#ಕ್ರೀಡೆ_ಮತ್ತು_ಸಾಂಸ್ಕೃತಿಕ_ಕಾಯ೯ಕ್ರಮದಲ್ಲಿ_ಅದ್ವಿತೀಯರು.
#ಹೊಸನಗರ_ತಾಲ್ಲೂಕು_ರಿಪ್ಪನ್ಪೇಟೆ_ಸಮೀಪದ_ಮಾದಾಪುರ.
1985 ರಿಂದ 1995 ರವರೆಗೆ ಈ ಭಾಗದವರೆಗೆ ನನ್ನ ಅಕ್ಕಿ ಗಿರಣಿಗೆ ಎತ್ತಿನಗಾಡಿಯಲ್ಲಿ ಅಕ್ಕಿ ಮಾಡಿಸಲು ಭತ್ತ ಹೇರಿ ಕೊಂಡು ಬರುವ ರೈತರಿದ್ದರು, ನಾನು ಗಮನಿಸಿದಂತೆ ಈ ಮಾದಾಪುರದ ರೈತರು ಬೇರೆ ಭಾಗದ ರೈತರಿಗಿಂತ ಬಿನ್ನರು.
ಆಗ ನನಗೆ ಗಮನ ಸೆಳೆದದ್ದು ಈ ಊರಿನ ಮುಸಲ್ಮಾನರು, ಹಿಂದುಳಿದವರು, ಮುಂದುವರಿದ ದೈವಜ್ಞ ಬ್ರಾಹ್ಮಣರು ಸೇರಿ ಎಲ್ಲರ ಮನೆ ಎದುರು ವಿಶಾಲವಾದ ದನದ ಕೊಟ್ಟಿಗೆ, ಮನೆ ಅಂಗಳದಲ್ಲಿ ಧಾನ್ಯ ಸಂಗ್ರಹದ ಪಣತ, ಗಟ್ಟಿ ಮುಟ್ಟಿನ ಎತ್ತಿನಗಾಡಿ ಅದಕ್ಕೆ ಸರಿ ಹೊಂದುವ ಹಾಸನ ಜೋಡಿ ಎತ್ತು, ಸಿಂಗಾರದ ಬಾರಿ ಕೋಲು, ಗೆಜ್ಜೆಯ ಗಾಡಿ ಚಕ್ರದ ಕೀಲುಗಳು ಮತ್ತು ಶುದ್ದಾ ಶುದ್ಧಾ ಹಣಕಾಸು ವ್ಯವಹಾರ.
ಇವರ ಹಿರಿಯ ಸಹೋದರ ಲೋಕಪ್ಪ ಮಾದರಿ ಕೃಷಿಕರು, ಜಾನಪದ ಕಲಾವಿದರು ಮತ್ತು ಕೆಲ ಕಾಲ ಗ್ರಾಮ ಪಂಚಾಯತ್ ಸದಸ್ಯರಾಗಿ ರಾಜಕಾರಣವೂ ಮಾಡಿದ್ದರು, ಇನ್ನೊಬ್ಬ ಸಹೋದರ ಹೊಸನಗರದಲ್ಲಿ ಶಿಕ್ಷಕರಾಗಿದ್ದಾರೆ ರಾಷ್ಟ್ರ ಮಟ್ಟದ ಹಿರಿಯರ ಕ್ರೀಡೆಯಲ್ಲಿ ಪದಕ ಪಡೆದವರು, ಇವರೂ ಜಾನಪದ ಕಲಾವಿದರು.
ಕಿರಿಯ ಸಹೋದರ ರೇವಣ್ಣ ಅಸಾದರಣ ಜಾನಪದ ಕಲಾವಿದರು ಈಗ ಬಿ ಆರ್ ಪಿ ಯಲ್ಲಿ ಮಾದರಿ ಶಿಕ್ಷಕರಾಗಿದ್ದು ಈಗಲೂ ಜಾನಪದ ಕಲೆಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.
ಈ ಕುಟುಂಬದ ವಿಶೇಷ ಇವರೆಲ್ಲರೂ ಸಂಗೀತ ಸಾಧನವಾದ ಹಾರ್ಮೋನಿಯಂ, ತಬಲ, ಕೊಳಲು ಮತ್ತಿತರ ಉಪಕರಣ ನುಡಿಸುವಲ್ಲಿ ಕರತಲಾಮಲಕ ಹೊಂದಿದ್ದಾರೆ, ಇವರದ್ದೇ ಡೊಳ್ಳಿನ ತಂಡ ರಾಷ್ಟ್ರ ಅಂತರಾಷ್ಟ್ರಿಯ ಮಟ್ಟದಲ್ಲಿ ಭಾಗವಹಿಸಿ ಪ್ರಖ್ಯಾತ ಗೊಂಡಿದೆ.
ನಮ್ಮ ತಾಲ್ಲೂಕಿನ ಪಕ್ಕದ ಹೊಸನಗರ ತಾಲ್ಲೂಕಿನವರಾದರು ನನಗೆ ಇವರೆಲ್ಲರ ಒಡನಾಟ ಹೆಚ್ಚು, 1995ರಲ್ಲಿ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿ ಆಯ್ಕೆ ಆದ ಸಂದರ್ಭದಲ್ಲಿ ಇವರೆಲ್ಲ ಇವರ ಊರಲ್ಲಿ ಪ್ರತ್ಯೇಕ ಯುವಕ ಸಂಘ ಮಾಡಿ ಉದ್ಘಾಟನೆಗೆ ನನ್ನ ಕರೆದಿದ್ದರು, ಹಳೆಯ ಸಂಘದವರು ಮುನಿಸಿಕೊಂಡಿದ್ದರು ಇದು ಅವರ ಊರಿಗೆ ಹೋದಾಗ ತಿಳಿದು ಅವರೆಲ್ಲರನ್ನೂ ಬೇಟಿ ಮಾಡಿ ವಾತಾವರಣ ತಿಳಿ ಮಾಡಿದ ನೆನಪು, ಅವತ್ತು ಅವರ ಭಾಗದ ಜಿಲ್ಲಾ ಪಂಚಾಯತ್ ಸದಸ್ಯರಾದ ಹಿರಿಯ ಮತ್ಸದ್ದಿ ಬಿದರಳ್ಳಿ ಪುರುಶೋತ್ತಮರು ಆಗಮಿಸಿದ್ದರು ಸಭೆಯಲ್ಲಿ ಈ ಯುವಕರ ಬೇಡಿಕೆ ಶಿವಮೊಗ್ಗ ಸಾಗರ ಬಿಹೆಚ್ ರಸ್ತೆಯ ಗಿಳಾಲಗುಂಡಿಯಿಂದ ತಮ್ಮ ಊರು ಮಾದಪುರ 12 ಕಿ.ಮಿ ಮತ್ತು ಶಿವಮೊಗ್ಗ ರಿಪ್ಪನ್ ಪೇಟೆ ಹೆದ್ದಾರಿಯಿಂದ 8 ಕಿ.ಮಿ ಇರುವ ತಮ್ಮ ಊರಿಗೆ ರಸ್ತೆ ಸೌಕಯ೯ ಸರಿ ಇಲ್ಲದ ಬಗ್ಗೆ ಮತ್ತು ಡಾಂಬರ್ ರಸ್ತೆಗೆ ಬೇಡಿಕೆ ಇಟ್ಟಿದ್ದರು.
ರಾಜಕಾರಣದ ಹೊಸ ಬಿಸಿಯಲ್ಲಿ ನಾನು ಡಾಂಬರ್ ರಸ್ತೆ ಮಾಡಿಸುವುದಾಗಿ ವೇದಿಕೆಯಲ್ಲಿ ಭರವಸೆ ನೀಡಿದಂತೆ ಅದೇ ವರ್ಷ ಜಿಲ್ಲಾ ಪಂಚಾಯತ್ ಅಧಿಕಾರಿಗಳನ್ನೆಲ್ಲ ಕಾಡಿ ಬೇಡಿ ಈ ಊರಿಗೆ ಡಾಂಬರ್ ರಸ್ತೆ ಮಾಡಿಸಿದ್ದೆ.
ರೇವಣ್ಣರಿಗೆ ಇತ್ತೀಚಿಗೆ ಭದ್ರಾವತಿ ಶಾಸಕರು ಸನ್ಮಾನ ಮಾಡಿದ ಚಿತ್ರ ಪೇಸ್ ಬುಕ್ ನಲ್ಲಿ ನೋಡಿ ಅಭಿನಂದನೆ ಹೇಳಿದಾಗ ಕಿರಿಯ ಪ್ರತಿಬಾನ್ವಿತ ಕಲಾವಿದ ಶಿಕ್ಷಕ ರೇವಣ್ಣ ನಮ್ಮ ಊರಿನ ಪ್ರತಿಷ್ಟಿತ ಕನ್ನಡ ಸಂಘ, ಅದರ ಕ್ರಿಯಾಶೀಲ ಅಧ್ಯಕ್ಷರಾಗಿದ್ದ ದಿವಂಗತ ಹಾ ಮೋ ಬಾಷಾರನ್ನ ಸ್ಮರಿಸಿ ಕೃತಜ್ಞತೆ ಹೇಳಿದ್ದನ್ನು ಇಲ್ಲಿ ಅಂಟಿಸಿದ್ದೇನೆ ಜೊತೆಗೆ ಹಳೆಯ ನೆನಪುಗಳು.
*** *** *** ***
ರೇವಣ್ಣ ಬರೆದದ್ದು...
ಸರ್ ನಾನು ಈ ಎತ್ತರಕ್ಕೆ ಬೆಳೆಯಲು ಸಹಕಾರ ಮಾಡಿದ ನನ್ನೂರು ,ಹಾಗೂ ಕಾಲೇಜು ದಿನಗಳಿಂದಲೂ ಸಹ ಆನಂದಪುರಂನ ಕನ್ನಡ ಯುವಕ ಸಂಘದ ಮುಂಚೂಣಿಯಲ್ಲಿದ್ದ ಹಿರಿಯರಾದ ನೀವು, ಸುರೇಶಣ್ಣ , ನಾಗರಾಜಣ್ಣ ,ರಾಜು ಗೌಡ್ರು ,ಎಲ್ಲದಕ್ಕಿಂತ ಮಿಗಿಲಾಗಿ ಜಾನಪದ ಸೊಗಡನ್ನು ಎಲ್ಲಾ ಕಡೆ ಪಸರಿಸುವಂತೆ ಮಾಡಿದ ಕನ್ನಡ ಅಭಿಮಾನಿ ದಿವಂಗತ ಬಾಷಾ ಅಣ್ಣನವರು ,ಹಾಗೂ ನನ್ನ ಸ್ನೇಹಿತರು ,ಹಾಗೂ ಅಂದಿನ ಕಷ್ಟದ ಕಾಲದಲ್ಲಿ ಚಾಪೆಯನ್ನು ಹೆಣೆದು ನಮ್ಮ ಜಾನಪದ ಕಲೆಗಳಾದ ಡೊಳ್ಳು ಕುಣಿತ , ಸುಗ್ಗಿ ಕುಣಿತ ,ಕೋಲಾಟ,ಇವುಗಳನ್ನು ಅಂತರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಲು ಕಾರಣರಾದ ನನ್ನ ಹುಟ್ಟೂರಾದ ಮಾದಾಪುರದ ತಾಯಂದಿರು ಹಾಗೂ ಮುಸ್ಲಿಂ ಬಾಂಧವರಿಗೆ ನಾನು ಚಿರರುಣಿಯಾಗಿದ್ದೇನೆ ಸರ್ .ಅಲ್ಲದೆ ಯಡೇಹಳ್ಳಿ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನೀವು ಸಂಗ್ಯಬಾಳ್ಯ ನಾಟಕ ಕ್ಕೆ ಅವಕಾಶ ಮಾಡಿಕೊಟ್ಟಿದ್ದೀರಿ .ಇವೆಲ್ಲವೂ ಸಹ ನನ್ನ ಏಳಿಗೆಗೆ ಕಾರಣ ಎಂದರೆ ತಪ್ಪಾಗಲಾರದು .ಸರ್ ಏಕೋ ಹೇಳ್ಬೇಕು ಅನುಸ್ತು ಹಂಚಿಕೊಂಡು ಬಿಟ್ಟಿದೀನಿ ,ನಾನು ಲೋಕಣ್ಣ ನವರ ತಮ್ಮ ದಯಮಾಡಿ ತಪ್ಪಿದ್ದರೆ ಕ್ಷಮೆಯಿರಲಿ .ಸರ್ ನೀವು ರಾಜಕರಣದ ಪರದೆಯನ್ನು ಸರಿಸಿ ಯಾರೂ ನಿರೀಕ್ಷಿಸದ ಬರಹಗಾರರಾಗಿ ಬದಲಾಗಿರುವುದು ತುಂಬಾ ಸಂತೋಷವಾಗಿದೆ ಹೀಗೂ ಇರ್ತಾರಾ ?ಧನ್ಯವಾದಗಳು ಸರ್ .
ರೇವಣ್ಣ ಮಾದಾಪುರ (ಶಿಕ್ಷಕ ಬಿ ಆರ್ ಪಿ )
Comments
Post a Comment