ಹಿಮಾಲಯಕ್ಕೆ_ಹೋಗುವುದಕ್ಕಿಂತ_ಮೊದಲು_ನಿಮ್ಮ_ಮನೆಯನ್ನು_ಹಿಮಾಲಯವಾಗಿಸಿ!... ಬ್ರಾಹ್ಮಿ_ಮಹೂರ್ತದ_ಸಮಯದ_ಸದುಪಯೋಗ. ಅನೇಕ ಗೆಳೆಯರು ಈ ವರ್ಷದ ಶ್ರಾವಣ ಮಾಸದ ನಿಮ್ಮ ಹೊಸ ಪ್ರಯೋಗ ಏನು? ಅಂತ ಕೇಳುತ್ತಿದ್ದಾರೆ. ಈ ವರ್ಷ ಶ್ರಾವಣ ಮಾಸ 13- ಆಗಸ್ಟ್ -2026 ರ ಗುರುವಾರದಿಂದ ಪ್ರಾರಂಭ ಆಯಿತು ಈ ವರ್ಷ ನನ್ನ ಹೊಸ ಪ್ರಯೋಗ #ಬ್ರಾಹ್ಮಿ_ಮಹೂರ್ತದ_ಸಮಯದ ಸದುಪಯೋಗದ ದ ಕೆಲಸ ಪ್ರಾರಂಬಿಸಿ ಇವತ್ತಿಗೆ 25 ಆಗಸ್ಟ್ ಗೆ 13 ದಿನ ಆಯಿತು. ಬೆಳಿಗ್ಗೆ 3.30 ಕ್ಕೆ ಏಳುವುದು, ಸ್ನಾನ ಮುಗಿಸಿ ಪೂಜೆ - ಮಂಗಲಾರತಿ ನಂತರ ಸಿದ್ದ ಸಮಾದಿಯೋಗದ ವಿಭಾಗಿಯಾ ಪ್ರಾಣಯಾಮ,ಮುದ್ರಾ ಪ್ರಾಣ ಯಾಮ_ನಾಡಿಶೋಧನಾ / ಸುಖ ಪ್ರಾಣಯಾಮ - ಕಪಾಲಭಾತಿ - 15 ನಿಮಿಷದ ಧ್ಯಾನ ನಂತರ ಓದು ಬರಹ, ಶಂಭೂ ರಾಮನ ಜೊತೆ ಒಂದು ಗಂಟೆ ವಾಕಿಂಗ್. ಒಂದು ಮುಷ್ಟಿ ಮೆಂತೆ -ಹೆಸರುಕಾಳಿನ ಮೊಳಕೆ, 8-10 ಒಣ ಖರ್ಜೂರ ಮತ್ತು ಒಂದು ಕಪ್ ಹಾರ್ಲಿಕ್ಸ್ ಕುಡಿಯುತ್ತೇನೆ ಯಾಕೆಂದರೆ ಕಾಫಿ ಟೀ ಈ ತಿಂಗಳು ಕುಡಿಯುವುದಿಲ್ಲ. ವಾರದಲ್ಲಿ ಸೋಮವಾರ ಮತ್ತು ಗುರುವಾರ ಉಪವಾಸ, ರಾತ್ರಿ ಊಟ ತ್ಯಜಿಸಿ ಅನೇಕ ವರ್ಷ ಆಯಿತು ಅದು ಮುಂದುವರಿದಿದೆ. ಬೆಳಿಗ್ಗೆ ಒಂದು ಇಡ್ಲಿ + ಒಂದು ಸಣ್ಣ ಕಪ್ ಪಲಾವ್, ಮಧ್ಯಾಹ್ನ 3 ರಿಂದ 4 ರ ಒಳಗೆ ಅನ್ನ ತರಕಾರಿ ಸಾಂಬಾರ್ ಪಲ್ಯ ಸೇವಿಸುತ್ತೇನೆ ಇದು ಅನೇಕ ವರ್ಷದ ಅಭ್ಯಾಸ ಆಗಿದೆ. ...