Skip to main content

Posts

Showing posts with the label Tender mango pickle of western ghats

Blog number 1291. ಮಲೆನಾಡಿನ ಅಪ್ಪೆ ಮಾವಿನ ಮಿಡಿಯ ಉಪ್ಪಿನಕಾಯಿ ಬಲ್ಲವನೇ ಬಲ್ಲ

#ಮಾವಿನಮಿಡಿಉಪ್ಪಿನಕಾಯಿ ಮಲೆನಾಡಿಗರಿಗೆ ಮಾತ್ರ ಗೊತ್ತಿರುವ ಹದ ಮತ್ತು ರುಚಿ#   ಪ್ರತಿ ವಷ೯ ಮಾಚ್೯ ಏಪ್ರಿಲ್ ಬ೦ದರೆ ಉಪ್ಪಿನ ಕಾಯಿ ಪ್ರಿಯರು ಅದರಲ್ಲೂ ಮಲೆನಾಡಿಗರು ಮಿಡಿ ಮಾವಿನ ಉಪ್ಪಿನ ಕಾಯಿಗಾಗಿ ಮಾವಿನ ಮಿಡಿಯ ಹುಡುಕಾಟ ಶುರು ಮಾಡುತ್ತಾರೆ ಮೊದಲಿನಂತೆ ಮಿಡಿ ಸಿಗುವ ಕಾಲ ಈಗಿಲ್ಲ, ಮಿಡಿಮಾವಿನ ಮರ ಮಿಡಿಗಾಗಿ ಕಡಿದು ನಾಶ ಮಾಡಿದ್ದು ಒಂದಾದರೆ ಊರ ಸುತ್ತಮುತ್ತಲಿನಲ್ಲಿ ಸಿಗುವ ಮಿಡಿ ಮಾವಿನ ಮಿಡಿ ಕೇಂದ್ರಗಳಾದ ರಿಪ್ಪನ್ ಪೇಟೆ ಸೇರಿ ಹಚ್ಚಿನ ಬೆಲೆಗೆ ಮಾರಾಟ ಆಗುವುದರಿಂದ ಸ್ಥಳಿಯ ಉಪ್ಪಿನ ಕಾಯಿ ಪ್ರಿಯರಿಗೆ ಉತ್ತಮ ಮಿಡಿ ಮರಿಚಿಕೆ ಆಗಿದೆ.   ಕಳೆದ ವಷ೯ ಹವಾಮಾನ ವೈಪರಿತ್ಯದಿಂದ ಒಳ್ಳೆ ಮಿಡಿ ಸಿಗಲಿಲ್ಲ, ಗೆಳೆಯ ನಾಗೇ೦ದ್ರ ಸಾಗರ್ ನೀಡಿದ ಅಶ್ವಾಸನೆ ಕೂಡ ನೆರವೇರಲಿಲ್ಲ.        ಇವತ್ತು ಈ ಮಾವಿನ ಮಿಡಿ ಪೋಟೋ ಮತ್ತು ಉಪ್ಪಿನ ಕಾಯಿ ತಯಾರಿಸಿ ಭರಣಿಗೆ ತುಂಬುವ ವಿಡಿಯೊ ನೋಡಿದ ಮೇಲೆ ಈ ವಷ೯ ಮಾವಿನ ಮಿಡಿಗೆ ನಾನೇ ಪೀಲ್ಡಿಗೆ ಇಳಿಯುವ ತೀಮಾ೯ನ ಮಾಡಿದ್ದೇನೆ ಅಂದರೆ ಮಾವಿನ ಮಿಡಿ ಹುಡುಕಿ ಖರೀದಿಸಲು.