Skip to main content

Posts

Showing posts with the label He is God chaild

Blog number 899. ದೇವರ ಮಗನಾದ ನಾರಾಯಣ ಅಕಸ್ಮಿಕವಾಗಿ ಅಪಾಯಕಾರಿ ಅಪಘಾತ ವಲಯದಲ್ಲಿ ನಮಗೆ ದೊರೆತ ಪ್ರೀತಿಯ ಸಹೋದರ, ನಮಗೂ ಮತ್ತು ನಮ್ಮ ಸಂಸ್ಥೆಯ ಎಲ್ಲರಿಗೂ ಪ್ರೀತಿ ಪಾತ್ರ ನಾರಾಯಣ್ ಪ್ರದಾನ್

#ಎಲ್ಲಾ_ಸಂಬಂದಗಳಿಗಿಂತ_ನನಗೆ_ಈ_ಸಂಬಂದ_ತುಂಬಾ_ಇಷ್ಟ. #ಅಕಸ್ಮಿಕವಾಗಿ_ರಸ್ತೆಯಲ್ಲಿ_ಯಾವುದೇ_ಕ್ಷಣದಲ್ಲಿ_ಅಪಘಾತದಿಂದ_ಜೀವ_ಕಳೆದುಕೊಳ್ಳುವ_ಸಂದರ್ಭದಲ್ಲಿ_ಸಿಕ್ಕಿದವ #ಹಿಂದಿನ_ಜನ್ಮದಲ್ಲಿ_ನಾನು_ಇವನ_ಬಾಕಿದಾರನಿರಬಹುದು. #ಹನ್ನೆರೆಡು_ವರ್ಷದಿಂದ_ನನ್ನ_ಕಿರಿಯ_ಸಹೋದರನಾಗಿ_ಇದ್ದಾನೆ. #ದೃಷ್ಟಿ_ಸಾಮರ್ಥ್ಯ_ಶೇಕಡಾ_2ಕ್ಕಿಂತ_ಕಡಿಮೆ_ಇದ್ದರೂ_ಬುದ್ದಿವಂತ. #ಇವನು_ದೇವರ_ಮಗ_ನಮಗೂ_ನಮ್ಮ_ಸಂಸ್ಥೆಯ_ಎಲ್ಲರಿಗೂ_ಇವನು_ಪ್ರೀತಿಯ_ನಾರಾಯಣ.      ಹನ್ನೆರಡು ವರ್ಷದ ಹಿಂದೆ ಇದೇ ದಿನ ಶಿವಮೊಗ್ಗದಿಂದ ನಮ್ಮ ಊರಿಗೆ ನಾನು ಮತ್ತು ನನ್ನ ಗೆಳೆಯರಾದ ಅಮೀರ್ ವಾಪಸ್ಸಾಗುತ್ತಿದ್ದಾಗ ಶಿವಮೊಗ್ಗದ ಸಿಂಹದಾಮದ ಎದರು ರಾಷ್ಟ್ರೀಯ ಹೆದ್ದಾರಿ ನವೀಕರಣಕ್ಕಾಗಿ ಎಡ ಭಾಗದ ರಸ್ತೆ ಅರ್ದ ಭಾಗ ಒಂದಾಳು ಆಳ ತೆಗೆದಿದ್ದರು, ಎಲ್ಲಾ ವಾಹನಗಳು ಬಲ ಬಾಗದ ಅರ್ಧ ರಸ್ತೆಯಲ್ಲಿ ಕಷ್ಟದಿಂದ ಚಲಿಸುತ್ತಿದ್ದವು, ಮೈ ಮರೆತು ಎಡಕ್ಕೆ ಹೊರಳಿದರೆ ಆಳೆತ್ತರದ ರಸ್ತೆ ಕಂದಕಕ್ಕೆ ಬೀಳಬೇಕು ಜನರು ಆಕಡೆ ಚಲಿಸದಂತೆ ರೆಡಿಯಂ ಟೇಪ್ ಕಟ್ಟಿದ್ದರು.    ಆಗ ಮೈನ್ಸ್ ಲಾರಿಗಳ ಒಡಾಟದ ಅಭ೯ಟ ಆದ್ದರಿಂದ ಶಿವಮೊಗ್ಗ ಸಾಗರ ಮಾರ್ಗ ಡೆಂಜರ್ ಮಾರ್ಗವೆ ಆಗಿತ್ತು.   ನಾವು ಈ ಸ್ಥಳಕ್ಕೆ ಬರುವಾಗ ಕತ್ತಲಾಗುತ್ತಿತ್ತು ಸುಮಾರು 7 ಗಂಟೆ, ಜಿಟಿ ಜಿಟಿ ಮುಂಗಾರು ಮಳೆ, ಎದುರಿನಿಂದ ಬರುವ ವಾಹನಗಳ ಪ್ರಖರ ಬೆಳಕು ಒಟ್ಟಾರೆ ಎಂತಹ ಚಾಲಕರು ಭಯ ಪಡುವ ರಸ್ತೆಯ ಮದ್ಯದಲ್ಲ...