Skip to main content

Posts

Showing posts with the label Mr Shivananda Bekal written Historical study BEKAL KOTE.

ವಿಶ್ವ ವಿಖ್ಯಾತ ಸುಂದರವಾದ ಸದೃಡವಾದ ಬೇಕಲ ಕೋಟೆ ಒಂದು ಚಾರಿತ್ರಿಕ ಅಧ್ಯಯನ ಎಂಬ ಸಂಶೋದನ ಗ್ರಂಥ ಬರೆದ ಗಡಿನಾಡ ಕನ್ನಡಿಗ ಶಿವಾನಂದ ಬೇಕಲ್ ಗೆ ಸಮಸ್ತ ಕನ್ನಡಿಗರ ಕೃತಜ್ಞತೆಗಳು

#ಶಿವಾನಂದ_ಬೇಕಲರ_ಬೇಕಲಕೋಟೆ_ಚಾರಿತ್ರಿಕ_ಅಧ್ಯಯನ. #ಕೆಳದಿ_ಇತಿಹಾಸ_ಸ೦ಶೋದನೆಯಲ್ಲಿ_ಇದೊಂದು_ಮೈಲಿಕಲ್ಲು #ಕೆಳದಿ_ಅರಸ_ಶಿವಪ್ಪನಾಯಕರಿಂದ_ನಿರ್ಮಾಣ #ಬಗೆಹರಿದ_ಪ್ರಸಿದ್ದ_ಬೇಕಲ_ಕೋಟೆ_ವಿವಾದ.   ಕೇರಳದ ಕಾಸರಗೋಡಿನ ಸಮೀಪದ ಬೇಕಲಕೋಟೆ ವಿಶ್ವ ಪ್ರಸಿದ್ಧವಾದದು, ಇಲ್ಲಿ ಜಗತ್ತಿನ ಎಲ್ಲಾ ಭಾಷೆಯ ಸಿನಿಮಾ ಶೂಟಿಂಗ್ ಗೆ ಬರುತ್ತಾರೆ 1999 ರ ತನಕ ಈ ಕೋಟೆ ನಿರ್ಮಿಸಿದವರ ಬಗ್ಗೆ ವಿವಾದವಿತ್ತು.   ಕೇರಳದ ಕೊಲತ್ತಿರಿ ಅರಸರು ನಿರ್ಮಿಸಿದರೆಂದು ಒಂದು ವಾದ ಇನ್ನೊಂದು ಮೈಸೂರಿನ ಹುಲಿ ಟಿಪ್ಪು ಸುಲ್ತಾನರು ನಿರ್ಮಿಸಿದ್ದೆಂಬ ವಾದ.    ಆದರೆ ಬೇಕಲ ಕೋಟೆ ಕೆಳದಿ ಅರಸರಿಂದ ನಿರ್ಮಸಲ್ಪಟ್ಟಿದ್ದಾದರೂ ಅದನ್ನು ದೃಡ ಪಡಿಸುವ ಸಂಶೋದನೆ ಮತ್ತು ಕಾಳಜಿ ಇರಲಿಲ್ಲ.   ಈ ಸಂದರ್ಭದಲ್ಲೇ ಬೇಕಲದಲ್ಲೇ ಹುಟ್ಟಿ ಬೆಳೆದು ಕೇರಳದ ಕ್ಯಾಲಿಕಟ್ ನಲ್ಲಿ ಬಿಎಸ್ಸಿ ವ್ಯಾಸಂಗ ಮಾಡಿ, ಮೈಸೂರಿನಲ್ಲಿ ಬಿಎಡ್ ಓದಿ, ದಾರವಾಡದಲ್ಲಿ ಎಂ.ಎ. ಪದವಿ ಪಡೆದು, ಗುಲ್ಬರ್ಗದಲ್ಲಿ ಪಿಹೆಚ್ ಡಿ ಪಡೆದ ಮತ್ತು ಗುಲ್ಬರ್ಗ ದೂರದರ್ಶನ ಕೇಂದ್ರದಲ್ಲಿ ಅಸಿಸ್ಟೆಂಟ್ ಸ್ಟೇಷನ್ ಡೈರೆಕ್ಟರ್ ಆಗಿದ್ದ ಶಿವಾನಂದ ಬೇಕಲ್ ರಿಗೆ ಕಾಸರಗೋಡು ಜಿಲ್ಲಾದಿಕಾರಿ ಆದಿಯಾಗಿ ಅನೇಕರು ಬೇಕಲ್ ಕೋಟೆ ನಿರ್ಮಾಣ ಮಾಡಿದವರಾರು ಎಂಬ ಸಂಶೋದನೆಗೆ ಒತ್ತಾಯಿಸಿದ್ದೆ ಈ ಚಾರಿತ್ರಿಕ ಅಧ್ಯಯನದ ಪುಸ್ತಕ #ಬೇಕಲ_ಕೋಟೆ 1999 ರಲ್ಲಿ ಪ್ರಕಟ ಆ...