Skip to main content

Posts

Showing posts with the label Western ghats rice balls called as Undekadabu prepare by Rajamudi rice gives special taste and aroma.

Blog number 872, ಮಲೆನಾಡಿನ ಸಂಪ್ರದಾಯಿಕ ಉಂಡೆ ಕಡಬು ರಾಜಮುಡಿ ಅಕ್ಕಿಯಲ್ಲಿ ತಯಾರಿಸಿದರೆ ವಿಶಿಷ್ಟ ರುಚಿ ಮತ್ತು ಘಮ ಇರುತ್ತದೆ.

#ರಾಜಮುಡಿ_ಅಕ್ಕಿಯಲ್ಲಿ_ಮಲೆನಾಡ_ಉ೦ಡೆಕಡಬು #ಉಂಡೆಕಡಬು_ಪಾಲೀಶ್_ಅಕ್ಕಿಯಲ್ಲಿ_ನೋಡಲು_ಚೆಂದ #ಸೆಮಿಪಾಲೀಶ್_ಅಕ್ಕಿ_ಅಥವ_ಕೆಂಪಕ್ಕಿ_ಉಂಡೆ_ಕಡುಬು_ಮಾತ್ರ_ಬಲುರುಚಿ.    ಮೈಸೂರಿನಲ್ಲಿ ಇರುವ ಇಂಜಿನಿಯರ್ ನಟರಾಜ್ ಒಂದು ಕಾಲದ ಮೈಸೂರು ಮಹಾರಾಜರ ನಿತ್ಯ ಊಟದ ಅಕ್ಕಿ ರಾಜಮುಡಿ ಅಕ್ಕಿ ಇವತ್ತು ಎಲ್ಲರಿಗೂ ಸುಲಭವಾಗಿ ಸಿಗುವು೦ತಾ ಅನುಕೂಲ ಮಾಡಿದ್ದಾರೆ.   ಕಳೆದ ಎರಡು ವರ್ಷದಿಂದ ನನಗೆ ಇವರ ಸೆಮಿ ಪಾಲೀಶ್ ರಾಜಮುಡಿ ಅಕ್ಕಿ VRLನಲ್ಲಿ ಕಳಿಸುತ್ತಾರೆ.   ಮಲೆನಾಡಿನ ಪಶ್ಚಿಮ ಘಟ್ಟದ ಉಂಡೆ ಕಡಬು ತುಂಬಾ ಪ್ರಸಿದ್ದ ಆದರೆ ಈಗಿನ ಪುಲ್ ಪಾಲೀಶ್ ಅಕ್ಕಿಯ ಉಂಡೆ ಕಡಬು ತನ್ನ ಮೂಲ ರುಚಿ ಕಳೆದುಕೊಂಡಿದೆ.   ಈಗಿನ ಮಕಳು "ಅಮ್ಮ ಇವತ್ತೇನೆ ತಿಂಡಿ" ಎಂದು ಕೇಳುವುದು ಅದಕ್ಕೆ ಅಮ್ಮ "ಇವತ್ತು ಉಂಡೆ ಕಡಬು ಚಟ್ನಿ" ಅಂದಾಗ ಮಕ್ಕಳು ಮುಖ ತಿರುಗಿಸುವ ಮಲ್ನಾಡ್ ಕಾರ್ಟೂನ್ ನಲ್ಲಿ ಪೂಜಾ ಹರೀಶ್ ರ ವಿಡಿಯೋ ವೈರಲ್ ಆಗಿತ್ತು.   ನನಗೂ ಉಂಡೆ ಕಡಬು ಅಂದರೆ ಆಲಸ್ಯ ಆಗಿತ್ತು, ಯಾಕಾದರೂ ಮನೇಲಿ ಮಾಡುತ್ತಾರೆ ಅಂತ ಅನ್ನಿಸುತ್ತಿತ್ತು.   ಪಾಲೀಶ್ ಅಕ್ಕಿಯ ಉಂಡೆ ಕಡಬು ನೋಡಲು ಅಚ್ಚ ಶುಭ್ರ ಬಿಳುಪು ಆದರೆ ರುಚಿ - ಅರೋಮ ಮಾತ್ರ ಇರುತ್ತಿರಲಿಲ್ಲ.   ಈಗ ರಾಜ ಮುಡಿ ಅಕ್ಕಿಯಲ್ಲಿ ಮಾಡುವ ಉಂಡೆ ಕಡುಬಿನ ರುಚಿಯೇ ಉಂಡೆ ಕಡಬು ತಿನ್ನಬೇಕೆನ್ನಿಸುತ್ತದೆ ಅದರ ಆರೋಮ ಕೂಡ ವಿಶಿಷ್ಟ.   ಇ...