಈಗಲೂ ಜಾನಪದ...